Sunday, September 24, 2023
Homeರಾಜಕೀಯಮೋದಿಯಿಂದ ಜೈ ಶ್ರೀ ರಾಮ್ ಘೋಷಣೆ: ದೀದಿ ಬಹಿಷ್ಕಾರ

ಮೋದಿಯಿಂದ ಜೈ ಶ್ರೀ ರಾಮ್ ಘೋಷಣೆ: ದೀದಿ ಬಹಿಷ್ಕಾರ

- Advertisement -



Renault

Renault
Renault

- Advertisement -

ಕೋಲ್ಕತಾ(ಜ.23): ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳ ನಡುವಿನ ರಾಜಕೀಯ ಗುದ್ದಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ ಪ್ರಯುಕ್ತ ಕೋಲ್ಕತಾದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರದಾನಿ ಮೋದಿ ಹಾಗೂ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಭಾಷಣ ಬಹಿಷ್ಕರಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಮತಾ ಸರ್ಕಾರಕ್ಕೆ ಮತ್ತೊಂದು ಶಾಕ್, ರಾಜೀನಾಮೆ ಸಲ್ಲಿಸಿದ ಸಚಿವ!.ನೇತಾಜಿ ಸುಭಾಷ್ ಚಂದ್ರ ಬೋಸ್ ಮ್ಯೂಸಿಯಂ ಉದ್ಘಾಟಿಸಿದ ಪ್ರಧಾನಿ ಮೋದಿ, ಬಹುದೊಡ್ಡ ರ್ಯಾಲಿಯಲ್ಲಿ ಪಾಲ್ಕೊಂಡಿದ್ದಾರೆ. ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಒಲ್ಲದ ಮನಸ್ಸಿನಿಂದ ಪಾಲ್ಗೊಂಡ ಮಮತಾ ಬ್ಯಾನರ್ಜಿ ಒಳಗಿದ್ದ ಅಸಮಾಧಾನ ಸ್ಫೋಟಿಸಿದ್ದಾರೆ.

ಕೋಲ್ಕತಾದ ವಿಕ್ಟೋರಿಯಾ ಮೆಮೋರಿಯಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಭಾಷಣ ಬಹಿಷ್ಕರಿಸಿದ್ದಾರೆ.ನೇತಾಜಿ ಜಯಂತಿ; ಹರಿಪುರಕ್ಕೂ ಸುಭಾಷ್ ಚಂದ್ರಬೋಸ್‌ಗಿರುವ ನಂಟಿನ ಕತೆ ಹೇಳಿದ ಮೋದಿ!ಮಮತಾ ಬ್ಯಾನರ್ಜಿಯನ್ನು ಭಾಷಣಕ್ಕೆ ಆಹ್ವಾನಿಸಿದ ವೇಳೆ ಜೈ ಶ್ರೀರಾಮ್ ಘೋಷಣೆ ಮೊಳಗಿದೆ. ಇದರಿಂದ ಕೆರಳಿ ಕೆಂಡವಾದ ಮಮತಾ ಬ್ಯಾನರ್ಜಿ, ಆಮಂತ್ರಿಸಿದ ಅತಿಥಿಗಳನ್ನು ಅವಮಾನಿಸಬಾರದು. ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದೆ. ರಾಜಕೀಯ ಕಾರ್ಯಕ್ರಮವಲ್ಲ, ಜೈ ಹಿಂದ್ ಎಂದು ಹೇಳಿ ತಮ್ಮ ಭಾಷಣ ಮುಗಿಸಿದರು.ಕಾರ್ಯಕ್ರಮಕ್ಕೆ ಆಹ್ವಾನಿಸಿ ಕೇಂದ್ರ ಸರ್ಕಾರ ಅಮಾನಿಸಲಾಗಿದೆ ಎಂದು ಪರೋಕ್ಷವಾಗಿ ಕೂಗಿದ್ದಾರೆ. ಈ ಮೂಲಕ ಕೇಂದ್ರ ಹಾಗೂ ಪಶ್ಚಿಮ ಬಂಗಾಳ ನಡುವಿನ ಗುದ್ದಾಟಕ್ಕೆ ಮತ್ತೊಂದು ಕಾರಣ ಸಿಕ್ಕಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments