ಸರಕಾರಿ ಆಸ್ಪತ್ರೆ ಗೆ ಕೋವಿಡ್ ಲಸಿಕೆಗೆಗೆ ದಾಪುಗಾಲು
ಅಲ್ಲಿನ ಆರೋಗ್ಯ ಸಿಬ್ಬಂದಿಯ ಕರ್ತವ್ಯ ನಿಷ್ಠೆ ಗೆ ಭೇಷ್ ಎಂದ ಚಿತ್ರ ನಟ-ತಮ್ಮಣ್ಣ ಶೆಟ್ಟಿ.
ಮಂಗಳೂರು: ಜನರು ಖಾಸಗಿ ಆಸ್ಪತ್ರೆ ಯಲ್ಲಿ ಎಷ್ಟೇ ದುಬಾರಿ ಆದರೂ ಸಾಕು ಜನ ಅದನ್ನೇ ನೆಚ್ಚಿಕೊಳ್ಳುತ್ತಾರೆ. ಸರಕಾರಿ ಆಸ್ಪತ್ರೆ ಎಂದರೆ ಹೆಚ್ಚಿನ ಪ್ರಮಾಣದಲ್ಲಿ ಜನ ಅಲ್ಲಿ ಸೌಕರ್ಯ ,ಸೌಲಬ್ಯ ಕಮ್ಮಿ ಎಂದೇ ಜನ ಅಲ್ಲಿ ಉತ್ತಮ ಗುಣಮಟ್ಟದ ಉಚಿತ ಚಿಕಿತ್ಸೆ ಸೌಲಭ್ಯ ಇದ್ದರೂ ಅಲ್ಲಿ ಹೋಗಲು ಹಿಂದೇಟು ಹಾಕುತ್ತಾರೆ.ಆದರೆ ಮೊನ್ನೆ ಚಲನಚಿತ್ರ ನಟ ನಿರ್ಮಾಪಕ ತಮ್ಮಣ್ಣ ಶೆಟ್ಟಿಯವರು ಕೋವಿಡ್ ಲಸಿಕೆ ತೆಗೆದುಕೊಳ್ಳಲು ಮಂಗಳೂರಿನ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಗೆ ಹೋಗುತ್ತಾರೆ.ಅಲ್ಲಿಯ ವೈದ್ಯಕೀಯ ಸಿಬ್ಬಂದಿಗಳ ಕರ್ತವ್ಯ ನಿಷ್ಠೆ ಮತ್ತು ಸೇವಾ ಮನೋಭಾವ ಸಾಮಾಜಿಕ ಜಾಲತಾಣ ವಾಟ್ಶಪ್ ನಲ್ಲಿ ಈ ಕುರಿತು ಹೊಗಳಿ ಬರೆದಿದ್ದಾರೆ .ಅದೀಗ ಸಖತ್ ವೈರಲ್ ಆಗಿದೆ..ಮಾತ್ರ ಅಲ್ಲದೆ ಎಲ್ಲರೂ ಕೋವಿಡ್ ಲಸಿಕೆ ಯನ್ನ ಸರಕಾರಿ ಆಸ್ಪತ್ರೆಯಲ್ಲಿ ತೆಗೆದುಕೊಳ್ಳುವ ಮೂಲಕ ಕೊರೋನ ಸೋಂಕು ಮುಕ್ತ ಸಮಾಜ ನಿರ್ಮಾಣ ಮಾಡಲು ಸರಕಾರಕ್ಕೆ ಬೆಂಬಲಿಸಬೇಕು ಎಂದು ಕರೆಕೊಟ್ಟಿದ್ದಾರೆ.
ಅದರಲ್ಲಿ ಏನು ಬರೆದಿದ್ದಾರೆ ಎಂದರೆ- “
ಸಾರ್ವಜನಿಕ ವೇದಿಕೆಗಳಲ್ಲಿ ಕೆಲವು ಸಲ ನಮಗೆ ಸೇವೆಯ ಬಗ್ಗೆ ಸರಿ ತಪ್ಪುಗಳನ್ನು ಮಾತನಾಡಲು ಅವಕಾಶಗಳು ಸಿಗುತ್ತದೆ. ಈ ಉದ್ದೇಶದಿಂದ ನಾನು ನಗರದ ವೆನ್ ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರ್ಧರಿಸಿದೆ. ಸರಕಾರಿ ಆಸ್ಪತ್ರೆಯ ವೈದ್ಯಕೀಯ ಸೇವೆಯನ್ನು ಖಾಸಗಿ ಆಸ್ಪತ್ರೆಯ ವೈದ್ಯಕೀಯ ಸೇವೆಯನ್ನು ತುಲನೆ ಮಾಡಿ ಖಾಸಗಿ ಆಸ್ಪತ್ರೆಯನ್ನೇ ಮೆಚ್ಚಿಕೊಳ್ಳುವ ಜನ ತುಂಬ ಮಂದಿ ನಮ್ಮಲ್ಲೇ ಇದ್ದಾರೆ. ಆದರೆ ನಾನು ಕೋವಿಡ್ ಲಸಿಕೆಯನ್ನು ತೆಗೆಕೊಳ್ಳಲು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಹೋಗಿದ್ದೆ. ನಾನು ಹೋಗುವಾಗ ತಡವಾಗಿತ್ತು.ಆದರೂ ಆ ಸಮಯದ ಕೆಲಸದ ಒತ್ತಡದ ಮದ್ಯೆಯು ಸಮಯ ಮೀರಿದರು, ಅಲ್ಲಿನ ಅರೋಗ್ಯ ಸಿಬ್ಬಂದಿಯೋರ್ವರಾದ, ಜಯಂತಿ ಮೇಡಂರವರ ತಾಳ್ಮೆ ಮತ್ತು ಲಸಿಕೆಯ ಬಗ್ಗೆ ನಮಗೆ ಅರಿವು ನೀಡುವ ಆರೋಗ್ಯ ಸೇವೆಯನ್ನು ಕಂಡು ನನಗೇ ಅಚ್ಚರಿಯಾಯಿತು.ಇದು ಸರಕಾರಿ ಆಸ್ಪತ್ರೆಯಾ? ಅಥವಾ ಖಾಸಗಿ ಆಸ್ಪತ್ರೆಯಾ ? ಎಂಬ ಶಂಕೆ ಮನದಲ್ಲಿ ಮೂಡಿತು.ಅಲ್ಲಿನ ಆರೋಗ್ಯ ಸಿಬ್ಬಂದಿಗಳು ಜನರೊಂದಿಗೆ ಆತ್ಮೀಯವಾಗಿ ಮಾತಾಡುವ ರೀತಿ ,ತಾಳ್ಮೆ ,ಸಮಾದಾನದ ಮಾತುಗಳು.ಜನರು ಸರಕಾರಿ ಆಸ್ಪತ್ರೆ ಎಂಬುದನ್ನು ಅರ್ಥ ಮಾಡಿಕೊಳ್ಲುದಕ್ಕಿಂತ ಭಿನ್ನವಾಗಿತ್ತು.
ಏನೇ ಇರಲಿ. ಇಂತಹ ಸರಕಾರಿ ಆಸ್ಪತ್ರೆ ಜಯಂತಿ ಮೇಡಮ್ ರಂತಹ ಆರೋಗ್ಯ ಸಿಬ್ಬಂದಿ ಗಳಿಂದ ಸರಕಾರಿ ಆಸ್ಪತ್ರೆ ಗುಣಮಟ್ಟದ ಹೆಚ್ಚು ಆಗಿದೆ ಎಂದು ಹೇಳಿದ್ರು ತಪ್ಪಾಗಲಾರದು.ಇವತ್ತು ಸೇವೆಗೆ ಮಹತ್ವ ನೀಡದೆ ಮೃಗಿಯವಾಗಿ ವರ್ತಿಸುವ ಅನೇಕ ಜೀವಿಗಳು,ಸಂಬಳವನ್ನೇ ಪಡೆದು ಕೆಲಸವನ್ನೇ ಮಾಡದ ಎಷ್ಟೋ ಸರಕಾರಿ ನೌಕರರು ಇಂತಹ ನಿಷ್ಟಾವಂತ ಸರಕಾರಿ ನೌಕರರನ್ನ ನೋಡಿ ಕಲಿಯುವಂತಾಗಲಿ, ನಿಮ್ಮಂತವರು ಆಸ್ಪತ್ರೆಗೂ ನಮಗೂ ಸಮಾಜಕ್ಕೂ ಮಾಣಿಕ್ಯಕ್ಕೆ ಸಮನಾದ ಅಸ್ತಿ ಎಂದು ನಂಬಿದ್ದೇನೆ, ಅವರು ನೀವು ಮುಂದಿನ ದಿನಗಳಲ್ಲಿ ಉನ್ನತ ಹುದ್ದೆ ಅಲಂಕಾರಿಸುವಂತಾಗಲಿ ಎಂದು ಹೊಗಳಿ ಬರೆದಿದ್ದಾರೆ.