Tuesday, September 27, 2022
Homeರಾಜಕೀಯವಿಜಯೇಂದ್ರ ಆಫೀಸಿನಲ್ಲಿ ಲಂಚದ ಮೆನು ಇದೆ, ಟ್ರಾನ್ಸ್ ಫರ್ ಆಗೋದು ಹಾಗೇನೇ: ಸಿದ್ದರಾಮಯ್ಯ ಆರೋಪ

ವಿಜಯೇಂದ್ರ ಆಫೀಸಿನಲ್ಲಿ ಲಂಚದ ಮೆನು ಇದೆ, ಟ್ರಾನ್ಸ್ ಫರ್ ಆಗೋದು ಹಾಗೇನೇ: ಸಿದ್ದರಾಮಯ್ಯ ಆರೋಪ

- Advertisement -
Renault

Renault

Renault

Renault


- Advertisement -

ತುಮಕೂರು: ಹೋಟೆಲ್ ಗಳಲ್ಲಿ ಇಡ್ಲಿಗೆ ಇಷ್ಟು, ದೋಸೆಗೆ ಇಷ್ಟು, ತಿಂಡಿಗೆ ಇಷ್ಟು ಅಂತಾ ಹಾಕ್ತಾರಲ್ಲಾ, ಆ ರೀತಿ ವಿಜಯೇಂದ್ರನ ಆಫೀಸ್ ಮುಂದೆ ಬೋರ್ಡ್ ಹಾಕಿಬಿಟ್ಟಿದ್ದಾರೆ. ಅಲ್ಲಿ ಚೀಫ್ ಇಂಜಿನಿಯರ್ ಗೆ ಇಷ್ಟು, ಡಿಸಿಗೆ ಇಷ್ಟು ಅಂತಾ ಬೋರ್ಡ್ ಹಾಕಿಬಿಟ್ಟಿದ್ದಾರೆ. ನಾನು ಸಿಎಂ ಆಗಿದ್ದಾಗ ಟ್ರಾನ್ಸ್‌ಫರ್ ಗೆ ಹಣ ತೆಗೆದುಕೊಂಡಿದ್ದಾರೆ ಅಂತಾ ಯಾರಾದರೂ ಹೇಳಿಬಿಡ್ಲಿ. ನಾನು ಇವತ್ತೇ ರಾಜಕೀಯ ನಿವೃತ್ತಿ‌ ತೆಗೆದುಕೊಂಡುಬಿಡ್ತೀನಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಮಧುಗಿರಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಐದು ವರ್ಷ ಸಿಎಂ ಆಗಿದ್ದಾಗ ಒಂದೇ ಒಂದು ಚೆಕ್ ಬೌನ್ಸ್ ಆಗಿರಲಿಲ್ಲ. ನಮ್ಮ ಕಾಲದಲ್ಲಿ ಖಜಾನೆ ತುಂಬಿ ತುಳುಕುತ್ತಿತ್ತು. ಈ ಯಡಿಯೂರಪ್ಪ ಬಂದು ರಾಜ್ಯಕ್ಕೆ ದರಿದ್ರ್ಯ ಆವರಿಸಿಕೊಂಡುಬಿಟ್ಟಿದೆ ಎಂದರು.

ಯಡಿಯೂರಪ್ಪ ಹಿಂಬಾಗಿಲಿನಿಂದ ಬಂದು ಮುಖ್ಯಮಂತ್ರಿಯಾಗಿಬಿಟ್ರು. ಕೋಟಿಗಟ್ಟಲೇ ಹಣ ಕೊಟ್ಟು ಎಂ‌ಎಲ್‌ಎ ಗಳನ್ನ ಕೊಂಡುಕೊಂಡ್ರು..ಈ ಥರ ಮುಖ್ಯಮಂತ್ರಿಗೆ ಮಾನಮರ್ಯಾದೆ ಇರೋಕೆ ಸಾಧ್ಯನಾ.. ಎಂದು ಪ್ರಶ್ನಿಸಿದರು.

ಕೊರೋನಾಗೆ 4400 ಕೋಟಿ ಖರ್ಚು ಮಾಡಿದ್ದಾರೆ. ಅದರಲ್ಲಿ ಅರ್ಧ ಹೊಡೆದು, 2500 ಕೋಟಿ ನುಂಗಿಬಿಟ್ಟವ್ರೆ. ನೇಕಾರರು, ಕ್ಷೌರಿಕರಿಗೆ, ಚಾಲಕರು ಸೇರಿ ಯಾರಿಗೂ ಪರಿಹಾರ ಕೊಟ್ಟಿಲ್ಲಾ. 4 ಲಕ್ಷ ಕೋಟಿ ಬೆಲೆಬಾಳೋ ವೆಂಟಿಲೇಟರನ್ನ 18 ಲಕ್ಷ ಕೋಟಿ ರೂ. ಕೊಟ್ಟು ತೆಗೆದುಕೊಂಡಿದ್ದಾರೆ. ಲಕ್ಷ ಲಕ್ಷ ಲಂಚ ತೆಗೆದುಕೊಂಡು ಅಧಿಕಾರಿಗಳನ್ನ ಟ್ರಾನ್ಸ್‌ಫರ್ ಮಾಡುತ್ತಾರೆ. ಅಧಿಕಾರಿಗಳು ಆತ್ಮ ಮುಟ್ಟಿಕೊಂಡು ಹೇಳಲಿ ಲಂಚ ಕೊಡದೇ ಪೊಸ್ಟಿಂಗ್ ಪಡೆದಿದ್ದಾರೆ ಅಂತಾ. ಟ್ರಾನ್ಸ್ ಫರ್ ಗಳಿಗೆ ದುಡ್ಡು ಕೊಟ್ಟು ಭರೋ ಅಧಿಕಾರಿಗಳು ನ್ಯಾಯವಾಗಿ ಯಾರು ಕೆಲಸ ಮಾಡ್ತಾರೆ ಎಂದು ಕೇಳಿದರು.

6 ಜನ ಮಿನಿಸ್ಟ್ರು ಕೋರ್ಟ್ ಗೆ ಹೋಗಿ ಇಂಜೆಕ್ಷನ್ ತಂದಿದ್ದಾರೆ. ಯಾಕಂದ್ರೇ ನಮ್ಮವು ಇದ್ದಾವೆ, ಅದನ್ನ ತೋರಿಸಬಾರದು ಅಂತಾ. ಏನು ಇಲ್ಲದೇ ಇದ್ದಮೇಲೆ ಯಾಕೆ ಇಂಜಕ್ಷನ್ ತಗೊಂಡ್ರು..? ನಾವು ರಾಮನ ಭಕ್ತರು, ಸುಸಂಸ್ಕೃತರು ಅಂತಾರೆ. ನಮ್ಮೂರಲ್ಲೂ ರಾಮನ ದೇವಸ್ಥಾನ ಇದೆ, ನನ್ನ ಹೆಸರಲ್ಲೇ‌ ರಾಮ‌ ಇದಾನೆ. ನಾವೆಲ್ಲಾ ಹಿಂದೂಗಳು ಅಲ್ಲವಂತೇ, ಇವರು ಮಾತ್ರ ಹಿಂದೂಗಳಂತೆ. ಸಮಾಜವನ್ನ ಹೊಡೆದು, ಜಾತಿಗಳ ಮದ್ಯೆ ಬೆಂಕಿ ಹಚ್ತಾರೆ ಎಂದರು.

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments