ಬೆಂಗಳೂರು: ಪ್ರೊ| ಭಗವಾನ್ ಭಾರತದಲ್ಲಿ ಹುಟ್ಟಿರುವುದು ಅವರ ಪುಣ್ಯ. ಪಾಕಿಸ್ಥಾನದಲ್ಲಾಗಿದ್ದರೆ ಅವರ ತಲೆ ಕಡಿಯುತ್ತಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಗವಾನ್‌ಗೆ ಮಸಿ ಬಳಿದಿರುವ ಕ್ರಮ ಸರಿಯಲ್ಲ. ಅದನ್ನು ಸಮರ್ಥಿಸಿ ಕೊಳ್ಳುವುದಿಲ್ಲ. ಆದರೆ ಭಗವಾನ್ ಕೃತ್ಯವನ್ನು ಅವರ ಮನೆಯವರು ಹಾಗೂ ಮಕ್ಕಳೂ ಒಪ್ಪುವುದಿಲ್ಲ ಎಂದರು.
ವಕೀಲೆಗೆ ನೋಟಿಸ್
ಬೆಂಗಳೂರು : ಪ್ರಗತಿಪರ ಚಿಂತಕ ಪ್ರೊ|ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯವಾದಿ ಮೀರಾ ರಾಘವೇಂದ್ರ ಅವರಿಗೆ ಕೇಂದ್ರ ವಿಭಾಗದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಡಿಸಿಪಿ ಎಂ.ಎನ್.ಅನುಚೇತ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಈ ಸಂಬಂಧ ನೋಟಿಸ್ ತಲುಪಿದ 3 ದಿನಗಳ ಒಳಗೆ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್‌ನಲ್ಲಿ ಉಲ್ಲೇಖೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.