Tuesday, September 28, 2021
Homeಕ್ರೈಂರೆಂಟೆಡ್ ಬಂಗಲೆಯಲ್ಲಿ ರೇವ್ ಪಾರ್ಟಿ : ತಮಿಳು ಚಲನಚಿತ್ರ​ ನಟಿ ಕವಿತಾಶ್ರೀ ಬಂಧನ

ರೆಂಟೆಡ್ ಬಂಗಲೆಯಲ್ಲಿ ರೇವ್ ಪಾರ್ಟಿ : ತಮಿಳು ಚಲನಚಿತ್ರ​ ನಟಿ ಕವಿತಾಶ್ರೀ ಬಂಧನ

- Advertisement -
Renault
- Advertisement -
Home Plus
- Advertisement -

ಫೈವ್​ ಸ್ಟಾರ್​ ಹೋಟೆಲ್​ಗಳು ಮತ್ತು ಶ್ರೀಮಂತರಿಗೆ ಸಂಬಂಧಿಸಿದ ಐಷಾರಾಮಿ ಮನೆಗಳಲ್ಲಿ ರೇವ್​ ಪಾರ್ಟಿಗಳು ನಡೆಯುವುದು ಸರ್ವೇ ಸಾಮಾನ್ಯ. ಆದರೆ, ಕೊರೋನಾ ವೈರಸ್ ಸಾಂಕ್ರಮಿಕದಿಂದಾಗಿ ಒಟ್ಟಾಗಿ ಸೇರುವುದನ್ನು ಎಲ್ಲೆಡೆ ನಿರ್ಬಂಧಿಸಲಾಗಿದೆ. ಆದರೂ, ಕೆಲವೆಡೆ ಗುಟ್ಟಾಗಿ ರೇವ್​ ಪಾರ್ಟಿಗಳನ್ನು ನಡೆಸುತ್ತಿರುವುದು ಬೆಳಕಿಗೆ ಬರುತ್ತಲೇ ಇದೆ.
ಚೆನ್ನೈನಲ್ಲಿ ನಟಿ ಕವಿತಾಶ್ರೀ ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಣ್ಣತ್ತೂರ್​ ಏರಿಯಾದ ಐಷಾರಾಮಿ ಬಂಗಲೆಯಲ್ಲಿ ರೇವ್​ ಪಾರ್ಟಿ ನಡೆಯುತ್ತಿರುವ ಸುಳಿವು ಪಡೆದು ದಾಳಿ ನಡೆಸಿದ ಚೆನ್ನೈ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ.

ಅರೆಬೆತ್ತಲೆ ನೃತ್ಯ ಹಾಗೂ ದುಬಾರಿ ಆಲ್ಕೋಹಾಲ್​ನೊಂದಿಗೆ 15 ಮಹಿಳೆಯರು ಮತ್ತು 15 ಪುರುಷರು ಅಲ್ಲಿದ್ದರು ಎಂದು ದಾಳಿಯ ವೇಳೆ ತಿಳಿದುಬಂದಿದೆ. ಪಾರ್ಟಿ ನಡೆಯುತ್ತಿದ್ದ ಬಂಗಲೆಯನ್ನು ನಟಿ ಕವಿತಾಶ್ರೀ ಅವರು ಬಾಡಿಗೆ ಪಡೆದಿದ್ದಾರೆಂದು ತಿಳಿದುಬಂದಿದೆ. ಬಂಗಲೆಗಳನ್ನು ಬಾಡಿಗೆ ಪಡೆದು ಪ್ರತಿ ರಾತ್ರಿ ರೇವ್​ ಪಾರ್ಟಿ ನಡೆಸುತ್ತಿದ್ದರು ಎಂಬ ಆರೋಪವಿದೆ. ಪಾರ್ಟಿಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಕವಿತಾಶ್ರೀಯವರನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಕವಿತಾಶ್ರೀ ಅವರು ಅನೇಕ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments