Sunday, September 24, 2023
HomeUncategorizedಮಾಲಾಶ್ರೀ ಮಗಳ ಟ್ಯಾಟೂ ಬಗ್ಗೆ ಗೊತ್ತಾ? ಇಲ್ಲಿದೆ ವಿಶೇಷ!

ಮಾಲಾಶ್ರೀ ಮಗಳ ಟ್ಯಾಟೂ ಬಗ್ಗೆ ಗೊತ್ತಾ? ಇಲ್ಲಿದೆ ವಿಶೇಷ!

- Advertisement -



Renault

Renault
Renault

- Advertisement -

ಒಳಗೆ ಸೇರಿದರೆ ಗುಂಡು.. ಹುಡುಗಿ ಆಗುವಳು ಗಂಡು ಹಾಡಿಗೆ ಸಖತ್ತಾಗೆ ಕುಣಿದು ಚಂದನವನದಲ್ಲಿ ಪಡ್ಡೆಗಳ ಕನಸಿನ ರಾಣಿಯಾದವರು ನಟಿ ಮಾಲಾಶ್ರೀ. ಒಂದು ಕಾಲಕ್ಕೆ ಸ್ಯಾಂಡಲ್ ವುಡ್ ನ ಸ್ಟಾರ್ ನಟಿಯಾಗಿ, ಬಲು ಬೇಡಿಕೆಯನ್ನು ಹೊಂದಿದ್ದ ನಟಿ.

ತನ್ನ ಅಂದ ಹಾಗೂ ನಟನೆಯಿಂದ , ಕನ್ನಡದ ಎಲ್ಲಾ ಸ್ಟಾರ್ ನಟರುಗಳ ಜೊತೆ ನಟಿಸಿ ಕನ್ನಡದ ನಂಬರ್ ಒನ್ ಹೀರೋಯಿನ್ ಆಗಿ, ತನ್ನ ಅಭಿಮಾನಿಗಳ ಕನಸುಗಳಿಗೆ ಕಿಚ್ಚು ಹಚ್ಚಿದ್ದ ನಟಿ ಎಂದರೆ ಅದು ಸುಳ್ಳಲ್ಲ.

ಗ್ಲಾಮರ್ ನಿಂದ ಹಿಡಿದು ನಟನೆಗೆ ಪ್ರಾಧ್ಯಾನ್ಯತೆ ಇರುವ ಸಿನಿಮಾಗಳು ಮಾತ್ರವೇ ಅಲ್ಲದೇ, ನಾಯಕಿ ಪ್ರಧಾನ ಪಾತ್ರಗಳಲ್ಲಿ, ಲೇಡಿ ಪೋಲಿಸ್ ಪಾತ್ರಗಳಲ್ಲಿ ಅಬ್ಬರಿಸಿದಷ್ಟು ಸ್ಯಾಂಡಲ್ವುಡ್ ನ ಇನ್ನಾವ ನಟಿ ಕೂಡಾ ಸೃಷ್ಟಿಸಲು ಸಾಧ್ಯವಾಗಿಲ್ಲ.

ನಟಿ ಮಾಲಾಶ್ರೀಯವರು ಮೊದಲಿನಂತೆ ಹೆಚ್ಚಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲವಾದ್ರೂ, ಗೃಹಿಣಿಯಾಗಿ ಕುಟುಂಬದ ಜವಾಬ್ದಾರಿಯ ನಿರ್ವಹಣೆಯಲ್ಲಿ ಬ್ಯುಸಿಯಾಗಿದ್ದಾರೆ.. ಒಂದು ಹೆಣ್ಣು, ಒಂದು ಗಂಡು ಸಂತಾನವಿರುವ ಮಾಲಾಶ್ರೀ ಅವರು ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತಾರೆ.

ಇದೀಗ ನಟಿ ಮಾಲಾಶ್ರೀ ಅವರು ತಮ್ಮ ಮಗಳ ಜೊತೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮಗಳ ಜೊತೆಗೆ ಅವರು ಒಂದು ಮ್ಯಾಚಿಂಗ್ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಂಡ ಮಾಲಾಶ್ರೀ ಅವರು ಈ ವಿಷಯವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

ಮಾಲಾಶ್ರೀ ಅವರು ಮಗಳ ಜೊತೆಗೆ ತಮ್ಮ ಕೈ ಮೇಲೆ ಸ್ಮೈಲಿ ಇಮೋಜಿಯನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಲ್ಲದೇ ಗಂಡ ಮತ್ತು ಮಗಳೊಡನೆ ಫೋಟೋ ತೆಗೆಸಿಕೊಂಡ ಅವರು ಅದನ್ನು ತಮ್ಮ ಟ್ವಿಟರ್ ನಲ್ಲಿ ಕೂಡಾ ಶೇರ್ ಮಾಡಿಕೊಂಡಿದ್ದಾರೆ.

ಅಪರೂಪಕ್ಕೊಮ್ಮೆ ತಮ್ಮ ನೆಚ್ಚಿನ ನಟಿಯನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಹಾಕಿದ್ದಾರೆ. ಅಲ್ಲದೆ ಆದಷ್ಟು ಬೇಗನೆ ಸಿನಿಮಾಗಲ್ಲಿ ಕಾಣಿಸಿಕೊಳ್ಳಿ ಎಂದು ಬೇಡಿಕೆಯಿಟ್ಟಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments