ನವದೆಹಲಿ(ಫೆ.17): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಪುದುಚೇರಿಗೆ ಭೇಟಿ ನೀಡಿದ್ದಾರೆ. ಚುನಾವಣೆಗೂ ಮುನ್ನ ಜನರನ್ನು ಓಲೈಸುವ ಸಲುವಾಗಿ ಭೆಟಿ ನಿಡಿದ್ದು, ಈ ವೇಳೆ ಅಲ್ಲಿನ ಮೀನುಗಾರರನ್ನೂ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ತಮ್ಮ ಮಾತುಗಳು ತಮಗೇ ತಿರುಗುಬಾಣವಾಗಬಹುದೆಂಬ ನಿರೀಕ್ಷೆಯೂ ಅವರಿಗಿರಲಿಲ್ಲ.
ಅಷ್ಟಕ್ಕೂ ರಾಹುಲ್ ಗಾಂಧಿ ಹೇಳಿದ್ದೇನು?
ಮೀನುಗಾರರನ್ನು ಭೇಟಿಯಾದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವು ದೇಶದ ಬೆನ್ನೆಲುಬಾಗಿರುವ ರೈತರ ವಿರುದ್ಧ ಮೂರು ಕೃಷಿ ಕಾನೂನುಗಳನ್ನು ಜಾರಿಗೊಳಿಸಿದೆ. ಆದರೆ ಮೀನುಗಾರರನ್ನು ಭೇಟಿಯಾಗುವ ವೇಳೆ ನಾನು ರೈತರ ಬಗ್ಗೆ ಯಾಕೆ ಮಾತನಾಡುತ್ತಿದ್ದೇನೆಂಬ ಯೋಚನೆ ನಿಮಗೆ ಬರಬಹುದು. ವಾಸ್ತವವಾಗಿ ನಾನು ನಿಮ್ಮನ್ನು ಕಡಲ ರೈತನಾಗಿ ನೋಡುತ್ತೇನೆ.
ರೈತರಿಗಾಗಿ ದೆಹಲಿಯಲ್ಲಿ ಪ್ರತ್ಯೇಕ ಸಚಿವಾಲಯ ಇದೆ ಎಂದಾದರೆ ಕಡಲ ರೈತರಿಗೆ ಯಾಕಿಲ್ಲ? ಎಂದು ಪ್ರಶ್ನಿಸಿದ್ದಾರೆ.
‘ಅಮೇಠಿಯಲ್ಲಿ ತಿರಸ್ಕೃತಗೊಂಡು ಕೇರಳಕ್ಕೆ ಗುಳೆ, ರಾಹುಲ್ ವಲಸಿಗ ನಾಯಕ’
2019ರಲ್ಲೇ ಆರಂಭಗೊಂಡಿದೆ ಸಚಿವಾಲಯ
ಬಹುಶಃ ರಾಹುಲ್ ಗಾಂಧಿಗೆ ಮೀನುಗಾರಿಕೆ ಸಂಬಂಧ ಒಂದು ಸಚಿವಾಲಯ ಇದೆ ಎಂಬ ವಿಚಾರ ತಿಳಿದಿರಲಿಲ್ಲವೇನೋ., ಆದರೆ ಮೋದಿ ಸರ್ಕಾರ 2019 ರಲ್ಲೇ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯವನ್ನು ರಚಿಸಿದೆ. ಬೆಗುಸರೈ ಸಂಸದ ಗಿರಿರಾಜ್ ಸಿಂಗ್ ಇದರ ಸಚಿವರಾಗಿದ್ದಾರೆ.
ಇಟಾಲಿಯನ್ ಭಾಷೆಯಲ್ಲಿ ಟ್ವೀಟ್ ಮಾಡಿದ ಸ್ಮೃತಿ ಇರಾನಿ ಹಾಗೂ ಗಿರಿರಾಜ್ ಸಿಂಗ್.