Saturday, December 3, 2022
Homeಅಪಘಾತಪುತ್ತೂರು: ರಸ್ತೆ ಅಪಘಾತ >> ಯುವಕ ಸಾವು !!!

ಪುತ್ತೂರು: ರಸ್ತೆ ಅಪಘಾತ >> ಯುವಕ ಸಾವು !!!

- Advertisement -
Renault

Renault

Renault

- Advertisement -

ಪುತ್ತೂರುಬೈಕೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಮೃತಪಟ್ಟ ಹಾಗೂ ಸಹಸವಾರ ಗಾಯಗೊಂಡ ಘಟನೆ ಪುತ್ತೂರು ನಗರದ ಹೊರವಲಯದ ಪರ್ಲಡ್ಕ ರಸ್ತೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.

ನರಿಮೊಗ್ರು ಸಮೀಪದ ವೀರಮಂಗಲ ಖಂಡಿಗ ನಿವಾಸಿ ಚಂದ್ರಶೇಖರ್ ಗೌಡ ಅವರ ಪುತ್ರ ಭರತ್ ರಾಜ್ ಗೌಡ (22) ಮೃತರು. ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ನಿವಾಸಿ ಜಯದೀಪ್ ಅವರ ಪುತ್ರ ಧನುಷ್ (24) ಗಾಯಗೊಂಡವರು.

ಪುತ್ತೂರು ಗಣೇಶೋತ್ಸವದ ಶೋಭಾಯಾತ್ರೆಗೆಂದು ಬಂದಿದ್ದ ಭರತ್‌ರಾಜ್ ಗೌಡ ಮತ್ತು ಧನುಷ್ ಅವರು ಕಾರ್ಯಕ್ರಮ ಮುಗಿಸಿಕೊಂಡು ಬೈಕ್‌ನಲ್ಲಿ ತೆರಳುತ್ತಿದ್ದರು. ಪರ್ಲಡ್ಕ ರಸ್ತೆಯಲ್ಲಿ ಭರತ್‌ರಾಜ್‌ ಅವರ ನಿಯಂತ್ರಣ ತಪ್ಪಿದ ಬೈಕ್‌ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ಸಿನ ಹಿಂಬದಿಗೆ ಬೈಕ್‌ ಡಿಕ್ಕಿ ಹೊಡೆದಿದೆ.

ತಲೆಗೆ ಗಂಭೀರ ಗಾಯಗೊಂಡ ಭರತ್ ರಾಜ್ ಗೌಡ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಧನುಷ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಂದ್ರಶೇಖರ್ ದಂಪತಿಗೆ ಭರತ್‌ರಾಜ್ ಏಕೈಕ ಪುತ್ರ. ಆತ ಐಟಿಐ ಶಿಕ್ಷಣ ಪಡೆಯುವ ಜತೆಗೆ ಅಡಿಕೆ ಸುಳಿಯುವ ಕೆಲಸ ನಿರ್ವಹಿಸುತ್ತಿದ್ದ. ಏಕೈಕ ಪುತ್ರನನ್ನು ಕಳಕೊಂಡಿರುವ ಚಂದ್ರಶೇಖರ್ ದಂಪತಿ ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಮಾನವೀಯತೆ ಮೆರೆದ ಹೆಚ್ಚುವರಿ ಎಸ್ಪಿ: ಅಪಘಾತ ನಡೆದ ಸಂದರ್ಭ ಅದೇ ರಸ್ತೆಯಲ್ಲಿ ಬರುತ್ತಿದ್ದ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಅವರು ತಕ್ಷಣ ಗಾಯಾಳುವನ್ನು ತನ್ನ ಕಾರಿನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments