Monday, October 2, 2023
HomeUncategorizedಇದೊಂದು ವಿಚಿತ್ರ ಕಳ್ಳರ ಗ್ಯಾಂಗ್:ಸಿಕ್ಕಿಬಿದ್ದಿದ್ದು ಸೇಬು ತಿಂದಾಗ!

ಇದೊಂದು ವಿಚಿತ್ರ ಕಳ್ಳರ ಗ್ಯಾಂಗ್:ಸಿಕ್ಕಿಬಿದ್ದಿದ್ದು ಸೇಬು ತಿಂದಾಗ!

- Advertisement -



Renault

Renault
Renault

- Advertisement -

ಬೆಂಗಳೂರು (ಜ. 28): ಥೇಟ್ ಸಿನಿಮಾ ಶೈಲಿಯಲ್ಲಿ ಸ್ಕೆಚ್ ಹಾಕುತ್ತಿದ್ದ ಆ ಗ್ಯಾಂಗ್ ದೊಡ್ಡ ದೊಡ್ಡ ಮನೆಗಳನ್ನು ನೋಡಿ ಟಾರ್ಗೆಟ್ ಮಾಡುತ್ತಿತ್ತು. ಅವರು ಇಟ್ಟ ಗುರಿ ಯಾವತ್ತೂ ಮಿಸ್ ಆಗೇ ಇಲ್ಲ. ಆ ಗ್ಯಾಂಗ್‌ನ ಲೀಡರ್ ಮಾಡಿರೋ ಕೃತ್ಯಗಳು ಒಂದೆರಡಲ್ಲ. ಬರೋಬ್ಬರಿ 50ಕ್ಕೂ ಹೆಚ್ಚು ಪ್ಲಾನ್‌ ಮಾಡುತ್ತಿದ್ದ ಆ ಗ್ಯಾಂಗ್ ಕಂಬಿಯ ಹಿಂದೆ ಹೋಗಿದೆ. ಆ ಕಳ್ಳರ ಗ್ಯಾಂಗನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಲಾಗಿದೆ. ಕದಿಯಲು ಹೋದ ಮನೆಯ ಅಡುಗೆ ಮನೆಯಲ್ಲಿ ಸೇಬು ಹಣ್ಣು ತಿನ್ನುತ್ತಾ ಕುಳಿತಿದ್ದ ಕಳ್ಳಿಯನ್ನು ಮನೆಯ ಮಾಲೀಕರೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.

ಹೂ ಬೇಕಾ ಹೂವ ಎಂದು ಕೂಗುತ್ತಾ ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ಓಡಾಡುತ್ತಿದ್ದ ಮಹಿಳೆಯೊಬ್ಬಳು ಒಂದು ಬಿಗ್ ಸ್ಕೆಚ್ ಹಾಕುತ್ತಿದ್ದಳು. ಹೂ ಮಾರೋ ನೆಪದಲ್ಲಿ ಮನೆಗಳ್ಳತನ ಮಾಡಲು ಈ ಲೇಡಿ ಖದೀಮರಿಗೆ ಸಹಾಯ ಮಾಡುತ್ತಿದ್ದಳು.

ಇದೇ ತಿಂಗಳ 14ನೇ ತಾರೀಕಿನಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಅರಿಶಿನಕುಂಟೆಯ ಬಡಾವಣೆಯಲ್ಲಿ ಉದ್ಯಮಿ ರವಿ ಎನ್ನುವವರ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ವೇಳೆ ಈ ಗ್ಯಾಂಗ್ ಸಿಕ್ಕಿಬಿದ್ದಿದೆ. ಕಲಬುರ್ಗಿ ಜಿಲ್ಲೆ ಚಿತ್ತಾಪುರ ಮೂಲದ ಕಲ್ಯಾಣಿ ಹಾಗೂ ಬಸವರಾಜು, ಬೆಂಗಳೂರಿನ ಬನಶಂಕರಿ ಮೂಲದ ಶಿವಾನಂದ ಹಾಗೂ ಉಷಾ ಬಂಧಿತ ಆರೋಪಿಗಳು.

 ಹೂ ಮಾರುವ ಸೋಗಿನಲ್ಲಿ ಪ್ಲಾನ್:

ಆರೋಪಿ ಉಷಾ ಕಳೆದ ಕೆಲ ದಿನಗಳಿಂದ ಕಳ್ಳತನ ಮಾಡಲು ಹೂ ಮಾರುವ ಸೋಗಿನಲ್ಲಿ ಮನೆಯನ್ನು ಹುಡುಕುತ್ತಿದ್ದಳು. ಯಾವ ಮನೆಯ ಬಾಗಿಲು ಮೂರ್ನಾಲ್ಕು‌ ದಿನದಿಂದ ತೆಗೆದಿರುತ್ತಿರಲಿಲ್ಲ, ಯಾವ ಮನೆಯ ಮುಂದೆ ದಿನಪತ್ರಿಕೆ‌ ಬಳಸದೇ ಬಿದ್ದಿರುತ್ತದೆ, ಯಾವ ಮನೆಯ ಮುಂದೆ ಕಸ ಗುಡಿಸಿರುವುದಿಲ್ಲ ಎನ್ನುವುದನ್ನು ಗಮನಿಸಿ ಈ ಮಾಹಿತಿಯನ್ನು ಆರೋಪಿಗಳಾದ ಕಲ್ಯಾಣಿ, ಬಸವರಾಜು ಹಾಗೂ ಶಿವಾನಂದಗೆ ತಿಳಿಸುತ್ತಿದ್ದಳು. ಉಷಾ ನೀಡಿದ ಮಾಹಿತಿಯನ್ನು ಆಧರಿಸಿ ಕಲ್ಯಾಣಿ ಹಾಗೂ ಬಸವರಾಜು ಮನೆ ಬಾಗಿಲು ಮುರಿದು ಒಳಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲ ದೋಚುತ್ತಿದ್ದರು. ಮತ್ತೊಬ್ಬ ಆರೋಪಿ ಶಿವಕುಮಾರ್ ಮನೆಯ ಹೊರಗೆ ನಿಂತು ಯಾರಾದರೂ ಬರುತ್ತಾರಾ ಎಂಬುದನ್ನು ಗಮನಿಸುತ್ತಿದ್ದ.

ಆಪಲ್ ತಿನ್ನುತ್ತಿದ್ದ ಆರೋಪಿ:

ಇದೇ ರೀತಿ ನೆಲಮಂಗಲದಲ್ಲಿ ಕಳ್ಳತನದಲ್ಲಿ ತೊಡಗಿದ್ದಾಗ ಹಠಾತ್ತನೆ ಮನೆ ಮಾಲೀಕ ಬಂದಾಗ ಮನೆಯ ಹೊರಗಿದ್ದ ಶಿವಾನಂದ ಪರಾರಿಯಾಗುತ್ತಾನೆ. ಮಾಲೀಕ‌ ರವಿ ಮನೆ ಒಳಗೆ ಎಂಟ್ರಿ ಕೊಡುತ್ತಲೇ ಕಳ್ಳತನ ಮಾಡುತ್ತಿದ್ದ ಬಸವರಾಜು ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು ಮನೆಯಿಂದ ಪರಾರಿಯಾಗಿದ್ದ. ಆದರೆ, ಕುಡಿತದ ಮತ್ತಿನಲ್ಲಿದ್ದ ಕಲ್ಯಾಣಿ ಮನೆಯ ಫ್ರಿಡ್ಜ್‌ನಲ್ಲಿದ್ದ ಸೇಬು ಹಣ್ಣನ್ನು ತಿನ್ನುತ್ತಾ ಕುಳಿತಿದ್ದನ್ನು ಕಂಡು ಆರೋಪಿ ಕಲ್ಯಾಣಿಯನ್ನು ಮನೆ ಮಾಲೀಕ ರವಿ ನೆಲಮಂಗಲ ನಗರ ಪೊಲೀಸರಿಗೆ ಒಪ್ಪಿಸಿದ್ದ. ಪ್ರಕರಣ ದಾಖಲಿಸಿಕೊಂಡ ನೆಲಮಂಗಲ‌ ನಗರ ಪೊಲೀಸರು ಪರಾರಿಯಾಗಿದ್ದ ಆರೋಪಿಗಳಾದ ಕಲ್ಯಾಣಿ, ಶಿವಾನಂದ, ಉಷಾಳನ್ನು ಬಂಧಿಸಿ 17 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಕ್ಕೆ ಪಡೆದಿದ್ದಾರೆ.ಹೆಚ್ಚಿನ ತನಿಖೆ ನಡೆಸಿದಾಗ ಆರೋಪಿ ಕಲ್ಯಾಣ್ ಮೇಲೆ ರಾಜ್ಯದ ಉದ್ದಗಲಕ್ಕೂ 50ಕ್ಕೂ ಹೆಚ್ಚು ಕೇಸ್ ದಾಖಲಾಗಿವೆ ಎಂದು ತಿಳಿದುಬಂದಿದೆ. ಒಟ್ಟಾರೆ ಹೂ ಮಾರೋ ನೆಪದಲ್ಲಿ ಒಂಟಿ ಮನೆಗಳ ನಿವಾಸಿಗಳಿಗೆ ಹೂ ಮುಡಿಸಲು ಹೋಗಿ ಕಳ್ಳರು ಸರಿಯಾಗಿ ಸಿಕ್ಕಿಹಾಕಿಕೊಂಡಿದ್ದಾರೆ. ಕಳ್ಳತನವನ್ನೇ ಫುಲ್ ಟೈಂ ಬ್ಯುಸಿನೆಸ್ ಮಾಡಿಕೊಂಡಿದ್ದ ಆರೋಪಿ ಕಲ್ಯಾಣ್ ಜೊತೆಗೆ ಮೂರು ಜನ ಆರೋಪಿಗಳು ಜೈಲಿಗಟ್ಟಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments