Wednesday, June 16, 2021
Homeಕರಾವಳಿಭಗತ್ ಸಿಂಗ್ ಬಲಿದಾನದ ಸಲುವಾಗಿ ಸಾರ್ವಜನಿಕ‌ ಸಭೆ…

ಭಗತ್ ಸಿಂಗ್ ಬಲಿದಾನದ ಸಲುವಾಗಿ ಸಾರ್ವಜನಿಕ‌ ಸಭೆ…

- Advertisement -
- Advertisement -Home Plus
- Advertisement -
Platform
Maya Builders

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ ಇದರ ವತಿಯಿಂದ  ಭಗತ್ ಸಿಂಗ್, ರಾಜಗುರು, ಸುಖದೇವ್ ಇವರ ಬಲಿದಾನ ದಿನದ ಸಲುವಾಗಿ  ಸಾರ್ವಜನಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಗರದ ಉರ್ವಾಸ್ಟೋರ್ ಮೈದಾನದಲ್ಲಿ ನಡೆಯಿತು. ಈ ವೇಳೆ ದಿಶಾ ಭಾರತ ಇದರ ಟ್ರಸ್ಟಿ ರಾಜೇಶ್ ಪದ್ಮಾರ್ ಮಾತನಾಡಿ, ಭಾರತೀಯತೆಯನ್ನು ಉಳಿಸಲು ಪ್ರಯತ್ನಿಸಿದ ಸಾವಿರಾರು ಬಲಿದಾನಿಗಳು ಈ ಪುಣ್ಯಭೂಮಿಯಲ್ಲಿ ಅಗಲಿಹೋಗಿದ್ದಾರೆ. ತ್ಯಾಗ, ಬಲಿದಾನ ಮತ್ತು ಸೇವೆ ಭಾರತದ ಪರಂಪರೆಯಲ್ಲಿ ಅಡಕವಾಗಿದ್ದು ಇದನ್ನು ಯುವ ಸಮುದಾಯ ಮುಂದುವರಿಸುವ ಅಗತ್ಯತೆ ಇದೆ ಎಂದು ಹೇಳಿದರು. ಇನ್ನು ನಿವೃತ್ತ ಪೊಲೀಸ್ ಅಧೀಕ್ಷಕ ಪಿ. ಹರಿಶ್ಚಂದ್ರ ಅವರು ಮಾತನಾಡಿ, ಬಲಿದಾನಿಗಳ ಆದರ್ಶಗಳನ್ನು ಯುವ ಜನತೆ ಜೀವನದಲ್ಲಿ ಮೈಗೂಡಿಸಬೇಕು ಎಂದು ಹೇಳಿದರು. ಎಬಿವಿಪಿ ಮಂಗಳೂರು ಮಹಾನಗರದ ಅಧ್ಯಕ್ಷೆ ಭಾರತಿ ಪ್ರಭು ಹಾಗೂ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾರ್ವಜನಿಕ ಸಭೆಯ ಮೊದಲು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ನೃತ್ಯ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here

- Advertisment -

Most Popular

Recent Comments