Tuesday, September 28, 2021
Homeಕ್ರೈಂಎ.ಟಿ.ಎಂ ದೋಚಿದ ಖದೀಮರು : 17,000 ರೂಪಾಯಿ ನಗದಿನೊಂದಿಗೆ ಪರಾರಿ

ಎ.ಟಿ.ಎಂ ದೋಚಿದ ಖದೀಮರು : 17,000 ರೂಪಾಯಿ ನಗದಿನೊಂದಿಗೆ ಪರಾರಿ

- Advertisement -
Renault
- Advertisement -
Home Plus
- Advertisement -

ಕೋಟ : ಮಾಬುಕಳ ಬಸ್ ನಿಲ್ದಾಣದ ಹತ್ತಿರದ ಹೆಬ್ಬಾರ್ ಕಾಂಪ್ಲೆಕ್ಸ್ ನಲ್ಲಿರುವ ಹಂಗರಕಟ್ಟೆ ಶಾಖೆಯ ಕೆನರಾ ಬ್ಯಾಂಕ್ ಎಟಿಎಂಗೆ ಕನ್ನ ಹಾಕಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ನಿನ್ನೆ ತಡ ರಾತ್ರಿ ಕಳ್ಳರು ಎ.ಟಿ.ಎಂ ಹೊರಗಡೆ ಇರುವ ಸಿಸಿಟಿವಿ ಕ್ಯಾಮರಾ ಹಾಗೂ ಸೈರನ್ ಕೇಬಲ್ ತುಂಡು ಮಾಡಿದ್ದು, ಒಳಗಡೆ ಇದ್ದ ಎಟಿಎಂ ಯಂತ್ರವನ್ನು ಒಡೆಯಲು ಯತ್ನಿಸಿದ್ದಾರೆ. ಈ ವೇಳೆ ಪೂರ್ತಿಯಾಗಿ ಒಡೆಯಲು ಸಾಧ್ಯವಾಗದಿದ್ದರೂ ರಿಜೆಕ್ಟ್ ಬಾಕ್ಸ್ ನಲ್ಲಿರುವ ಸುಮಾರು 17,000 ರೂಪಾಯಿ ನಗದು ದೋಚಿದ್ದಾರೆ ಎಂದು ಹೇಳಲಾಗಿದೆ. ಇದೇ ವೇಳೆ ಕಳ್ಳರು ಎಟಿಎಂ ಕೋಣೆಯ ಎ.ಸಿ.ಯನ್ನೂ ಕದ್ದೊಯ್ಯಲು ವಿಫಲ ಯತ್ನ ಮಾಡಿರುವುದು ತಿಳಿದುಬಂದಿದೆ.

ಇಂದು ಸ್ಥಳಕ್ಕಾಗಮಿಸಿದ ಅಡಿಷನಲ್ ಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಸುಧಾಕರ್ ನಾಯ್ಕ, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ್ ಹಾದಿಮನೆ, ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ. ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಎಜಿಎಂ ಜಗದೀಶ್ ಶೈಣೆ, ಸೀನಿಯರ್ ಮ್ಯಾನೇಜರ್ ಮನೋಜ್ ಕಾಮತ್ ಹಾಗೂ ಬ್ಯಾಂಕ್ ಮ್ಯಾನೇಜರ್ ಶಿಲ್ಪಾ ಹಾಜರಿದ್ದರು.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ಮಾಹಿತಿ ದೊರಕಿದೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments