ಕೊಲಂಬೋ(ಫೆ.23): ಮಂಗಳವಾರ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು, ಲಂಕಾ ಸಂಸತ್ತನ್ನು ಉದ್ದೇಶಿಸಿ ಮಾಡಬೇಕಿದ್ದ ಭಾಷಣವನ್ನು ಇಲ್ಲಿನ ಸರ್ಕಾರ ರದ್ದುಗೊಳಿಸಿದೆ. ಇಮ್ರಾನ್ ಭಾಷಣಕ್ಕೆ ಲಂಕಾ ತಡೆ ಹೇರಿದ ಹಿಂದಿನ ಅಸಲಿ ಕಾರಣ ಇದೀಗ ಬೆಳಕಿಗೆ ಬಂದಿದೆ.
ಕೊರೋನಾ ವೈರಸ್ನಿಂದ ನರಳುತ್ತಿರುವ ಶ್ರೀಲಂಕಾಗೆ 5 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಶ್ರೀಲಂಕಾಗೆ ಭಾರತ ನೀಡಿದೆ. ಜೊತೆಗೆ ಚೀನಾದ ಸಾಲದ ಸುಳಿಯಲ್ಲಿ ಸಿಲುಕುವ ಬದಲಿಗೆ ಭಾರತದ ಜೊತೆಗಿರುವುದೇ ಉತ್ತಮ ಎಂಬುದು ಲಂಕಾಕ್ಕೂ ಗೊತ್ತಾಗಿದೆ. ಇದೇ ಕಾರಣಕ್ಕೆ ಇಮ್ರಾನ್ ಖಾನ್ ಅವರ ಸಂಸತ್ತು ಭಾಷಣವನ್ನು ರದ್ದುಗೊಳಿಸಿದೆ ಎಂದು ಕೊಲಂಬೋ ಗೆಜೆಟ್ ಎಂಬ ಪತ್ರಿಕೆ ಉಲ್ಲೇಖಿಸಿದೆ.
ಅಲ್ಲದೆ ಒಂದು ವೇಳೆ ಶ್ರೀಲಂಕಾ ಸಂಸತ್ತಿನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಭಾಷಣ ಮಾಡಲು ಅವಕಾಶ ಕೊಟ್ಟರೆ, ಅವರು ಮುಸ್ಲಿಮರ ಪರವಾಗಿ ಮಾತನಾಡುತ್ತಾರೆ.
ಇದರಿಂದ ಲಂಕಾದ ಬಹುಸಂಖ್ಯಾತರಾದ ಬೌದ್ಧ ಧರ್ಮೀಯರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬುದು ಲಂಕಾ ಸರ್ಕಾರ ಗೊತ್ತಿದೆ.