
ಮಂಗಳೂರು: ಗಣರಾಜ್ಯೋತ್ಸವ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸುವ ಉದ್ದೇಶದಿಂದ ನಗರದೆಲ್ಲೆಡೆ ಅಶಕ್ತರನ್ನು ಗುರುತಿಸಿ ಅವರಿಗೆ ವಾಕಿಂಗ್ ಸ್ಟಿಕ್ ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿರುವವರಿಗೆ ಮಾಸ್ಕ್ ವಿತರಣೆ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.


ನಗರದಾದ್ಯಂತ ತಿರುಗಾಡಿ ರಸ್ತೆ ಬದಿಯಲ್ಲಿ, ಪುಟ್ಪಾತ್ ಗಳಲ್ಲಿ, ಬಸ್ ಸ್ಟಾಪ್ ಗಳಲ್ಲಿ ಕಂಡು ಬಂದ ಸುಮಾರು 25 ಮಂದಿಗೆ ವಾಕಿಂಗ್ ಸ್ಟಿಕ್ ವಿತರಣೆ ಮಾಡಿದರೆ, ಹಲವಾರು ಮಂದಿ ಮಾಸ್ಕ್ ಧರಿಸದೇ ಇರುವವರಿಗೆ ಮಾಸ್ಕ್ ವಿತರಿಸಲಾಯಿತು. ವಿತರಣೆ ವಾಹನದಲ್ಲಿ ಬೆಳಗ್ಗಿನ ಉಪಹಾರವನ್ನೂ ವಿತರಿಸಲಾಯಿತು.
ಗಣರಾಜ್ಯೋತ್ಸವ ಸೇರಿದಂತೆ ಆಯ್ದ ದಿನಾಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸುವ, mangalorevarthe.com ನಿರ್ದೇಶಕ ಅಫ್ಝರ್ ರಜಾಕ್, ಸಹ್ಯಾದ್ರಿ ಕಾಲೇಜು ಪ್ರೊಫೆಸರ್ ಡಾ. ಅನಂತ್ ಪ್ರಭು ಜಿ , ಯುವ ಉದ್ಯಮಿ ಕಾರ್ತಿಕ್ ಹೆಗ್ಡೆ ಮಂಗಳವಾರ ಬೆಳಗ್ಗೆ ನಗರದೆಲ್ಲೆಡೆ ಸುತ್ತಾಡಿ ಗಣರಾಜ್ಯೋತ್ಸವದ ಆಚರಣೆ ಮಾಡಿದ್ದಾರೆ.
