Tuesday, September 28, 2021
HomeUncategorizedಪ್ರಧಾನಿ ಮೋದಿಯಿಂದ ಮತ್ತೊಂದು ಪ್ರಮುಖ ಘೋಷಣೆ… ...

ಪ್ರಧಾನಿ ಮೋದಿಯಿಂದ ಮತ್ತೊಂದು ಪ್ರಮುಖ ಘೋಷಣೆ… ಆಗಸ್ಟ್ 14 ವಿಭಜನೆಯ ಕರಾಳ ನೆನಪಿನ ದಿನವಾಗಿ ಪರಿಗಣನೆ…

- Advertisement -
Renault
- Advertisement -
Home Plus
- Advertisement -

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 14 ಅನ್ನು ಇನ್ನು ಮುಂದೆ ‘ದೇಶ ವಿಭಜನೆಯ ಕರಾಳ ನೆನಪಿನ ದಿನ’ವೆಂದು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ವಿಭಜನೆಯ ನೋವನ್ನು ದೇಶವು ಎಂದಿಗೂ ಮರೆಯುವುದಿಲ್ಲ. ದ್ವೇಷ ಮತ್ತು ಹಿಂಸೆಯಿಂದಾಗಿ, ನಮ್ಮ ಲಕ್ಷಾಂತರ ಸಹೋದರ-ಸಹೋದರಿಯರು ಸ್ಥಳಾಂತರಗೊಂಡರು. ಅದೆಷ್ಟೋ ಮಂದಿ ಜೀವ ಕಳೆದುಕೊಂಡರು. ಆ ಜನರ ಹೋರಾಟ ಮತ್ತು ತ್ಯಾಗದ ಸ್ಮರಣೆಯಾಗಿ ಆಗಸ್ಟ್​ 14 ವಿಭಜನೆಯ ಕರಾಳ ನೆನಪಿನ ದಿನವನ್ನಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

ಆಗಸ್ಟ್​ 14, 1947 ರಂದು ಭಾರತ ಮತ್ತು ಪಾಕಿಸ್ತಾನ ವಿಭಜನೆಯಾಯಿತು. ಪಾಕಿಸ್ತಾನವನ್ನು 14 ಆಗಸ್ಟ್ 1947 ರಂದು ಮತ್ತು ಭಾರತವನ್ನು 15 ಆಗಸ್ಟ್ 1947 ರಂದು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಲಾಯಿತು.

ವಿಭಜನೆಯ ಭಯಾನಕ ನೆನಪಿನ ದಿನವು ಸಾಮಾಜಿಕ ವಿಭಜನೆ, ಅಸಾಮರಸ್ಯದ ವಿಷವನ್ನು ತೆಗೆದುಹಾಕುವ ಅಗತ್ಯವನ್ನು ನೆನಪಿಸುತ್ತದೆ. ಏಕತೆ, ಸಾಮಾಜಿಕ, ಸಾಮರಸ್ಯ ಮತ್ತು ಮಾನವ ಸಬಲೀಕರಣದ ಮನೋಭಾವವನ್ನು ಇನ್ನಷ್ಟು ಬಲಪಡಿಸಲಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments