Tuesday, September 28, 2021
HomeಕರಾವಳಿVIDEO: FIR ದಾಖಲಿಸಿ ನ್ಯಾಯಕೊಡಿ ರಕ್ತದಲ್ಲಿ ಬರೆದು ಎಚ್ಚರಿಕೆ…!!!

VIDEO: FIR ದಾಖಲಿಸಿ ನ್ಯಾಯಕೊಡಿ ರಕ್ತದಲ್ಲಿ ಬರೆದು ಎಚ್ಚರಿಕೆ…!!!

- Advertisement -
Renault
- Advertisement -
Home Plus
- Advertisement -

FIR ದಾಖಲಿಸಿ ನ್ಯಾಯಕೊಡಿ ರಕ್ತದಲ್ಲಿ ಬರೆದು ಎಚ್ಚರಿಕೆ…!!!

ಇನ್ನೂ ಉಪವಾಸ ನಿರತ‌ ಸ್ಥಳಕ್ಕೆ ಬಾರದ ಮಾನವೀಯತೆ ಇಲ್ಲದ ಅಧಿಕಾರಿಗಳು…!!!

ಕಡಬ: ಅರಣ್ಯಾಧಿಕಾರಿಗಳ ದೌರ್ಜನ್ಯದ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಐದನೇ ಮುಂದುವರೆದಿದೆ.

ಇಂದು ರಕ್ತ ಚಳುವಳಿ ಹೆಸರಿನಲ್ಲಿ ಮೊದಲು ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ ಅವರು ಬ್ಲೇಡ್ ಮೂಲಕ ಬೆರಳಿನ ತುದಿ ಕಟ್ ಮಾಡಿ ಆ ರಕ್ತದಲ್ಲಿ FIR ದಾಖಲಿಸಿ ನ್ಯಾಯಕೊಡಿ, ಅಧಿಕಾರಿಯವರೇ ನಮ್ಮನ್ನು ಬಲಿಕೊಡದಿರಿ ಎಂದು ಬರೆದುಕೊಂಡಿದ್ದಾರೆ.

ಅಧಿಕಾರಿಗಳ ಮೇಲೆ ಕೇಸು ದಾಖಲಿಸಿ ಇಲ್ಲವೇ ಕೇಸು ದಾಖಲಿಸಲು ಸಾಧ್ಯವಿಲ್ಲ ಎಂದು ಲಿಖಿತವಾಗಿ ಬರೆದುಕೊಡಿ ಎಂದು ಅಧಿಕಾರಿಗಳ ಮುಂದೆ ಬೇಡಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಸ್ಪಷ್ಟ ನಿಲುವನ್ನು ಜಿಲ್ಲಾಡಳಿತ ನೀಡದ ಹಿನ್ನೆಲೆಯಲ್ಲಿ ಈ ಧರಣಿ ಮುಂದುವರೆದಿದೆ.
ಉನ್ನತ ಅರಣ್ಯ ಅಧಿಕಾರಿಗಳು ಹೋರಾಟಗಾರರ ಪೋನ್ ಸ್ವೀಕರಿಸದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ..

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments