ಮಂಗಳೂರು: ಅವರಿಗೆ ಹುಟ್ಟಿನಿಂದಲೇ ಬಡತನ. ಮದುವೆಯಾದ ಬಳಿಕವೂ ಬಡತನದಲ್ಲೇ ಕಾಲಾಹರಣ. ಹೆಸರು ಮಹಮ್ಮದ್ ರಫೀಕ್, ಇವರ ಪತ್ನಿಯ ಹೆಸರು ರಝಿಯಾ. ಹುಟ್ಟಿನಿಂದಲೇ ಬಡತನದಲ್ಲೇ ಜೀವನ. ಬಡತನದ ಮೇಲೆ ಮತ್ತೆ ಬಡತನದ ಬರಸಿಡಿಲು ಬಿದ್ದಂತಾಗಿರುವುದು ಮಗಳಿಗೆ ಎದುರಾದ ಕ್ಯಾನ್ಸರ್ ಖಾಯಿಲೆ. ಹೌದು ರಫೀಕ್ ಹಾಗೂ ಪತ್ನಿ ರಝಿಯಾ ಅವರ ಮುದ್ದಿನ ಮಗಳು ಆಯಿ಼ಷುತುಲ್ ರಫೀಝಾಳಿಗೆ ಕ್ಯಾನ್ಸರ್ ಖಾಯಿಲೆ ಎದುರಾಗಿರುವುದು ಈ ದಂಪತಿಗೆ ಮತ್ತಷ್ಟು ಸಂಕಷ್ಟವನ್ನು ಉಂಟುಮಾಡಿದೆ.
ಮಂಗಳೂರಿನ ಕೃಷ್ಣ ನಗರ ಬಯೋಡಿ ಬೋಂದೆಲ್ ನ ನಿವಾಸಿಯಾಗಿರುವ ಇವರು ಬಡತನದಲ್ಲೆ ತನ್ನ ಜೀವನವನ್ನ ಮುನ್ನಡೆಸುತ್ತಿದ್ರು. ಇದೀಗ ಅವರ ಮುದ್ದಾದ ಮಗಳಿಗೆ ಕ್ಯಾನ್ಸರ್ ಖಾಯಿಲೆ ಎದುರಾಗಿದ್ದು, ಸಹೃದಯಿ ದಾನಿಗಳ ಸಹಾಯಹಸ್ತಕ್ಕಾಗಿ ಬೇಡಿಕೊಂಡಿದ್ದಾರೆ. ಆರನೇ ತರಗತಿಯಲ್ಲಿ ಕಲಿಯುತ್ತಿರುವ ರಫೀಝಾಗೆ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿರುವುದರಿಂದ ಧನಸಹಾಯಕ್ಕೆ ದಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಬಡತನ ಇರುವುದರಿಂದ ಈ ದಂಪತಿಗೆ ಹಣ ಕೂಡಿಸಲು ಸಾಧ್ಯವಿಲ್ಲದಿರುವುದರಿಂದ ದಾನಿಗಳ ಮೂಲಕ ಸಹಾಯಹಸ್ತಕ್ಕಾಗಿ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಜ್ಯೋತಿಯಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರಫೀಝಾಳ ಚಿಕಿತ್ಸೆಗೆ ದಾನಿಗಳು ಕೈಜೋಡಿಸಬೇಕಾಗಿದ್ದಾರೆ. ಡಾಕ್ಟರ್ ಹರ್ಷ ಅವರ ಪ್ರಕಾರ 10 ಲಕ್ಷ ಹಣದ ಅಗತ್ಯವಿದೆ ಎಂದು ಹೇಳಿದ್ದಾರೆ. ಹಾಗಾಗಿ ಸಹೃದಯಿ ದಾನಿಗಳು ಮುಂದೆ ಬಂದು ಮಗುವಿನ ಚಿಕಿತ್ಸೆಗೆ ಧನಸಹಾಯದ ಮೂಲಕ ಸ್ಪಂದಿಸಬೇಕಾಗಿದೆ.
ಸಹಾಯ ಮಾಡಲಿಚ್ಛಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ದಂಪತಿಯ ಕಳಕಳಿಯ ವಿನಂತಿ…
Mohammad Rafiq
Mub.No:+917019135307
GOOgle pay :+917019135307
ಬೇಂಕ್ ಖಾತೆ ನಂಬ್ರ
Mohammad Rafiq
A/c no:6052500101736601
Karnataka bank
pachanady branch
IFSC code KARB0000605
Mangalore.575008