ಮಂಗಳೂರು: ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಮಹಾರಥೋತ್ಸವ ಬಹಳ ಅದ್ಧೂರಿಯಾಗಿ ನೆರವೇರಿತು.
ಬೆಳಿಗ್ಗೆ ಕಲಶ ಪ್ರಧಾನ ಹೋಮ, ಗಣಹೋಮ, ಪಂಚಾಮೃತ ಅಭೀಷೇಕ, ಪರಿವಾರ ದೈವಗಳಿಗೆ ಪರ್ವಪೂಜೆ, ಸಾಮೂಹಿಕ ನಾಗತಂಬಿಲ ನೆರವೇರಿತು. ಬಳಿಕ ದೇವರಿಗೆ ಮಹಾಪೂಜೆ ನಡೆಯಿತು. ಹಾಗೆಯೇ ದೇವರ ಬಲಿ ನಡೆದ ಬಳಿಕ ಮಹಾರಥೋತ್ಸವ ನಡೆಯಿತು. ಈ ವೇಳೆ ಸಾವಿರಾರು ಭಕ್ತರು ಶ್ರೀ ವೀರನಾರಾಯಣ ದೇವರ ಕೃಪೆಗೆ ಪಾತ್ರರಾದರು.
ಇದಾದ ಬಳಿಕ ದೇವಸ್ಥಾನದಲ್ಲಿ ಮಹಾ ಅನ್ನಸಂತರ್ಪಣೆ ನೆರವೇರಿತು. ಸಂಜೆ ಬಳಿಕ ಭಜನಾ ಕಾರ್ಯಕ್ರಮ, ಕುಣಿತ ಭಜನೆ, ಭಕ್ತಿರಸಮಂಜರಿ ಮುಂತಾದ ಕಾರ್ಯಕ್ರಮಗಳು ನಡೆಯಿ್ತು. ಸಂಜೆ ದೇವರ ಬಲಿ ಹೊರಟು ಚೌಕಿ ಬಸ್ ನಿಲ್ದಾಣದಿಂದ ಕೈಕಂಬ ಸುಬ್ರಹ್ಮಣ್ಯ ಭಜನಾ ಮಂದಿರದ ತನಕ ಸವಾರಿ ಬಲಿ ನಡೆಯಿತು. ನಂತರ ಪಲ್ಲಕ್ಕಿ ಸೇವೆ , ಮಹಾರಂಗಪೂಜೆ, ಭೂತಬಲಿ ಜರುಗಿತು ಇನ್ನು ನಾಳೆ ಕುಂಭ ಮಹೋತ್ಸವದ ವಾರ್ಷಿಕ ಜಾತ್ರೆ ಸಂಪನ್ನಗೊಳ್ಳಲಿದೆ.