Tuesday, September 28, 2021
Homeರಾಜ್ಯಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪಿಯು ದಾಖಲಾತಿ ಅವಧಿ ವಿಸ್ತರಣೆ

ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪಿಯು ದಾಖಲಾತಿ ಅವಧಿ ವಿಸ್ತರಣೆ

- Advertisement -
Renault
- Advertisement -
Home Plus
- Advertisement -

ಬೆಂಗಳೂರು : ಪ್ರಥಮ ಹಾಗೂ ದ್ವಿತೀಯ ಪಿಯು ದಾಖಲಾತಿ ಅವಧಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯು ವಿಸ್ತರಿಸಿ ಆದೇಶ ಹೊರಡಿಸಿದೆ. 2021-22ನೇ ಸಾಲಿನ ಪ್ರಥಮ ಪಿಯು ಪ್ರವೇಶದಲ್ಲಿ ಹೆಚ್ಚುವರಿಯಾಗಿ 20 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾಲೇಜುಗಳಿಗೆ ಅನುಮತಿ ನೀಡಿದೆ.

ಪ್ರಥಮ ಪಿಯುಸಿ ದಾಖಲಾತಿಗೆ ಸೆಪ್ಟೆಂಬರ್ 1 ರವರೆಗೆ ಹಾಗೂ ದ್ವಿತೀಯ ಪಿಯುಸಿಗೆ ಆಗಸ್ಟ್ 30 ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಪ್ರಥಮ ಮತ್ತು ದ್ವಿತೀಯ ಪಿಯುಸಿ ಕೋರ್ಸ್ ಗಳಿಗೆ ಸೆಪ್ಟೆಂಬರ್ 11 ರವರೆಗೆ ದಂಡ ಶುಲ್ಕವಿಲ್ಲದೆ ಪ್ರವೇಶ ಪಡೆಯಬಹುದು. ಆ ಬಳಿಕ 670 ರೂಪಾಯಿ ದಂಡಶುಲ್ಕದೊಂದಿಗೆ ಪ್ರವೇಶ ಪಡೆಯಲು ಸೆಪ್ಟೆಂಬರ್ 13 ರಿಂದ 25 ರವರೆಗೆ, 2,890 ರೂಪಾಯಿ ವಿಶೇಷ ದಂಡ ಶುಲ್ಕದೊಂದಿಗೆ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 5 ರವರೆಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ದಾಖಲಾತಿ ಪಡೆಯಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments