Friday, October 7, 2022
Homeಕರಾವಳಿಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಹಿರಿಯ ಸದಸ್ಯ ಪ್ರೇಮಾನಂದ ಶೆಟ್ಟಿ ಹೆಸರು ಫೈನಲ್?

ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಹಿರಿಯ ಸದಸ್ಯ ಪ್ರೇಮಾನಂದ ಶೆಟ್ಟಿ ಹೆಸರು ಫೈನಲ್?

- Advertisement -
Renault

Renault

Renault

- Advertisement -

ಮಂಗಳೂರು, ಮಾ.1:  ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಹಿರಿಯ ಸದಸ್ಯ ಪ್ರೇಮಾನಂದ ಶೆಟ್ಟಿ ಹೆಸರು ಬಹುತೇಕ ಫೈನಲ್ ಆಗಿದೆ. 

ಮೇಯರ್ – ಉಪ ಮೇಯರ್ ಸ್ಥಾನಕ್ಕೆ ನಾಳೆ (ಅ.2 ) ಪಾಲಿಕೆ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಸಾಮಾನ್ಯ ವಿಭಾಗ ಮತ್ತು ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಮಂಗಳಾದೇವಿ ವಾರ್ಡಿನಲ್ಲಿ ಐದು ಬಾರಿ ಗೆದ್ದಿರುವ ಪ್ರೇಮಾನಂದ ಶೆಟ್ಟಿ ಹಿರಿಯ ಸದಸ್ಯನಾಗಿರುವ ಹಿನ್ನೆಲೆಯಲ್ಲಿ ಕಳೆದ ಬಾರಿಯೇ ಮೇಯರ್ ಅಭ್ಯರ್ಥಿ ಎನ್ನಲಾಗಿತ್ತು. ಮೀಸಲು ಬದಲಾದ ಹಿನ್ನೆಲೆಯಲ್ಲಿ ದಿವಾಕರ ಪಾಂಡೇಶ್ವರ ಅವರನ್ನು ಪರಿಗಣಿಸಲಾಗಿತ್ತು.

ಉಪ ಮೇಯರ್ ಸ್ಥಾನಕ್ಕೆ ಕುಂಜತ್ ಬೈಲ್ ವಾರ್ಡಿನ ಮಂಗಳೂರು ಉತ್ತರ ಕ್ಷೇತ್ರದ ಸುಮಂಗಲಾ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಉತ್ತರ ಕ್ಷೇತ್ರದಲ್ಲಿ ಎರಡು ಬಾರಿ ಆಯ್ಕೆಯಾದ ಇತರ ಇಬ್ಬರನ್ನು ಮುಂದಿನ ಬಾರಿ ಮೀಸಲಾತಿ ನೆಲೆಯಲ್ಲಿ ಪರಿಗಣಿಸಲು ಅವಕಾಶ ಇರುವುದರಿಂದ ಈ ಬಾರಿ ಸಾಮಾನ್ಯ ವಿಭಾಗದ ಮಹಿಳೆಗೆ ಅವಕಾಶ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

- Advertisement -


LEAVE A REPLY

Please enter your comment!
Please enter your name here

Most Popular

Recent Comments