Monday, October 2, 2023
HomeUncategorizedಪಬ್ ಜಿ ಆಟದಲ್ಲೇ ಚಿಗುರಿದ ಪ್ರೀತಿ…!!!ಪ್ರಿಯಕರನನ್ನು ಹುಡುಕಿ ಹೋದ ವಿವಾಹಿತೆಗೆ ಶಾಕ್…!!!

ಪಬ್ ಜಿ ಆಟದಲ್ಲೇ ಚಿಗುರಿದ ಪ್ರೀತಿ…!!!ಪ್ರಿಯಕರನನ್ನು ಹುಡುಕಿ ಹೋದ ವಿವಾಹಿತೆಗೆ ಶಾಕ್…!!!

- Advertisement -



Renault

Renault
Renault

- Advertisement -

ಪಬ್​ಜಿ ಆಟ ಆಡುವಾಗ ದ್ವಿತೀಯ ಪಿಯು ವಿದ್ಯಾರ್ಥಿಯ ಮೇಲೆ ವಿವಾಹಿತೆಗೆ ಪ್ರೀತಿ ಚಿಗುರಿದ ಬಳಿಕ ಆತನನ್ನು ಹುಡುಕಿಕೊಂಡು ಹಿಮಾಚಲ ಪ್ರದೇಶದಿಂದ ಉತ್ತರ ಪ್ರದೇಶದ ವಾರಣಾಸಿಗೆ ತೆರಳಿದಾಗ ಆಕೆಗೆ ಅಲ್ಲಿ ಅಕ್ಷರಶಃ ಆಘಾತವೊಂದು ಎದುರಾಗಿತ್ತು.
ಹೌದು, ಹಿಮಾಚಲ ಪ್ರದೇಶದ ಮಹಿಳೆ ಪಬ್​ಜಿ ಆಡುತ್ತಿರುವಾಗ ಸಹ ಆಟಗಾರ ವಾರಣಾಸಿ ಮೂಲದ ವ್ಯಕ್ತಿಯೊಬ್ಬನ ಪರಿಚಯವಾಗಿದೆ. ಬಳಿಕ ಇಬ್ಬರ ಪರಿಚಯ ಪ್ರೀತಿಗೆ ತಿರುಗಿ, ಪರಸ್ಪರ ಫೋನ್​ ನಂಬರ್​ ಸಹ ವಿನಿಮಯ ಮಾಡಿಕೊಂಡಿದ್ದಾರೆ. ಬಳಿಕ ದಿನ ಕಳೆದಂತೆ ಇಬ್ಬರ ನಡುವಿನ ಮಾತುಕತೆ ನಡೆಯುತ್ತಾ ಪ್ರೀತಿ ಗಟ್ಟಿಯಾಗುತ್ತಾ ಸಾಗಿತ್ತು. ಇದರಿಂದ ಆಕೆ ಅತನ್ನು ಭೇಟಿ ಮಾಡಲೇಬೇಕು ಅಂದುಕೊಂಡು ಹಿಮಾಚಲ ಪ್ರದೇಶದ ಕಂಗ್ರಾದಿಂದ ನೇರವಾಗಿ ಉತ್ತರ ಪ್ರದೇಶದ ವಾರಣಾಸಿಗೆ ತೆರಳಿದ್ದಾಳೆ.
ಆದರೆ ಇತ್ತ ವಿವಾಹಿತೆ ದಿಢೀರನೇ ಕಾಣೆಯಾಗಿದ್ದನ್ನು ನೋಡಿ ಆಕೆಯ ಪಾಲಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇನ್ನೊಂದೆಡೆ ವಾರಣಾಸಿಗೆ ಬಂದಿಳಿದ ಮಹಿಳೆಗೆ ತಾನು ಈವರೆಗೂ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ನೋಡಿ ಆಘಾತಕ್ಕೀಡಾಗಿದಳು. ಏಕೆಂದರೆ ತಾನು ಪ್ರೀತಿಸುತ್ತಿದ್ದ ಆ ವ್ಯಕ್ತಿ ಕೇವಲ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದನು .
ಇದರಿಂದ ನಿರಾಸೆಗೊಂಡ ಮಹಿಳೆ ವಾಪಸ್ಸು ತನ್ನ ಪಾಲಕರಿಗೆ ಕರೆ ಮಾಡಿ ತನ್ನನ್ನು ಕರೆದುಕೊಂಡು ಹೋಗುವಂತೆ ಹೇಳಿದಳು. ಬಳಿಕ ವಾರಣಾಸಿ ಪೊಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಆಕೆಯನ್ನು ಮರಳಿ ಹಿಮಾಚಲ ಪ್ರದೇಶಕ್ಕೆ ಸೇರಿಸಲಾಯಿತು.

- Advertisement -

LEAVE A REPLY

Please enter your comment!
Please enter your name here

Most Popular

Recent Comments