ಮೈಸೂರು : ಮೈಸೂರು ಪಾಲಿಕೆಯ ಮೈತ್ರಿ ಗೊಂದಲಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಗೊಂದಲಕ್ಕೆ ಕಾಂಗ್ರೆಸ್ ನಾಯಕರು ಅಥವಾ ಬಿಜೆಪಿ ನಾಯಕರು ಯಾರು ಕಾರಣರಲ್ಲ. ಬದಲಾಗಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರೇ ಮೈತ್ರಿ ಗೊಂದಲಕ್ಕೆ ಕಾರಣ ಎಂದು ಹೇಳಿದ್ದಾರೆ.
ತನ್ವೀರ್ ಸೇಠ್ ಅವರನ್ನು ಅವರ ಪಕ್ಷ ಉಚ್ಛಾಟನೆ ಮಾಡಿದರೆ ನಾವು ಅವರನ್ನು ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇವೆ. ಅವರೊಬ್ಬರು ಅಲ್ಪ ಸಂಖ್ಯಾತ ಸಮುದಾಯದ ಮುಖಂಡ. ಹೀಗಾಗಿ ತನ್ವೀರ್ ಸೇಠ್ ಗೆ ಜೆಡಿಎಸ್ ಪಕ್ಷಕ್ಕೆ ಸದಾ ಸ್ವಾಗತ ಎಂದು ಹೇಳಿದರು.
ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದಕ್ಕೆ ನಾವು ನಿರ್ಧಾರ ಮಾಡಿರಲಿಲ್ಲ.
ಪಕ್ಷೇತರರ ಜೊತೆ ಸೇರಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇವು. ಆದರೆ ಮತ್ತೆ ಡಿ.ಕೆ. ಶಿವಕುಮಾರ್ ಕರೆ ಮಾಡಿದ್ದರು. ನಾನು ಕಾಲ್ ರಿಸೀವ್ ಮಾಡಿರಲಿಲ್ಲ. ಬಳಿಕ ತನ್ವೀರ್ ಸೇಠ್ ಮೆಸೇಜ್ ಮಾಡಿದ್ದರು. ಬಳಿಕ ಡಿ.ಕೆ. ಶಿವಕುಮಾರ್ ಕರೆ ಮಾಡಿದಾಗ ಕುಮಾರಸ್ವಾಮಿ ಮಾತನಾಡಿದರು. ಕರೆಯಲ್ಲಿ ಮೈತ್ರಿಗೆ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು ಎಂದು ತಿಳಿಸಿದರು.