Tuesday, June 6, 2023
Homeಕ್ರೈಂಬ್ಲೂಫಿಲಂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಹೆಸರಾಂತ ನಟಿ ಅರೆಸ್ಟ್...!!!

ಬ್ಲೂಫಿಲಂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಹೆಸರಾಂತ ನಟಿ ಅರೆಸ್ಟ್…!!!

- Advertisement -


Renault

Renault
Renault

- Advertisement -

ಮುಂಬಯಿ : ತನ್ನ ವೆಬ್‌ ಸೈಟ್‌ ನಲ್ಲಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸುವ ಮತ್ತು ಅಪ್‌ ಲೋಡ್ ಮಾಡುವಲ್ಲಿ ಭಾಗಿಯಾಗಿದ್ದ ವೆಬ್-ಸೀರೀಸ್ ‘ಗಂಥಿ ಬಾತ್’ ಖ್ಯಾತಿಯ ನಟಿ ಗೆಹಾನಾ ವಸಿಷ್ಠ ಅವರನ್ನು ಮುಂಬೈ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ.

ಭಾನುವಾರ (ಫೆ. 7) ನ್ಯಾಯಾಲಯದಲ್ಲಿ ನಟಿಯನ್ನು ಹಾಜರುಪಡಿಸಲಾಗುತ್ತದೆ ಎಂದು ಎಎನ್‌ಐ ವರದಿ ಮಾಡಿದ್ದರೇ, ಪೊಲೀಸರು ಕೆಲವು ಮಾಡೆಲ್‌ಗಳು ಮತ್ತು ಹಲವು ನಟಿಯರನ್ನು ಸಹ ಬಂಧಿಸಿದ್ದಾರೆ ಎಂದು ಟಿವಿ 9 ವರದಿ ಮಾಡಿದೆ.

ಫಿಲ್ಮ್ ಶೂಟ್ ನೆಪದಲ್ಲಿ ಮಾಧ್ ದ್ವೀಪದ ಕೆಲವು ಬಂಗಲೆಗಳನ್ನು ವೇಶ್ಯಾವಾಟಿಕೆಗೆ ಮತ್ತು ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಬಳಸಲಾಗುತ್ತಿದೆ ಎಂದು ಪೊಲೀಸರಿಗೆ ಸೂಚನೆ ಸಿಕ್ಕಿದೆ.

ಹಾಗೂ ಅಶ್ಲೀಲ ವಿಡಿಯೋಗಳಲ್ಲಿ ಪಾತ್ರವಹಿಸುವಂತೆ ನಮ್ಮನ್ನು ಒತ್ತಾಯಿಸಿದ್ದಾರೆ ಎಂದು ಕೆಲವು ಸಂತ್ರಸ್ತರಿಂದ ಪೊಲೀಸರಿಗೆ ದೂರುಗಳು ಬಂದಿವೆ. ಮಾಹಿತಿಯ ಆಧಾರದ ಮೇಲೆ, ಪೊಲೀಸರು ಫೆಬ್ರವರಿ 5 ರಂದು ಮಲಾಡ್‌ನ ಮಾಧ್ ದ್ವೀಪದಲ್ಲಿ ದಾಳಿ ನಡೆಸಿದ್ದರು. ಈ ಸಮಯದಲ್ಲಿ ಯುವತಿಯರಿಗೆ ಚಲನಚಿತ್ರಗಳಲ್ಲಿ ಪಾತ್ರಗಳನ್ನು ನೀಡುವ ನೆಪದಲ್ಲಿ ಆಮಿಷ ಒಡ್ಡುವ ಗ್ಯಾಂಗ್ ಬಗ್ಗೆ ತಿಳಿದುಬಂದಿದೆ.

ಗ್ಯಾಂಗ್ ಈ ಯುವತಿಯರನ್ನು ಬಂಗಲೆಗಳಿಗೆ ಕರೆದೊಯ್ಯುತ್ತಿತ್ತು, ಅಲ್ಲಿ ಅವರು ಯುವತಿಯರನ್ನು ಅಶ್ಲೀಲ ಚಿತ್ರಗಳಿಗಾಗಿ ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments