Saturday, June 3, 2023
Homeರಾಜಕೀಯನಾನು ಈ ಹಂತಕ್ಕೆ ಬೆಳೆಯಲು ಆರ್ ಎಸ್ ಎಸ್ ಕಾರಣ: ಸಿಎಂ ಯಡಿಯೂರಪ್ಪ

ನಾನು ಈ ಹಂತಕ್ಕೆ ಬೆಳೆಯಲು ಆರ್ ಎಸ್ ಎಸ್ ಕಾರಣ: ಸಿಎಂ ಯಡಿಯೂರಪ್ಪ

- Advertisement -


Renault

Renault
Renault

- Advertisement -

ಶಿವಮೊಗ್ಗ: ಬಡತನದಲ್ಲಿ ಬೆಳೆದ ತಾವು ಈ ಹಂತಕ್ಕೆ ಬರಲು ಆರೆಸ್ಸೆಸ್ ಬೆನ್ನೆಲುಬಾಗಿ ನಿಂತದ್ದೇ ಕಾರಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ನನ್ನೊಲುಮೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಬೆಂಗಳೂರು ಶೇಷಾದ್ರಿಪುರಂನಲ್ಲಿ ಸಂಘದ ಸಂಪರ್ಕಕ್ಕೆ ಬಂದೆ. ಅಲ್ಲಿ ಸ್ವರ್ಗೀಯ ಅಜಿತ್ ಕುಮಾರ್ ಮಾರ್ಗದರ್ಶನ ಮಾಡಿದರು. ಅವರೇ ಶಿಕಾರಿಪುರಕ್ಕೆ ಕಳಿಸಿಕೊಟ್ಟರು. ದೇವರು ಎಲ್ಲರಿಗೂ ಎಲ್ಲಾ ಶಕ್ತಿ ಕೊಟ್ಟಿರುತ್ತಾನೆ. ಅದನ್ನು ಬಳಸಿಕೊಳ್ಳಬೇಕು. ಮುಂದೆ ಬರುವ ಎಲ್ಲಾ ಸವಾಲುಗಳನ್ನು ಎದುರಿಸಿ ದೃಢ ಹೆಜ್ಜೆ ಇರಿಸಿದರೆ ಸಾಧನೆ ಸಾಧ್ಯ ಎಂದರು.
ಇನ್ನೂ ಎರಡೂಕಾಲು ವರ್ಷ ಅಧಿಕಾರ ಇದೆ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಗೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ಶಿವಮೊಗ್ಗ ಜಿಲ್ಲೆಗೆ ಎಲ್ಲಾ ಕೊಡುಗೆ ನೀಡಿದ್ದೇನೆ. ಮುಂದೆ ಅಧಿಕಾರಕ್ಕೆ ಬಂದವರು ಇಲ್ಲಿ ಮಾಡಲು ಯಾವುದೇ ಕೆಲಸ ಉಳಿದಿರಬಾರದು. ಇಲ್ಲಿನ ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಯಾರು ಏನೇ ಟೀಕೆ ಮಾಡಲಿ, ನಾವು ಹೋಗುತ್ತಿರುವ ದಾರಿ ಸರಿ ಇದ್ದರೆ ಟೀಕೆ ಟಿಪ್ಪಣಿ ಗಳಿಗೆ ತಲೆಬಾಗುವ ಅಗತ್ಯವಿಲ್ಲ. ನನ್ನ ಹೋರಾಟ, ಸೋಲು, ಗೆಲುವು, ಧೈರ್ಯ, ಕೆಚ್ಚು ಎಲ್ಲದಕ್ಕೂ ಜನರೇ ಕಾರಣ ಎಂದ ಅವರು, ಇನಿತು ಜನುಮದಲಿ ನಾನೆನಿತು ಋಣಿಯೋ ಎಂದು ಕವಿ ಜಿಎಸ್ಎಸ್ ಕವನ ಮೆಲುಕು ಹಾಕಿದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments