Thursday, June 1, 2023
Homeಕರಾವಳಿಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳಿ ಪ್ಲೀಸ್…!!!ಮಂಗಳೂರಿಗರೇ ನಾಳೆ, ನಾಡಿದ್ದು ನೀರು ಬಂದ್…!!!

ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳಿ ಪ್ಲೀಸ್…!!!ಮಂಗಳೂರಿಗರೇ ನಾಳೆ, ನಾಡಿದ್ದು ನೀರು ಬಂದ್…!!!

- Advertisement -


Renault

Renault
Renault

- Advertisement -

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ನೀರು ಸರಬರಾಜು ವ್ಯವಸ್ಥೆಯ ತುಂಬೆ ಹೆಚ್‍ಎಲ್‍ಪಿಎಸ್-1 18ಎಮ್‍ಜಿಡಿ ರೇಚಕ ಸ್ಥಾವರದಿಂದ ಬೆಂದೂರು, ಪಣಂಬೂರು ಕಡೆಗೆ ನೀರು ಸರಬರಾಜು ಮಾಡುವ 1000 ವ್ಯಾಸದ ಮುಖ್ಯ ಕೊಳವೆಯು ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಕಣ್ಣೂರು ಶೆಲ್ ಪೆಟ್ರೋಲ್ ಪಂಪ್ ಹತ್ತಿರ ಸೋರುವಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಕೊಳವೆ ದುರಸ್ತಿ ಕಾರ್ಯವು ಫೆಬ್ರವರಿ 19 ರಂದು ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 20 ರಂದು ಬೆಳಿಗ್ಗೆ 6 ಗಂಟೆಯವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಸುರತ್ಕಲ್, ಪಣಂಬೂರು, ಕಾನಾ ಬಾಳ, ಕೂಳೂರು, ಕಾವೂರು ಭಾಗಶಃ, ಬೆಂದೂರು ಭಾಗಶಃ, ಕಾರ್‍ಸ್ಟ್ರೀಟ್, ಕೋಡಿಕಲ್, ಆಕಾಶಭವನ ಇತ್ಯಾದಿ ಪ್ರದೇಶಗಳಲ್ಲಿ ನೀರಿನ ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments