Wednesday, May 31, 2023
Homeಕರಾವಳಿಹುಡುಗಿಯರೇ, ಯುವತಿಯರೇ , ಸೋಶಿಯಲ್ ಮೀಡಿಯಾ ನಿಮಗೆ ಒಪ್ಪುವುದೋ? ಒಂದು ಬಾರಿ ಯೋಚಿಸಿ!

ಹುಡುಗಿಯರೇ, ಯುವತಿಯರೇ , ಸೋಶಿಯಲ್ ಮೀಡಿಯಾ ನಿಮಗೆ ಒಪ್ಪುವುದೋ? ಒಂದು ಬಾರಿ ಯೋಚಿಸಿ!

- Advertisement -


Renault

Renault
Renault

- Advertisement -

ಮಂಗಳೂರು: ತುಂಬಾ ದೂರದ ಕಥೆ ಏನಲ್ಲ. ಅವಳ ಮನೆ ಅತ್ತಾವರ ಸಮೀಪ. ಬಂದಿದ್ದು ಒಂದು ಮಿಸ್ ಕಾಲ್. 19 ವರ್ಷದ ಆ ಹುಡುಗಿ ವಾಪಾಸ್ ಕಾಲ್ ಮಾಡಿದಳು. ಅದು ಅವಳ Whatsapp ನಂಬರ್. ಅದೇ ನಂಬರ್ ನಲ್ಲಿ ಟೆಲಿಗ್ರಾಂ ಮತ್ತು ಫೇಸ್ಬುಕ್ ಎಲ್ಲವೂ ಸಿಗುತ್ತೆ.
ಮೊದಲ ಬಾರಿಗೆ ಆಕೆಗೆ ವಾಟ್ಯಾಪ್ಪ್ chat ನಲ್ಲಿ ಸಿಕ್ಕಿದ್ದು ಕೆಟ್ಟದಾಗಿ ಇರೋ ವಿಡಿಯೋ. ಯಾಕೋ ಹದಿಹರೆಯದ ಹುಡುಗಿ chat ಮಾಡಿದ್ಲು. ಬ್ಯಾಂಕ್ ಅಕೌಂಟ್ ಲಿಂಕ್ ಅಯ್ತು ಆ ಹುಡುಗನಿಗೆ.


ಬ್ಯಾಂಕ್ ಅಕೌಂಟಿಗೆ ತಂದೆ ಪ್ರತೀ ತಿಂಗಳೂ ಭಾರತದ 15,000 ರೂಪಾಯಿ ಕಳಿಸ್ತಾ ಇದ್ರು. ಅಮ್ಮ ಆಗೊಮ್ಮೆ ಈಗೊಮ್ಮೆ ಅಂತ 10,000 ಕಳಿಸ್ತೀದ್ರು. ಕೆಲವೊಮ್ಮೆ Flipkart ನಲ್ಲಿ teenage girls ಇಷ್ಟಪಡುವ dress ಕೂಡ ಬರುತ್ತಿತ್ತು. ಇದೆಲ್ಲ ವಿವರ ತಿಳಿದ ಪೊಲೀಸ್ ಆಫೀಸರ್ ದಂಗಾಗಿ ಬಿಟ್ಟಿದ್ದರು.


ಅವರು ಹೇಳಿದ್ದು ಇಷ್ಟೇ: ಈ ಕೇಸ್ ನಲ್ಲಿ ನಾನು ಒಂದಷ್ಟು ಜನರನ್ನು book ಮಾಡಬಹುದು ಆದರೆ ತಂದೆ-ತಾಯಿ ಮತ್ತು social media ಹಾಗೆಯೇ mobile phone ನ ಇಂಟರ್ನೆಟ್ ಪ್ಯಾಕ್ missuse ಮಾಡಿದ ಆ ಹುಡುಗಿಗೆ ಯಾವ ಶಿಕ್ಷೆ ಆಗ ಬಹುದು?
ಕಾನೂನು ರೀತ್ಯಾ ಶಿಕ್ಷೆ ಆಗಲಿ ಅಂದ್ರೆ, ಇಲ್ಲಿ ಎಲ್ಲವೂ ನಾವು ಅಂದುಕೊಂಡ ಹಾಗೆ ಆಗೋಲ್ಲ. “ನೀವು ನಿಮ್ಮ ಶೈಲಿಯಲ್ಲಿ ಬಗೆಹರಿಸಿ ಕೊಳ್ಳಿ, ಯಾಕೆಂದ್ರೆ ಅವಮಾನಗೊಂಡು ಇಲ್ಲಿನ ಆರೋಪಿಗಳು ಏನಾದ್ರೂ ಮಾಡಿಕೊಂಡ್ರೆ ಕಷ್ಟ ಅಲ್ವಾ?. ನೀವು ಮಾಧ್ಯಮದಲ್ಲಿ ಒಂದಿಷ್ಟು ಸಲಹೆ ಕೊಡಿ. ಹೆಣ್ಣುಮಕ್ಕಳು ಈಗ ತುಂಬಾ ಧೈರ್ಯ ತೋರಿಸುತ್ತಾರೆ. ಅನುಭವ ಇರುವ ಹಿರಿಯರನ್ನು ಅಥವಾ ಪೊಲೀಸರನ್ನು ಕ್ಯಾರೇ ಅನ್ನೋಲ್ಲ,” ಅಂದರು.
ಆದ್ರೂ ನತದೃಷ್ಟ ಯುವತಿಯರ ಕಥೆ ತಿಳಿದ ಪೊಲೀಸ್ ಅಧಿಕಾರಿ ಹೇಳಿದ ಕೆಲವು ಪಾಯಿಂಟ್ಸ್ ಇಲ್ಲಿವೆ.

ಇದೆಲ್ಲ ಹೆಣ್ಣುಮಕ್ಕಳು ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುವ ವಿಷಯಗಳು.
1) ನಿಮ್ಮವರು ಯಾರೋ ನಿಮ್ಮ ಫ್ರೆಂಡ್ ನಂಬರ್ ಕೇಳ್ತಾರೆ!

  • ನೀವೇನು ಮಾಡತೀರಾ? ಆಕೆಯ ನಂಬರ್ ಬಾಯಿಪಾಠ ಇದ್ರೆ ಹೇಳ್ತೀರಾ. ಇಲ್ಲಾಂದ್ರೆ ಆಕೆಯ facebook, telegram, ಇನ್ಸ್ಟಾಗ್ರಾಮ್, details ಕೊಡ್ತಿರಾ. ಪಕ್ಕದಲ್ಲಿ ಯಾರು ಇದ್ದಾರೆ ಅಂತಾ ನೋಡೋದಿಲ್ಲ. ಆತ ಅಥವಾ ಆಕೆ note ಮಾಡಿ ಬೇರೆ ಜನಕ್ಕೆ ಕಳಿಸ್ತಾರೆ.
    2)ನಿಮ್ಮ ATM PIN ನಿಮಗೆ atm ಒಳಗೆ ಹೋದಾಗ ಮರೆತು ಹೋಗಿರುತ್ತೆ. ನಿಮ್ಮ ಫ್ರೆಂಡ್ ಅಥವಾ ಸಂಬಂಧಿಕರ ಜೊತೆಗೆ ಕೇಳಿ public place ನಲ್ಲಿ ಸುತ್ತ ಮುತ್ತ ಯಾರಿದ್ದಾರೆ ಅಂತಾ ನೋಡದೇನೆ ಡೀಟೇಲ್ಸ್ ಕೊಡ್ತಿರಾ? ನಿಮ್ಮ ಮಾತಿನಲ್ಲಿ ಯಾವುದಾದರು ಒಂದು ಡೀಟೇಲ್ ಪಡೆದ ವ್ಯಕ್ತಿ ಯಾರು ಇರಬಹುದು?
    3) ನಿಮ್ಮ ಮೊಬೈಲ್ ಫೋನ್ ಸರಿ ಇರೋದಿಲ್ಲ, ಅಥವಾ ನಿಮಗೆ ಅರ್ಜೆಂಟ್ ರಿಚಾರ್ಜ್ ಆಗಬೇಕು ಅಥವಾ number port ಮಾಡಬೇಕು. ನಿಮ್ಮ ಮೊಬೈಲ್ ಫೋನ್ ಇನ್ನೊಬ್ಬರಿಗೆ ಕೊಡುತ್ತೀರಾ.
    ಹಿಂದೊಮ್ಮೆ ನೀವು ಸುಂದರವಾಗಿ ಡ್ರೆಸ್ ಮಾಡಿದ್ದ ಫೋಟೋ ಅದರಲ್ಲಿ ಇರುತ್ತೆ. Boyfriend ಅಥವಾ girlfriend ಜೊತೆಗೆ ಇದ್ದ ಫೋಟೋ ಅದರಲ್ಲಿ ಇರುತ್ತೆ. ಇಷ್ಟು ಸಾಕಾಗುತ್ತೆ.
    4) ಎಲ್ಲರೂ ಭಾವಿಸೋದು ನಾವು ಸೂಪರ್ ಮ್ಯಾನ್, superior than others ಅಂತಾ. ಆದರೆ ಇನ್ನೊಬ್ಬ/ಇನ್ನೊಬ್ಬಳು ಅದಕ್ಕಿಂತ ಮಿಗಿಲು ಇರತಾರೆ.

5) Replying a missed call:
ಯುವತಿಯರೇ, ನೀವು ಮೊಬೈಲ್ ಫೋನ್ ಚಾರ್ಜ್ ಗೆ ಇಟ್ಟು, ಟಾಯ್ಲೆಟ್/Washroom ಅಥವಾ ಇನ್ನೆಲ್ಲೋ ಹೋಗಿ ಇರ್ತಿರ. ವಾಪಾಸ್ ಬರೋವಾಗ ಯಾವೊದೋ ಒಂದು missed call ಇರುತ್ತೆ. ಅದು ನಿಮಗೆ ಪರಿಚಯ ಇಲ್ಲದೇ ಇರೋದು. ಅದಕ್ಕೆ ನೀವು ಕಾಲ್ ಮಾಡಿ ಕೇಳ್ತಿರಾ? ನಿಮಗ್ಯಾಕೆ? ಅರ್ಜೆಂಟ್ ಇದ್ರೆ ಅವರು ಕಾಲ್ ಮಾಡಲ್ವಾ?

6)ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ friends ಗಾಗಿ ಒಂದಷ್ಟು ಮಾಹಿತಿ,, ಫೋಟೋ, share ಮಾಡ್ಕೋತೀರಾ. ಅದು ಒಂದುಸಾರಿ ಅಲ್ಲಿ publish ಆದ್ರೆ ಅದು ಪಬ್ಲಿಕ್ ಆಗಿರುತ್ತೆ!

ಇದಿಷ್ಟು ಸರಳ 6 ಪಾಯಿಂಟ್ಸ್ ಅಷ್ಟೇ
ಎಲ್ಲವನ್ನೂ point-out ಮಾಡಿದ್ರೆ ನೂರಾ ಎಂಟು ಇದೆ.
ಮಹಿಳೆಯರ ಮನಸ್ಸು ಮುಗ್ಧ ಅಂತಾ ತಿಳ್ಕೊಂಡ ತುಂಬಾ ಜನ ಇದ್ದಾರೆ
ಗಂಡಸರನ್ನು ಮೋಸ ಮಾಡೋದು ಸುಲಭ ಎಂದು ತಿಳಿದ ತುಂಬಾ ಹೆಂಗಸರು/ಯುವತಿಯರು ಇದ್ದಾರೆ.
ಮೊಬೈಲ್, ಇಂಟರ್ನೆಟ್, ಸೋಶಿಯಲ್ ಮೀಡಿಯಾ ಬಳಸುವಾಗ ಜಾಗರೂಕತೆ ಇರಲಿ. ನಿಮ್ಮ ಒಂದು ಕ್ಷಣದ ನಿರ್ಲಕ್ಷ ಭವಿಷ್ಯದ ನೂರಾರು ವರ್ಷ ಕೊರಗುವಂತಾಗುತ್ತದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments