Tuesday, September 28, 2021
Homeಕರಾವಳಿರಸ್ತೆ ದುರಸ್ತಿಗೆ ಕ್ಲಪ್ತ ಸಮಯದಲ್ಲಿ ಸ್ಪಂದಿಸದ ಜನಪ್ರತಿನಿದಿಗಳ ವಿರುದ್ದ ಸಾರ್ವಜನಿಕರಿಂದ ಪ್ರತಿಭಟನೆ… ಶಾಸಕರಲ್ಲಿ ಸಮಸ್ಯೆ...

ರಸ್ತೆ ದುರಸ್ತಿಗೆ ಕ್ಲಪ್ತ ಸಮಯದಲ್ಲಿ ಸ್ಪಂದಿಸದ ಜನಪ್ರತಿನಿದಿಗಳ ವಿರುದ್ದ ಸಾರ್ವಜನಿಕರಿಂದ ಪ್ರತಿಭಟನೆ… ಶಾಸಕರಲ್ಲಿ ಸಮಸ್ಯೆ ಬಗೆಹರಿಸಲು ಮನವಿ, ರಸ್ತೆಯಲ್ಲಿ ಬಾಳೆ ನೆಟ್ಟು ಆಕ್ರೋಶ…

- Advertisement -
Renault
- Advertisement -
Home Plus
- Advertisement -

ಬಂಟ್ವಾಳ : ಮಾಣಿ ಗ್ರಾಮದ ಮಾಣಿ- ಲಕ್ಕಪ್ಪಕೋಡಿ ಅರ್ಬಿ ಪಂಚಾಯತ್ ರಸ್ತೆಯಲ್ಲಿ ಜನರು ನಡೆದಾಡಲು ಸಾದ್ಯವಿಲ್ಲದಷ್ಟು ಹದೆಗೆಟ್ಟಿದೆ. ಈ ಸಮಯದಲ್ಲಿ ಯಾವುದೇ ರೀತಿಯಲ್ಲೂ ಸ್ಪಂದಿಸದ ಜನಪ್ರತಿನಿದಿಗಳು ಮತ್ತು ಪಂಚಾಯತ್ ಸದಸ್ಯರ ವಿರುದ್ದ ಸ್ತಳೀಯ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಕೆಸರು ತೆಗೆದು ಬಾಳೆ ನಟ್ಟು ಆಕ್ರೋಶ ವ್ಯಕ್ತಪಡಿಸಿ ವಾಹನಗಳ ಸಂಚಾರಕ್ಕೆ ತೊಡಕಾದ್ದ ಕೆಸರು ಸಾಂಕೇತಿಕವಾಗಿ ತೆಗೆದು ಶಾಂತಿಯುತವಾಗಿ ಪ್ರತಿಭಟಿಸಿದರು.

ನಿನ್ನೆ ಹಿರಿಯ ನಾಗರೀಕ ಮಹಿಳೆಯೋರ್ವರ ಕಾಲು ಕೆಸರಲ್ಲಿ ಹೂತುಬಿದ್ದುದನ್ನು ನೋಡಿ ಮನನೊಂದು ಸ್ತಳೀಯ ನಿವಾಸಿಗಳೆ ಸ್ವಯಂ ಪ್ರೇರಿತರಾಗಿ ಕೆಸರು ತೆಗೆದು ಬಾಳೆ ಗಿಡ ನಟ್ಟು ಆಕ್ರೋಶ ವ್ಯಕ್ತಪಡಿಸಿದರು,ಎಷ್ಟೋ ಬಾರಿ ಮನವಿ ಸಲ್ಲಿಸಿದರರೂ ಇತ್ತ ತಲೆಯೂ ಹಾಕದ ಜನಪ್ರತಿನಿಧಿಗಳಿಗೆ ಆ ಪರಿಸರದ ಜನತೆ ಹಿಡಿ ಶಾಪ ಹಾಕಿದ್ದಾರೆ. ಕೆಲವು ದಿನಗಳ ಹಿಂದೆ ಈ ಪರಿಸರದ ನಾಗರೀಕ ರೋರ್ವರಿಗೆ ತೀವ್ರ ಅನಾರೋಗ್ಯ ಪೀಡಿತ ರಾದಾಗ ರಸ್ತೆ ಸರಿ ಇಲ್ಲದೆ ಅಂಬ್ಯುಲೆನ್ಸ್ ಬರದಿದ್ದಾಗ ರೋಗಿಯನ್ನು ಅರ್ಧ ಕಿ.ಮೀ ದೂರದಲ್ಲಿ ಹೊತ್ತುಕೊಂಡು ಹೋದ ಪ್ರಕರಣ ಮತ್ತು ಆ ಬಳಿಕ ಯಾವುದೇ ರಾಜಕೀಯ ಪಕ್ಷ ದ ಜನಪ್ರತಿನಿದಿಗಳು ಈ ರಸ್ತೆ ಸಮಸ್ಯೆ ಬಗ್ಗೆ ತುರ್ತಾಗಿ ಸ್ಪಂದಿಸದೇ ಇದ್ದುದೇ ಈ ಪ್ರತಿಭಟನೆ ಗೆ ಕಾರಣವಾಗಿದೆ ಎನ್ನಲಾಗಿದೆ.

ಮಾತ್ರವಲ್ಲದೆ ಇನ್ನು ಮುಂದೆ ನಮ್ಮ ಅಹವಾಲಿಗೆ ಸ್ಪಂದಿಸದ ಮಾಣಿ ಪಂಚಾಯತ್ ಗೆ ಈ ರಸ್ತೆ ಕುರಿತು ಯಾವುದೇ ದೂರು ನೀಡುವುದಿಲ್ಲ.ಮಾತ್ರವಲ್ಲದೆ ಬಂಟ್ವಾಳ ಶಾಸರು ನಮ್ಮ ರಸ್ತೆ ಸಮಸ್ಯೆ ಶೀಘ್ರವಾಗಿ ಪರಿಹರಿಸುವಂತೆ ಸ್ತಳೀಯ ನಿವಾಸಿಗಳು ಒತ್ತಾಯಿಸಿದ್ದಾರೆಯಾಗಿದೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments