ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿದ ಮಾಜಿಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದು, ಆದರೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಯಲಿದೆ. ಇನ್ನು ಅದ್ದೂರಿಯಾಗಿ ಜೈಲಿನಿಂದ ತಮಿಳುನಾಡಿಗೆ ಸೇರುವ ಕನಸು ಕಂಡಿದ್ದ ಶಶಿಕಲಾಗೆ ನಿರಾಸೆ ಕಾದಿದೆ.
2017 ರಲ್ಲಿ ಜೈಲು ಸೇರಿದ್ದ ಶಶಿಕಲಾ ನಿಯಮದಂತೆ 2021 ಜನವರಿ 27 ರಂದು ಶಿಕ್ಷೆ ಪೂರ್ಣಗೊಳಿಸಿ ಜೈಲಿನಿಂದ ಬಿಡುಗಡೆಯಾಗಲಿದ್ದರು. ತಮಿಳುನಾಡಿನ ರಾಜಕೀಯ ನಾಯಕರು ಶಶಿಕಲಾರನ್ನು ಪರಪ್ಪನ ಅಗ್ರಹಾರದಿಂದ ತಮಿಳುನಾಡಿನ ತನಕ ಮೆರವಣಿಗೆಯಲ್ಲಿ ಕರೆದೊಯ್ಯಲು ಸಿದ್ಧತೆ ನಡೆಸಿದ್ದರು.
ಆದರೆ ಕೆಲ ದಿನಗಳ ಹಿಂದೆಯಷ್ಟೇ ಶಶಿಕಲಾ ಉಸಿರಾಟದ ತೊಂದರೆ,ಕೆಮ್ಮ,ಕಫದ ಸಮಸ್ಯೆಯಿಂದ ನರಳುತ್ತಿರುವ ಶಶಿಕಲಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೇ ಶಶಿಕಲಾಗೆ ಕೊರೋನಾ ಕೂಡ ತಗುಲಿದೆ. ಹೀಗಾಗಿ ಇವತ್ತು ಶಶಿಕಲಾ ಜೈಲಿನಿಂದ ಬಿಡುಗಡೆಯಾದ್ರೂ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ.
ಕೊರೋನಾ ನೆಗೆಟಿವ್ ಬಂದ ಬಳಿಕ ಅವರನ್ನು ಆಸ್ಪತ್ರೆಯಿಂದ ರಿಲೀಸ್ ಮಾಡಲಾಗುತ್ತದೆ. ಹೀಗಾಗಿ ಜ.27 ರಂದು ಜೈಲಾಧಿಕಾರಿಗಳು ಬಿಡುಗಡೆ ಪ್ರೊಸೆಸ್ ಪೂರ್ತಿಗೊಳಿಸಲಿದ್ದು, ಆಸ್ಪತ್ರೆಯಿಂದ ಕೆಲದಿನದಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿದೆ.
2021 ರ ಮೇನಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಹೀಗಾಗಿ ಶಶಿಕಲಾ ಬಿಡುಗಡೆ ತಮಿಳುನಾಡಿನ ರಾಜಕೀಯದ ಮೇಲೆ ವಿಶೇಷ ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ. ಈಗಾಗಲೇ ಶಶಿಕಲಾ ಆಪ್ತರು ಆಕೆಯನ್ನು ಮೆರವಣಿಗೆ ಮೂಲಕ ಕರೆದೊಯ್ದು ಅದ್ದೂರಿ ಸ್ವಾಗತ ಮಾಡಲು ನಿರ್ಧರಿಸಿದ್ದು, ಆಕೆಯ ರಾಜಕೀಯ ಪ್ರಭಾವಕ್ಕೆ ಸಿಕ್ಕ ಸಾಕ್ಷಿಯಾಗಿದೆ