Sunday, March 7, 2021
Home ಸಿನಿಮಾ ರಾಜಮೌಳಿಯ ಆರ್. ಆರ್. ಆರ್. : ಬರೋದು ಅಕ್ಟೋಬರ್!

ರಾಜಮೌಳಿಯ ಆರ್. ಆರ್. ಆರ್. : ಬರೋದು ಅಕ್ಟೋಬರ್!

ಸಿನಿ ಇತಿಹಾಸದಲ್ಲಿ ಮತ್ತೊಂದು ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿರುವ ಬಿಗ್ ಬಜೆಟ್ ಹಾಗೂ ಬಿಗ್ ಸ್ಟಾರ್ಸ್ ಸಿನಿಮಾ ಆರ್.ಆರ್.ಆರ್ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ.

ಬಾಹುಬಲಿ ಖ್ಯಾತಿಯ ರಾಜಮೌಳಿ ನಿರ್ದೇಶನದ ಬಹುನೀರಿಕ್ಷಿತ RRR ಸಿನಿಮಾ ಅಕ್ಟೋಬರ್ 13 ದೇಶದಾದ್ಯಂತ ತೆರೆ ಕಾಣಲಿದೆ.

ಸೋಷಿಯಲ್ ಮೀಡಿಯಾದಲ್ಲಿ ರಾಮ್ ಚರಣ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಜಲ‌ ಮತ್ತು ಅಗ್ನಿ ದೊಡ್ಡ ಪೋರ್ಸ್ ನೊಂದಿಗೆ ಆಗಮಿಸಲಿದೆ. 2021 ರ ಅಕ್ಟೋಬರ್ 13 ರಂದು ಹೊಸ ಅವತಾರ ನೋಡಿ ಎಂದು ಬರೆದಿದ್ದಾರೆ.

ನಿರ್ದೇಶಕ ರಾಜಮೌಳಿಯ ಹೊಸ ದಾಖಲೆಯಾಗುವ ನೀರಿಕ್ಷೆ ಮೂಡಿಸಿರುವ RRR ಸಿನಿಮಾ 2020 ರ ಜುಲೈ 30 ರಂದು ತೆರೆಕಾಣಬೇಕಿತ್ತು. ಆದರೆ ಕೊರೋನಾದಿಂದ ಶೂಟಿಂಗ್ ಸ್ಥಗಿತಗೊಂಡು, ಥಿಯೇಟರ್ ಗಳು ಬಾಗಿಲು ಮುಚ್ಚಿದ್ದರಿಂದ ಚಿತ್ರದ ರಿಲೀಸ್ ವಿಳಂಬವಾಗಿದೆ.

ಸಧ್ಯ ಚಿತ್ರತಂಡ ಆರ್.ಆರ್. ಆರ್. ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ತೊಡಗಿದೆ. ಶೂಟಿಂಗ್ ಪೂರ್ತಿಗೊಂಡ ಬಳಿಕ ರಿಲೀಸ್ ಸಿದ್ಧತೆಗಳು ಆರಂಭವಾಗಲಿದ್ದು, ಇದಕ್ಕಾಗಿ ಈಗಾಗಲೇ ಚಿತ್ರದ ಪ್ರಮೋಶನ್ ಆರಂಭಿಸಿದೆ ಚಿತ್ರತಂಡ.

ರಾಮ ಚರಣ್, ಜ್ಯೂನಿಯರ್ ಎನ್.ಟಿ.ಆರ್ , ಅಜಯ್ ದೇವಗನ್,ಆಲಿಯಾಭಟ್ ,ಸಾಮುತಿಕಾರಣಿ ಸೇರಿದಂತೆ ಹಲವರು ನಟಿಸಿರುವ ಈ ಚಿತ್ರ ಮೇಕಿಂಗ್ ಸಾಕಷ್ಟು ಸದ್ದು ಮಾಡಿತ್ತು. ಹೀಗಾಗಿ ರಿಲೀಸ್ ಗೆ ಅಭಿಮಾನಿಗಳು ಕಾದಿದ್ದಾರೆ.

LEAVE A REPLY

Please enter your comment!
Please enter your name here

- Advertisment -
- Advertisment -

Most Popular

Recent Comments