ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿ ಬೆಳ್ಳಾರೆಯಲ್ಲಿ ಕೊಲೆಯಾಗಿದ್ದಂತ ಪ್ರವೀಣ್ ನೆಟ್ಟಾರು ಹತ್ಯೆ ಕುರಿತಂತೆ ಸ್ಪೋಟಕ ಮಾಹಿತಿಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಬಿಚ್ಚಿಟ್ಟಿದ್ದಾರೆ. ಪ್ರವೀಣ್ ನೆಟ್ಟಾರು ಹೆತ್ಯೆಗೈದಿದ್ದು ಕೇರಳಿಗಲ್ಲ.ಬದಲಾಗಿ ಸ್ಥಳೀಯರೇ ಎಂಬುದಾಗಿ ಹೇಳಿದ್ದಾರೆ.
ಈ ಕುರಿತಂತೆ ಖಾಸಗಿ ಸುದ್ದಿವಾಹಿನಿಗೆ ನೀಡಿರುವಂತ ಸಂದರ್ಶನದಲ್ಲಿ ಮಾತನಾಡಿರುವಂತ ಅವರು, ಜುಲೈ.26ರಂದು ರಾತ್ರಿ ಪ್ರವೀಣ್ ನೆಟ್ಟಾರು ಕೊಲೆಯಾಗಿತ್ತು. ಬೆಳ್ಳಾರೆ ಗ್ರಾಮದಲ್ಲಿಯೇ ಹತ್ಯೆ ಮಾಡಲಾಗಿದೆ. ಕೊಂದವರು ಕೇರಳದವರು ಎನ್ನಲಾಗಿತ್ತು. ಆದ್ರೇ ಪ್ರವೀಣ್ ನೆಟ್ಟಾರು ಕೊಂದವರು ಸ್ಥಳೀಯರು, ಕೇರಳದವರು ಅಲ್ಲ ಎಂಬುದಾಗಿ ಹೇಳಿದ್ದಾರೆ.
ಅಂದಹಾಗೇ ದಕ್ಷಿಣ ಕನ್ನಡ ಜಿಲ್ಲೆಯ ನೆಟ್ಟಾರುವಿನಲ್ಲಿ ಪ್ರವೀಣ್ ಹತ್ಯೆಯಾದ ಬಳಿಕ, ಬೆಳ್ಳಾರೆಯಲ್ಲಿ ಬಂದ್ ಮಾಡಿ ಹಿಂದೂ ಸಂಘಟನೆಯ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಅನೇಕ ಕಾರ್ಯಕರ್ತರು ಬಿಜೆಪಿ ಸ್ಥಳೀಯ ಸಂಘಟನೆಗಳಿಗೆ ರಾಜೀನಾಮೆ ಕೂಡ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಇಂದು ಸ್ಪೋಟಕ ಮಾಹಿತಿಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಬಿಚ್ಚಿಟ್ಟಿದ್ದಾರೆ.
ಈ ಹತ್ಯೆಯನ್ನು ಮಾಡಿದವರು ಹಿಂದೂ ಸಮಾಜದವರಲ್ಲ, ಮುಸ್ಲಿಮ್ ವ್ಯಕ್ತಿಯೇ ಆಗಿರಬೇಕೆಂದು ಪ್ರಾರಂಭದಿಂದಲೇ ಮಾಧ್ಯಮದವರೂ, ಸಂಘಟನೆಗಳೂ ಬಿಂಬಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿವೆ. ಆದರೆ ಇದು ದಾರಿ ತಪ್ಪಿಸುವ ಕೆಲಸ ಆಗಿರಲೂ ಬಹುದು. ಇದು ಒಳಗಿನವರ ಕೆಲಸವಾಗಿರಬಹುದು ಎಂಬ ನಿಟ್ಟಿನಲ್ಲಿ ಕೂಡಾ ಗಮನ ಹರಿಸಬೇಕಾಗಿದೆ.