Friday, May 14, 2021
Homeಸಿನಿಮಾಬೆಂಗಳೂರು ಪೋಲಿಸರಿಗೆ ಆಕ್ಸಿಜನ್ ಕಾನ್ಸಟ್ರೇಟರ್ ಮೆಷಿನ್ ನೀಡಿ ನೆರವಾದ ನಟ ಸೋನು ಸೂದ್

ಬೆಂಗಳೂರು ಪೋಲಿಸರಿಗೆ ಆಕ್ಸಿಜನ್ ಕಾನ್ಸಟ್ರೇಟರ್ ಮೆಷಿನ್ ನೀಡಿ ನೆರವಾದ ನಟ ಸೋನು ಸೂದ್

- Advertisement -
Rental
Rental
- Advertisement -Home Plus
- Advertisement -
Platform
Maya Builders

ಬೆಂಗಳೂರು: ಕೊರೋನ ಸಂಕಷ್ಟದ ದಿನಗಳಲ್ಲಿ ಈ ಹಿಂದೆ ಲಕ್ಷಾಂತರ ಕಾರ್ಮಿಕರ ನೆರವಾಗಿದ್ದ ಬಾಲಿವುಡ್ ನಟ ಸೋನು ಸೂದ್ ಬೆಂಗಳೂರು ಪೋಲಿಸರಿಗೆ ದೂರದ ಮುಂಬಯಿಯಿಂದ ಆಕ್ಸಿಜನ್ ಕಾನ್ಸಟ್ರೇಟರ್ ಮೆಷಿನ್ ನೀಡುವ ಮೂಲಕ ಸ್ಯಾಂಡಲ್ ವುಡ್ ನಟರು ಆತ್ಮವಿಮರ್ಶೆ ಮಾಡುವಂತೆ ಮಾಡಿದ್ದಾರೆ.

ಆಕ್ಸಿಜನ್ ಕಾನ್ಸಟ್ರೇಟರ್ ಯಂತ್ರವು ವಾತಾವರಣದಲ್ಲಿ ಇರುವ ಆಕ್ಸಿಜನ್ ಸಂಗ್ರಹಿಸಿ ಮಾನವನ ದೇಹಕ್ಕೆ ಅಗತ್ಯವಾದ ಆಕ್ಸಿಜನ್ ಒದಗಿಸುತ್ತವೆ. ಮಾರುಕಟ್ಟೆಯಲ್ಲಿ ಈ ಯಂತ್ರ ಕ್ಕೆ ನಲುವತ್ತು ಸಾವಿರದಿಂದ ಎರಡು ಲಕ್ಷ ರೂಪಾಯಿ ವರೆಗೆ ಬೆಲೆ ಇದೆ.ಸೋನು ಸೂದ್ ಬೆಂಗಳೂರು ಪೋಲಿಸರಿಗೆ ನೀಡಿದ್ದು ಸುಮಾರು ಒಂದು ಲಕ್ಷ ರೂಪಾಯಿ ಬೆಲೆ ಬಾಳುವಂತದ್ದು. ಇದನ್ನು ನೀಡುವ ಮುಂಚೆ ನಗರ ಪೋಲಿಸ್ ಆಯುಕ್ತ ಕಮಲ ಪಂತ್ ರಿಗೆ ದೂರವಾಣಿ ಕರೆ ಮಾಡಿ ತನ್ನ ಈ ಚಿಕ್ಕ ಕೊಡುಗೆ ಸ್ವೀಕರಿಸುವಂತೆ ಮಾಡಿದ್ದರು.

ಸೋನು ಸೂದ್ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚುತ್ತಲೇ ರಿಯಲ್ ಲೈಫ್ ನಲ್ಲಿ ನಾಯಕನ ಸ್ತಾನ ಏರಿದ ವ್ಯಕ್ತಿ. ಕೊರೋನ ಸಂಕಷ್ಟ ಸಮಯದಲ್ಲಿ ಕಳೆದ ವರ್ಷ ಕೂಡ ಸೋನು ಸೂದ್ ಲಕ್ಷಾಂತರ ಜನರ ಜನರಿಗೆ ನೆರವಾಗಿದ್ದಾರೆ.ನೆರವಾಗುತ್ತಲೇ ಇದ್ದಾರೆ .ಅವರ ಸಾಮಾಜಿಕ ಕಳಕಳಿಗೆ ಭರ್ಜರಿ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments