ಮಾನವೀಯತೆ ಮೆರೆದ ಪುತ್ತೂರು ನಗರ ಠಾಣಾ ಪೊಲೀಸ್ ಸಿಬ್ಬಂದಿಗಳು…!!!
ಪೊಲೀಸರ ಕಾರ್ಯಕ್ಕೆ ಸಾರ್ವನಿಕರ ಮೆಚ್ಚುಗೆ…!!!
ಪುತ್ತೂರು: ಗಾಯಗೊಂಡು ಅನಾಥವಾಗಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಪುತ್ತೂರು ನಗರ ಠಾಣೆಯ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಹೌದು ತಲೆ ಹಾಗೂ ಮುಖದ ಭಾಗದಲ್ಲಿ ಗಾಯಗೊಂಡು ಪುತ್ತೂರು ಹೊರವಲಯದ ಕೋಡಿಂಬಾಡಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಬಿದ್ದಿದ್ದರು. ಇದನ್ನ ಕಂಡ ಪುತ್ತೂರು ನಗರ ಠಾಣೆಯ ಸಿಬ್ಬಂದಿಗಳಾದ ಶ್ರೀಶೈಲ ಮತ್ತು ಬಸವರಾಜ್, ತಕ್ಷಣ
ಅಂಬ್ಯುಲೆನ್ಸ್ ಗೆ ಕರೆ ಮಾಡಿದರು.
ಆದ್ರೆ ತುರ್ತು ಸಮಯಕ್ಕೆ ಆಂಬುಲೆನ್ಸ್ ತಲುಪದ ಕಾರಣ ತಮ್ಮ ಜೇಬಿನ ದುಡ್ಡಿನಿಂದ ಅಟೋ ಮೂಲಕ ಆಸ್ಪತ್ರೆ ಸೇರಿಸಿದ್ದಾರೆ. ಬಳಿಕ ಅವರ ಚಿಕಿತ್ಸೆಗೆ ಸಹಕರಿಸಿದ್ದಾರೆ.
ಇದೀಗ ಈ ಪೋಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.