ಅಸ್ಸಾಂ(ಫೆ.14): ಅಸ್ಸಾಂ ಪ್ರವಾಸದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಸ್ಸಾಂ ಚಹಾ ಎಸ್ಟೇಟ್ ಕೆಲಸಗಾರರಿಗೆ ಭರವಸೆ ನೀಡುವ ವೇಳೆ ರಾಹುಲ್ ಗಾಂಧಿ ಅನಗತ್ಯವಾಗಿ ಗುಜರಾತಿಗಳನ್ನು ಎಳೆದು ತಂದಿದ್ದಾರೆ. ರಾಹುಲ್ ಗಾಂಧಿ ಗುಜರಾತಿಗಳ ವಿರುದ್ಧ ವಿಷಕಾರುತ್ತಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಫಿಂಗರ್ ಎಂಟಲ್ಲ, ರಾಹುಲ್ ಗಾಂಧಿ ಪ್ರಕಾರ ‘ಫಿಂಗರ್ 4’ ನಮ್ಮ ಗಡಿ, ಪೇಚಿಗೆ ಸಿಲುಕಿದ ರಾಗಾ..
ಅಸ್ಸಾಂ ಜನತೆಯ ಮುಂದ ಮಾಡಿ ಭಾಷಣದಲ್ಲಿ ರಾಹುಲ್ ಗಾಂಧಿ, ಅಸ್ಸಾಂನಲ್ಲಿ ಕಾಂಗ್ರೆಸ್ ಆಡಳಿತ ಸಿಕ್ಕರೆ, ಇಲ್ಲಿ ಚಹಾ ಎಸ್ಟೇಟ್ ಕೆಲಸಗಾರರ ವೇತನ ಹೆಚ್ಚಿಸಲಾಗುವುದು. ಸದ್ಯ ಅಸ್ಸಾಂ ಚಹಾ ಕೆಲಸಗಾರರು ದಿನವೊಂದಕ್ಕೆ 167 ರೂಪಾಯಿ ಸಂಬಳ ಪಡೆಯುತ್ತಿದ್ದಾರೆ.
ಆದರೆ ನಾವು ಅಧಿಕಾರಕ್ಕೆ ಆಗಮಿಸಿದರೆ ಅಸ್ಸಾಂ ಚಹಾ ಕೆಲಸಗಾರರ ವೇತನವನ್ನು 365 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ಚೀನಾ ವಿರುದ್ಧ ನಿಲ್ಲಲಾಗದ ಮೋದಿಯಿಂದ ರೈತರಿಗೆ ಬೆದರಿಕೆ’…
ರಾಹುಲ್ ಗಾಂಧಿ ಇಷ್ಟೇ ಹೇಳಿದ್ದರೆ ಯಾವುಗೇ ಸಮಸ್ಯೆ ಇರಲಿಲ್ಲ. ಆದರೆ ರಾಹುಲ್ ಗಾಂಧಿ, ಅಸ್ಸಾಂ ಚಹಾ ಕೆಲಸಗಾರರಿಗೆ ಭರವಸೆ ನೀಡಿದ ಹೆಚ್ಚುವರಿ ವೇತನ ಗುಜರಾತ್ ಚಹಾ ಟ್ರೇಡರ್‌ಗಳಿಂದ ಬರಲಿದೆ ಎಂದಿದ್ದಾರೆ. ರಾಹುಲ್ ಈ ಮಾತಿಗೆ ಆಕ್ರೋಶ ವ್ಯಕ್ತವಾಗಿದೆ.
ಅಸ್ಸಾಂ ಚಹಾ ಎಸ್ಟೇಟ್ ಕೆಲಸಗಾರರಿಗೆ ಹೆಚ್ಚುವರಿ ವೇತನ ನೀಡುವುದು ಉತ್ತಮ. ಆದರೆ ಗುಜರಾತಿ ಟ್ರೇಡರ್ಸ್ ಯಾವ ದ್ರೋಹ ಮಾಡಿದ್ದಾರೆ. ಗುಜರಾತಿಗಳಿಂದ ಹಣ ಪಡೆದು ಅಸ್ಸಾಂಗೆ ನೀಡುತ್ತೇವೆ ಎನ್ನುವುದು ರಾಜಕೀಯವಲ್ಲದೆ ಮತ್ತೇನು ಎಂದು ಆಕ್ರೋಶ ವ್ಯಕ್ತವಾಗಿದೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ರಾಹುಲ್ ಗಾಂಧಿ ಭಾಷಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಆಡಿದ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ. ಗುಜರಾತ್ ಹಾಗೂ ಗುಜರಾತಿಗಳನ್ನು ದ್ವೇಷಿಸುವ ಕಾಂಗ್ರೆಸ್ , ರಾಹುಲ್ ಗಾಂಧಿಯ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಜಯ್ ರೂಪಾನಿ ಹೇಳಿದ್ದಾರೆ.
ಗುಜರಾತ್ ಸಂಸದ ಸಿಆರ್ ಪಾಟೀಲ್ ಕೂಡ ರಾಹುಲ್ ಗಾಂಧಿ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.