Tuesday, June 6, 2023
HomeUncategorizedರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ರೆಡಿ!

ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ರೆಡಿ!

- Advertisement -


Renault

Renault
Renault

- Advertisement -

ಹೈದ್ರಾಬಾದ್: ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಮಂದಣ್ಣ ಬಾಲಿವುಡ್ ಗೆ ಎಂಟ್ರಿ ಕೊಡಲು ಭರ್ಜರಿ ತಯಾರಿ ನಡೆಸಿದ್ದಾರೆ. ವರ್ಕೌಟ್ ಸಲುವಾಗಿ ಜಿಮ್ ಗೆ ತೆರಳುತ್ತಿರುವ ಫೋಟೋ ವೈರಲ್ ಆಗಿದೆ.

ಕ್ರೀಮ್ ಕಲರಿನ ಕ್ರಾಪ್ ವಿಂಡ್ ಬ್ರೇಕರ್ ಜಾಕೆಟ್, ನೀಲಿ ಬಣ್ಣದ ಟಿ-ಶರ್ಟ್, ಕಪ್ಪು ಟ್ರ್ಯಾಕ್ ಸೂಟ್ ಪ್ಯಾಂಟ್ ಹಾಗೂ ಕಪ್ಪು ಶೂ ಧರಿಸಿ ಸರ್ಜಿಕಮ್ ಮಾಸ್ಕ್ ಧರಿಸಿ ಹೊರಟ ಫೋಟೋವನ್ನು ಹೈದ್ರಾಬಾದ್ ಟೈಮ್ಸ್ ಟ್ವೀಟ್ ಮಾಡಿದೆ. ಬಾಲಿವುಡ್ ಚಿತ್ರಕ್ಕಾಗಿ ಫಿಟ್ ಆಗುತ್ತಿದ್ದಾರೆ ಎಂದು ಕ್ಯಾಪ್ಶನ್ ಬರೆದಿದೆ.

ಸಿದ್ಧಾರ್ಥ ಮಲ್ಹೋತ್ರಾ ಅವರ ಜತೆ ಬಾಲಿವುಡ್ ಸ್ಪೈ ಥ್ರಿಲ್ಲರ್ ಚಿತ್ರ ಮಿಶನ್ ಮಂಜುದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಸಹಿ ಹಾಕಿದ್ದಾರೆ.

ಅದು ಅವರ ಬಾಲಿವುಡ್ ನ ಮೊದಲ ಚಿತ್ರವಾಗಲಿದೆ. ಸದ್ಯ ಅವರು ಹೈದ್ರಾಬಾದ್ ನಲ್ಲಿ ಸುಕುಮಾರ್ ನಿರ್ದೇಶನದ ತೆಲುಗು ಸಿನೆಮಾ ʼಪುಷ್ಪಾʼದಲ್ಲಿ ಅಲ್ಲು ಅರ್ಜುನ್ ಜತೆ ನಟಿಸುತ್ತಿದ್ದಾರೆ.

ಕನ್ನಡದಲ್ಲಿ ʼಕಿರಿಕ್ ಪಾರ್ಟಿʼ‌ ಸಿನೆಮಾ ಮೂಲಕ ಪ್ರಸಿದ್ಧವಾಗಿದ್ದ ರಶ್ಮಿಕಾ ಮಂದಣ್ಣ ತೆಲಗು ಚಿತ್ರರಂಗಕ್ಕೆ ತೆರಳಿ ಕೆಲವೇ ವರ್ಷದಲ್ಲಿ ಅಲ್ಲಿನ ಪ್ರಸಿದ್ಧ ನಟರ ಜತೆ ನಟಿಸಿ ಬಹುಬೇಗ ಮನೆ ಮಾತಾಗಿದ್ದರು. ಈಗ ಬಾಲಿವುಡ್ ಎಂಟ್ರಿಗೆ ಮುಂದಾಗಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments