Monday, May 16, 2022
Homeಕರಾವಳಿಹಿರಿಯ ಲೇಖಕಿ ಕೆ.ವಿ. ರಾಜೇಶ್ವರಿ ತೇಜಸ್ವಿ ಇನ್ನಿಲ್ಲ..

ಹಿರಿಯ ಲೇಖಕಿ ಕೆ.ವಿ. ರಾಜೇಶ್ವರಿ ತೇಜಸ್ವಿ ಇನ್ನಿಲ್ಲ..

- Advertisement -
Renault- Advertisement -

ಮಂಗಳೂರು: ಹಿರಿಯ ಲೇಖಕಿ, ಸಾಂಸ್ಕತಿಕ ಚಿಂತಕಿ ಹಾಗೂ ಸಾಹಿತಿ ಡಾ. ಪೂರ್ಣಚಂದ್ರತೇಜಸ್ವಿ ಅವರ ಧರ್ಮಪತ್ನಿ ಕೆ.ವಿ. ರಾಜೇಶ್ವರಿ ತೇಜಸ್ವಿ ಅವರು (14-12-2021ರಂದು ಮಂಗಳವಾರ) ನಿಧನರಾಗಿರುವುದು ಅತ್ಯಂತ ದುಃಖದ ಸಂಗತಿ.

ಪೂರ್ಣಚಂದ್ರ ತೇಜಸ್ವಿ ಅವರ ಮೇರು ಸಾಹಿತ್ಯಿಕ ಕೃಷಿಗೆ ಪ್ರೇರಣೆಯಾಗಿದ್ದ ರಾಜೇಶ್ವರಿ ಅವರು ಸಹ ತೇಜಸ್ವಿಯವರ ಪ್ರಭಾವದಿಂದ ಸ್ವತಃ ಲೇಖಕಿಯಾಗಿದ್ದರು. ‘ನನ್ನ ತೇಜಸ್ವಿ’ ನಮ್ಮ ಮನೆಗೂ ಬಂದರು ಗಾಂಧೀಜಿ’ ಹಾಗೂ ‘ನನ್ನ ಡ್ರೈವಿಂಗ್ ಡೈರಿ’ (ಮುದ್ರಣದಲ್ಲಿದೆ) ಕೃತಿಗಳನ್ನು ರಚಿಸಿದ್ದರು. ರಸಋಷಿ ಕುವೆಂಪು ಅವರ ಸೊಸೆಯಾಗಿ ವಿಶ್ವಮಾನವ ಸಂದೇಶ ಸಾರುವ ಮಂತ್ರ ಮಾಂಗಲ್ಯ ಮದುವೆ ಪರಿಚಯಿಸಿ, ಎಲ್ಲರಿಗೂ ಮಾದರಿಯಾಗಿದ್ದರು. ಓದುಗರನ್ನು ಪ್ರೀತಿ-ಅಭಿಮಾನದಿಂದ ಕಾಣುತ್ತಾ, ಎಲ್ಲರನ್ನೂ ಗೌರವಿಸುವ, ಅಭಿಮಾನಿಸುವ ಹೃದಯವಂತಿಕೆಯನ್ನು ಹೊಂದಿದ್ದ ಕೆ.ವಿ. ರಾಜೇಶ್ವರಿ ತೇಜಸ್ವಿ ಅವರ ಅಗಲಿಕೆಯಿಂದ ಒಬ್ಬ ಮಾತೃ ಹೃದಯಿ ಅಮ್ಮ ಇಲ್ಲದಂತಾಗಿದೆ.

ಅವರ ಕುಟುಂಬಕ್ಕೆ ಸಾಂತ್ವನವನ್ನು ತಿಳಿಸುತ್ತಾ, ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಪ್ರಾರ್ಥಿಸುತ್ತೇವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮಹೇಶ ಜೋಶಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ

- Advertisement -


1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments