Monday, October 2, 2023
HomeUncategorizedರಾಗಿಣಿ ಇನ್ನು ಯಾವ ರೂಪ ತಾಳುತ್ತಾರೆ? ಆಕೆಯ DP ಹೇಳೋದೇನು?

ರಾಗಿಣಿ ಇನ್ನು ಯಾವ ರೂಪ ತಾಳುತ್ತಾರೆ? ಆಕೆಯ DP ಹೇಳೋದೇನು?

- Advertisement -



Renault

Renault
Renault

- Advertisement -

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರಾಗಿಣಿ ಹೊರಬರುತ್ತಿದ್ದಂತೆ ಹೊಸ ಅವತಾರ ತಾಳಿದ್ದಾರೆ. ಪ್ರಕರಣದ ಬಗ್ಗೆ ಸಾಕಷ್ಟು ಮಾತನಾಡೋದಿದೆ ಎಂದಿದ್ದ ರಾಗಿಣಿ ಸದ್ಯದಲ್ಲೇ ಪವರ್ ಫುಲ್ ಮಾಹಿತಿ ಕೊಡೋ ಸೂಚನೆ ನೀಡಿದ್ದು, ಹಲವರ ಎದೆಯಲ್ಲಿ ನಡುಕ ಆರಂಭವಾಗಿದೆ.

ಬರೋಬ್ಬರಿ 144 ದಿನಗಳ ಸೆರೆವಾಸದ ಬಳಿಕ ತುಪ್ಪದ ಬೆಡಗಿ ರಾಗಿಣಿ ಸುಪ್ರೀಂ ಕೋರ್ಟ್ ಅಂಗಳದಿಂದ ಬೇಲ್ ಪಡೆದು ಸೋಮವಾರ ರಿಲೀಸ್ ಆಗಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಜನವರಿ 21 ರಂದೇ ಬೇಲ್ ಪಡೆದಿದ್ದರೂ ಕಾನೂನು ಪ್ರಕ್ರಿಯೆಯಲ್ಲಿ ವಿಳಂಬವಾದ ಕಾರಣ ರಾಗಿಣಿ  ಜಾಮೀನು ಸಿಕ್ಕ ಮೇಲೂ ಜೈಲಿನಲ್ಲೇ ಇದ್ದರು.

ಸೋಮವಾರ ಸಂಜೆ ಜೈಲಿನಿಂದ ಹೊರಬಂದ ರಾಗಿಣಿ ಜೈಲಿನ ಬಳಿ ಮಾಧ್ಯಮಗಳ ಜೊತೆ ಮಾತನಾಡಿ ಸತ್ಯಮೇವ ಜಯತೆ ಅನ್ನೋದು ಈಗ ನಾನು ಹೇಳೋ ಮಾತು. ಉಳಿದ ಎಲ್ಲ ವಿಚಾರಗಳನ್ನು ಒಂದಷ್ಟು ಸಮಯದ ಬಳಿಕ ಸುದ್ದಿಗೋಷ್ಠಿ ನಡೆಸಿ ಹಂಚಿಕೊಳ್ಳುತ್ತೇನೆ ಎನ್ನುವ ಮೂಲಕ ಪ್ರಕರಣದ ಬಗ್ಗೆ ಮಾತನಾಡಲು ತುಂಬ ಸಂಗತಿಗಳು ಇದೇ ಅನ್ನೋ ಸೂಚನೆ ನೀಡಿದ್ದರು.

ಈಗ ಜೈಲಿನಿಂದ ಹೊರಬಂದು ಮನೆ ಸೇರಿರುವ ರಾಗಿಣಿ ತಮ್ಮ ವಾಟ್ಸಪ್, ಪೇಸ್ ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾ ಬಳಕೆ ಆರಂಭಿಸಿದ್ದಾರೆ. ಈ ಮಧ್ಯೆ ವಾಟ್ಸಪ್ ಗೆ ರಾಗಿಣಿ ಡಿಪಿಯಾಗಿ ಹಾಕಿರೋ ಸಂದೇಶ ಮಾತ್ರ ಸಖತ್ ಸಂದೇಶ ಕೊಡುವಂತಿದ್ದು, ರಾಗಿಣಿ ಬಳಿ ಪ್ರಕರಣಕ್ಕೆ ಸಂಬಂಧಿಸಿದ ಹಲವಾರು ಸಂಗತಿಗಳು ಇದೇ ಎನ್ನಿಸುವಂತಿದೆ.

ಶಕ್ತಿಮಾತೆಯನ್ನು ಪೂಜಿಸುವ ಹಾಗೂ ವರ್ಣಿಸುವ ಸಾಲುಗಳುಳ್ಳ ಡಿಪಿ ಹಾಕಿರುವ ರಾಗಿಣಿ ಆ ಮೂಲಕ ಹೆಣ್ಣು ಶಕ್ತಿಸ್ವರೂಪ ಅನ್ನೋ ಸಂದೇಶ ಸಾರುವ ಪ್ರಯತ್ನ ಮಾಡಿದಂತಿದೆ. ಧೈರ್ಯದಿಂದ ಎಚ್ಚೆತ್ತುಕೊಳ್ಳುವ ಪ್ರತಿ ಹೆಣ್ಣು ದುರ್ಗಾಮಾತೆ. ಬದಲಾವಣೆಯೊಂದಿಗೆ ಎಚ್ಚೆತ್ತುಕೊಳ್ಳುವ ಪ್ರತಿ ಹೆಣ್ಣು ಕಾಳಿಮಾತೆ. ತನ್ನಲ್ಲಿರುವ ದೈವಿಗುಣದಿಂದ ಎಚ್ಚೆತ್ತುಕೊಳ್ಳುವ ಪ್ರತಿಹೆಣ್ಣು ಪಾರ್ವತಿ ಎನ್ನುವ ಮೂಲಕ ರಾಗಿಣಿ ಶಕ್ತಿದೇವತೆಗಳ ಸ್ತುತಿ ಮಾಡಿದ್ದಾರೆ.

ಮೂಲಗಳ ಪ್ರಕಾರ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಇನ್ನಷ್ಟು ಪ್ರಭಾವಿ ನಟ-ನಟಿಯರು ಪಾಲ್ಗೊಂಡಿರುವ ಶಂಕೆ ಇದೆ. ಅವರನ್ನೆಲ್ಲ ಮರೆಮಾಚಿ ಕೇವಲ ಕೆಲವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿಕೊಂಡಿರೋದು ಹಾಗೂ ಜೈಲಿಗಟ್ಟಿದ್ದು, ರಾಗಿಣಿಯರ ಕೋಪಕ್ಕೆ ಕಾರಣವಾಗಿದೆ.

‘ಹೀಗಾಗಿ ವಕೀಲರ ಹಾಗೂ ಕಾನೂನು ತಜ್ಞರ ಸಲಹೆ ಪಡೆದು ರಾಗಿಣಿ ಸುದ್ದಿಗೋಷ್ಠಿ ನಡೆಸಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ದಾಖಲೆ ಬಿಡುಗಡೆ ಮಾಡಲಿದ್ದಾಳೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ರಾಗಿಣಿಯ ಮಾತು ಹಾಗೂ ಬದಲಾದ ಡಿಪಿ ಯಾವುದೋ ಒಂದು ಸ್ಪಷ್ಟ ಸಂದೇಶ ನೀಡುತ್ತಿದ್ದು, ಪ್ರಕರಣದಲ್ಲಿರುವ ಕಾಣದ ಕೈಗಳ ಎದೆಯಲ್ಲಿ ನಡುಕ ಆರಂಭವಾದಂತಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments