ಮಂಗಳೂರು : ಭಾರತದಲ್ಲಿ ಕೊರೋನ ಎರಡನೇ ಅಲೆಯಿಂದ ಸಂಕಷ್ಟದಲ್ಲಿರುವ ಸಂಧರ್ಭದಲ್ಲಿ ಮಂಗಳೂರಿನಲ್ಲೊಬ್ಬ ಯುವ ನಾಯಕ ಮತ್ತು ಉದ್ಯಮಿ ಸಹಸ್ರಾರು ಮಂದಿಗೆ ತಮ್ಮ ಕೈಲಾಗುವಷ್ಟು ಸಹಾಯ ಹಸ್ತ ನೀಡುತ್ತಾ ಬಡವರ ಪಾಲಿಗೆ ಕಣ್ಮಣಿಯಾಗುತ್ತ ” ಮಂಗಳೂರಿನ ಸೋನು ಸೂದ್ ” ಆಗುತ್ತಿದ್ದಾರೆ. ಇವರೇ ಪನಾಮ ಕಾರ್ಪೋರೇಷನ್ ಲಿಮಿಟೆಡ್ ನ ಚೇರ್ಮನ್ ಮತ್ತು ಸಿ. ಇ. ಒ ಅಗಿರುವ ವಿವೇಕ್ ರಾಜ್ ಪೂಜಾರಿ ಯವರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವೇಕ್ ರಾಜ್ ಪೂಜಾರಿಯವರು ಈ ಬಾರಿ ಇಷ್ಟರವರೆಗೆ 16000 ಮಂದಿಗೆ ಊಟ, ಸುಮಾರು 4350 ಕುಟುಂಬದವರಿಗೆ ಮತ್ತು ದಿನಗೂಲಿ ನೌಕರರಿಗೆ ಕಿಟ್ ಗಳನ್ನೂ ನೀಡಿದ್ದು , ಜೊತೆಗೆ ಹಲವು ಬಡ ಕುಟುಂಬಗಳ ಆಸ್ಪತ್ರೆ ಚಿಕಿತ್ಸೆಯ ವೆಚ್ಚವನ್ನು ಸಹಾ ಪನಾಮ ಕಂಪೆನಿ ವತಿಯಿಂದ ಬರಿಸಿದ್ದೇವೆ . ಪ್ರಸಕ್ತ ತಮ್ಮ ಕಡೆಯಿಂದ ನೀಡುವ ಕಿಟ್, ಒಂದು ಕುಟುಂಬಕ್ಕೆ 15 ದಿನಗಳ ಕಾಲ ಉಪಯೋಗಕ್ಕೆ ಬರಲಿದೆ. ಇದು ಹಲವು ಕುಟುಂಬಗಳಿಗೆ ಸಹಾಯವಾಗಲಿದೆ. ಕಳೆದ ಲಾಕ್ಡೌನ್ ಸಂಧರ್ಭ ಸುಮಾರು 14000 ಮಂದಿಗೆ ಬೀದಿ ಬದಿ ಊಟ, 2000 ಮಂದಿಗೆ ಕಿಟ್, 12 ಮಂದಿಗೆ ಮಾರಲು ತಳ್ಳುಗಾಡಿಯಲ್ಲಿ ಗಾಡಿ ತುಂಬಾ ತರಕಾರಿ ಮತ್ತು 50 ದೊಡ್ಡ ಕೊಡೆಗಳನ್ನು ಉಚಿತವಾಗಿ ಸಹ ನೀಡಿದ್ದೇವೆ. ಜೊತೆಗೆ ತಮ್ಮ ಊರಿಗೆ ಹೋಗಲು ಸಂಕಷ್ಟ ದಲ್ಲಿದ್ದಾಗ ಆರ್ಥಿಕ ಸಹಾಯ ಮಾಡಿದ್ದೇವೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ಸರ್ಕಾರದ ಬಗ್ಗೆ ಮಾತನಾಡಿದ ಇವರು, ಈ ಬಾರಿಯ ಲಾಕ್ಡೌನ್ ಸಂಧರ್ಭ ಮಾಡಿದ ವ್ಯವಸ್ಥೆಗಳು ಸಂಪೂರ್ಣ ವಿಫಲವಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 10ರ ತನಕ ಸಮಯ ನೀಡಿದ್ದಾರೆ. ಆದರೆ ವಸ್ತುಗಳನ್ನು ಖರೀದಿಸಲು ಹೋಗಲು ವಾಹನಗಳನ್ನು ಉಪಯೋಗಿಸುವಂತಿಲ್ಲ. ಜನರು 3 ರಿಂದ 4 ಕಿ.ಮೀ ನಡೆದುಕೊಂಡು ಬಂದು ವಾಪಾಸ್ ಹೋಗುವಾಗ 12 ಗಂಟೆ ಆಗುತ್ತದೆ. ಕೆಲಸಗಾರರಿಗೆ ಸಂಚಾರಕ್ಕೆ ಬೇರೆ ವ್ಯವಸ್ಥೆ ಇಲ್ಲ. ಜೊತೆಗೆ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಜನರ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸಿವೆ.
ಈ ಬಾರಿ ಸರಕಾರ ಸಾರ್ವಜನಿಕರನ್ನು ಕಳೆದ ಬಾರಿಗಿಂತ ಜಾಸ್ತಿ ಕಡೆಗಣಿಸಿದೆ. ಸರಕಾರ ಬ್ಯಾಂಕ್ ಗಳನ್ನೂ ಮದ್ಯಾಹ್ನ 2 ಗಂಟೆಯ ತನಕ ಓಪನ್ ಇಟ್ಟಿದ್ದಾರೆ. ಆದರೆ ಸಾರ್ವಜನಿಕರು ೧೦ ಗಂಟೆ ಮೇಲೆ ರಸ್ತೆಯಲ್ಲಿ ಹೋಗುವಂತಿಲ್ಲ. ಇದರಿಂದ ಸಾರ್ವಜನಿಕರಿಗೆ ಉಪಯೋಗಕ್ಕಿಂತ ತೊಂದರೆಯೇ ಆಗಿದೆ. ಸರ್ಕಾರಕ್ಕೆ ತೆರಿಗೆ ಕಟ್ಟುವ ಉದ್ದಿಮೆದಾರರಿಗೂ ಇದರಿಂದ ಯಾವುದೇ ಉಪಯೋಗವಿಲ್ಲ ಎಂದು ಸರ್ಕಾರದ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತರು ತಾವು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಲು ಯಾರು ಮುಂದೆ ಬರದೇ ಇರುವುದರಿಂದ ತಮ್ಮ ಬೆಳೆಗಳನ್ನು ಬೀದಿಗೆ ಸುರಿಯುವುದನ್ನು ನೋಡಿದ್ದೇವೆ. ಇನ್ನು ಮುಂದಕ್ಕೆ ರೈತರು ತಾವು ಬೆಳೆದ ತರಕಾರಿ, ಹಣ್ಣುಗಳನ್ನು ನಮ್ಮ ಸಂಸ್ಥೆಯ ಸಿಬ್ಬಂದಿಗಳು, ಅವರ ಸ್ಥಳಗಳಿಗೆ ಹಾಗೂ ಫಾರ್ಮಗಳಿಗೆ ಬಂದು ನಮ್ಮ ಕಂಪೆನಿ ಖರೀದಿ ಮಾಡಲಿದೆ ಎಂದರು. ರಾಜ್ಯಾದ್ಯಂತ ಸುಮಾರು 75 ಕೋಟಿ ಬೆಲೆಯ ತರಕಾರಿ ಮತ್ತು ಹಣ್ಣುಗಳನ್ನು ನಾವು ಖರೀದಿಸಲಿದ್ದೇವೆ, ಇದರಿಂದ ನಮ್ಮ ರೈತರಿಗೆ ಕೊಂಚಮಟ್ಟಿಗೆ ಸಹಾಯವಾಗಲಿದೆ.
ಇನ್ನೂ ಮುಂದೆ ಜನಜೀವನ ಸರಿಯಾಗಲು ಬಹಳ ಸಮಯ ಹಿಡಿಯಲಿದೆ. ಹೀಗಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ಮುಂಜಾಗ್ರತಾ ಕ್ರಮವಾಗಿ ರೂ 50 ಲಕ್ಷ ವನ್ನು ಮುಡಿಪಾಗಿಟ್ಟಿದ್ದೇನೆ ಎಂದು ವಿವೇಕ್ ರಾಜ್ ಪೂಜಾರಿ ಹೇಳಿದರು.
40ಕ್ಕೂ ಹೆಚ್ಚು ಮಾಧ್ಯಮ ಮಿತ್ರರಿಗೆ ಈ ಸಂಧರ್ಭದಲ್ಲಿ ದಿನಸಿ ಕಿಟ್ ಗಳನ್ನು ವಿತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ಲೋಬಲ್ ಅಸೋಸಿಯೇಟ್ಸ್ ನ ರಜಾಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Congress agent Vivek Raj…
(A black mark on his good deeds)