Sunday, June 4, 2023
Homeಕರಾವಳಿಪುತ್ತೂರು: ಸರಕಾರಿ ಬಸ್ ನಿಂದ ಪ್ರಯಾಣಿಕನನ್ನು ತಳ್ಳಿಹಾಕಿದ ಕಂಡಕ್ಟರ್ >> ವಿಡಿಯೋ ವೈರಲ್

ಪುತ್ತೂರು: ಸರಕಾರಿ ಬಸ್ ನಿಂದ ಪ್ರಯಾಣಿಕನನ್ನು ತಳ್ಳಿಹಾಕಿದ ಕಂಡಕ್ಟರ್ >> ವಿಡಿಯೋ ವೈರಲ್

- Advertisement -


Renault

Renault
Renault

- Advertisement -

ಪುತ್ತೂರು, ಸೆ. 08. ಪುತ್ತೂರಿನಿಂದ ಈಶ್ವರಮಂಗಲ ಮಾರ್ಗವಾಗಿ ಸುಳ್ಯಪದವು ಕಡೆಗೆ ಹೋಗುತ್ತಿದ್ದ ಸರಕಾರಿ ಬಸ್ ನಲ್ಲಿ ಪಾನಮತ್ತ ಪ್ರಯಾಣಿಕೋರ್ವನಿಗೆ ನಿರ್ವಾಹಕ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ಎದೆಗೆ ಒದ್ದ ಘಟನೆ ಈಶ್ವರಮಂಗಲ ಪೇಟೆಯಲ್ಲಿ ನಡೆದಿದೆ.

ಸರಕಾರಿ ಬಸ್ ನಿಂದ ಪ್ರಯಾಣಿಕನನ್ನು ತಳ್ಳಿಹಾಕಿದ ಕಂಡಕ್ಟರ್

ಹಲ್ಲೆಗೊಳಗಾದವರನ್ನು ಪಡುವನ್ನೂರು ಗ್ರಾಮದ ಪದಡ್ಕ ನಿವಾಸಿ ಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಇವರು ಪದಡ್ಕಕ್ಕೆ ಹೋಗಲು ಈಶ್ವರಮಂಗಲದಲ್ಲಿ ಬಸ್ಸನ್ನು ಹತ್ತಿದ್ದು, ಈತ ಮದ್ಯಪಾನ ಮಾಡಿದ್ದಾನೆ ಎಂದು ಬಸ್ ನಿರ್ವಾಹಕ ಕೈಯಿಂದ ದೂಡಿ, ಹಲ್ಲೆ ನಡೆಸಿ ಕಾಲಿನಿಂದ ಒದ್ದಿರುವುದರಿಂದ ಪ್ರಯಾಣಿಕ ಕೃಷ್ಣಪ್ಪ ರಸ್ತೆಗೆ ಬಿದ್ದಿದ್ದಾರೆ. ವಿಷಯ ತಿಳಿದ ರೈತ ಸಂಘದ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ ಸರಕಾರಿ ಬಸ್ ನ ಪುತ್ತೂರು ಘಟಕವನ್ನು ಸಂಪರ್ಕಿಸಿ ಬಸ್ ನಿರ್ವಾಹಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಆತನಲ್ಲಿ ಕ್ಷಮೆ ಕೇಳಿಸುವಂತೆ ಆಗ್ರಹಿಸಿದ್ದಾರೆ. ಇದೀಗ ಕೃತ್ಯದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಕೃತ್ಯಕ್ಕೆ ಕಾರಣರಾದ ಬಸ್ ನಿರ್ವಾಹಕನನ್ನು ಅಮಾನತುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments