Saturday, June 3, 2023
Homeಸಿನಿಮಾಇದು ಸುದೀಪ್ ಮಗಳು: ಸಾನ್ವಿ ಹಾಡಿಗೆ ಎಲ್ಲಾರಿಂದ ವಾಹ್ !

ಇದು ಸುದೀಪ್ ಮಗಳು: ಸಾನ್ವಿ ಹಾಡಿಗೆ ಎಲ್ಲಾರಿಂದ ವಾಹ್ !

- Advertisement -


Renault

Renault
Renault

- Advertisement -

ನಟರ ಮಕ್ಕಳು ಸಾಮಾನ್ಯವಾಗಿ ನಟನೆಗೆ ಇಳಿಯೋದು ವಾಡಿಕೆ. ಆದರೆ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಗೆ ಮಗಳು ಮಾತ್ರ‌ ಗಾಯನ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಭರವಸೆ ಮೂಡಿಸುವ ಧ್ವನಿ ಎನ್ನಿಸಿದ್ದಾರೆ.

ನಟನೆ,ಆಂಕರಿಂಗ್,ಕ್ರಿಕೆಟ್ ಬಹುಮುಖ ಪ್ರತಿಭೆಯಾಗಿ, ಬಹುಭಾಷಾ ನಟರಾಗಿ ಹೆಸರು ಮಾಡಿದ ಕಿಚ್ಚ್ ಸುದೀಪ್ ಗೆ ಒಬ್ಬಳೇ ಮಗಳು ಸಾನ್ವಿ ಮಗಳನ್ನು ತುಂಬಾ ಪ್ರೀತಿಸುವ ಸುದೀಪ್ ಆಕೆಗೆ ಸಂಗೀತದಲ್ಲಿ ಒಲವಿದೆ ಎಂಬುದನ್ನು ಹತ್ತಾರು ಬಾರಿ ಹೇಳಿದ್ದಾರೆ. ಇದಕ್ಕೆ ಪೂರಕ ಎಂಬಂಗೆ ಸಾನ್ವಿ ಸುದೀಪ್ ಅವರ ಮಾತ್ ಮಾತಲ್ಲಿ ಚಿತ್ರದ ಹಾಡಿಗೂ ಧ್ವನಿಯಾಗಿದ್ದರು.

ಇಷ್ಟೇ ಅಲ್ಲ ಈಗ ಅಧಿಕೃತವಾಗಿ ಗಾಯನ ಲೋಕಕ್ಕೆ ಎಂಟ್ರಿಕೊಟ್ಟಿರುವ ಸಾನ್ವಿ ಯೂಟ್ಯೂಬ್ ನಲ್ಲಿ Rice up by Andra Day ಹಾಡಿಗೆ ಧ್ವನಿಯಾಗಿದ್ದಾರೆ.ಪಾಪ್‌ ಹಾಡನ್ನು ಸಾನ್ವಿ ಚೆನ್ನಾಗಿ ಹಾಡಿದ್ದು, ಎಲ್ಲರ ಮೆಚ್ಚುಗೆ ಗೆ ಪಾತ್ರವಾಗಿದೆ.

ನಟ‌ ಕಾರ್ತೀಕ್ ಜಯರಾಂ ಸಾನ್ವಿ ಹಾಡಿನ ವಿಡಿಯೋ ಶೇರ್ ಮಾಡಿದ್ದು ಆಕೆಯ ಸಂಗೀತ ಸಾಧನೆಯನ್ನು ಕೊಂಡಾಡಿದ್ದಾರೆ.

೧೧ ವರ್ಷದಿಂದ ಈ‌ ಮಗುವನ್ನು ನಾನು ಬಲ್ಲೆ. ಆಕೆಯಲ್ಲಿ ಇಂತಹದೊಂದು ವಿಶಿಷ್ಟ ಧ್ವನಿ ಇದೆ ಎಂಬ ಅರಿವಿರಲಿಲ್ಲ. ದೇವರು ಆಕೆಗೆ ಕೊಟ್ಟ ವರಕ್ಕಿಂತ ಆಕೆಯ ಡೆಡಿಕೇಶನ್ ಹಾಗೂ ಹಾರ್ಡ್ ವರ್ಕ್ ಆಕೆಯನ್ನು ಸಂಗೀತಕಲಾವಿದೆಯಾಗಿ ರೂಪಿಸಿದೆ ಎಂದಿದ್ದಾರೆ.

ಈ ಹಿಂದೆ ಸಾನ್ವಿ ಬಿಗ್ ಬಾಸ್ ನ ವಾಸುಕಿ ರಚನೆಯ ಮನಸ್ಸಿಂದ ಯಾರು ಕೆಟ್ಟವರಲ್ಲ ಹಾಡನ್ನು ಹಾಡಿ ಜನಮೆಚ್ಚುಗೆ ಗಳಿಸಿದ್ದರು.ಸುದೀಪ್ ಪುತ್ರಿ ಹಾಡಿದ ಹಾಡಿನ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು ಜನರು ಸಾನ್ವಿ ಸಂಗೀತ ಪ್ರೇಮಕ್ಕೆ ಸಲಾಂ ಅಂತಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments