ಬೆಂಗಳೂರು; ಆನೇಕಲ್ ಸಮೀಪದ ಬ್ಯಾಗಡದೇನಹಳ್ಳಿ ಬಳಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ರಾಜಶೇಖರ್ ರೆಡ್ಡಿ ರಿಯಲ್ ಎಸ್ಟೇಟ್ ಉದ್ಯಮಿ. ಮೂಲತಃ ಆಂಧ್ರಪ್ರದೇಶದವರಾದ ರಾಜಶೇಖರ್ ರೆಡ್ಡಿ, ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ ವಾಸವಾಗಿದ್ದರು.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಅವರು, ನಿನ್ನೆ ಬ್ಯಾಗಡದೇನಹಳ್ಳಿ ಬಳಿಯ ಜಮೀನೊಂದರ ರಿಜಿಸ್ಟರ್ಗೆ ತೆರಳಿದ್ದರು. ಈ ವೇಳೆ ಕಾರಿನಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಜಮೀನು ವಿವಾದಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಪೊಲೀಸರು ರಾಜಶೇಖರ್ ರೆಡ್ಡಿ ಮೊಬೈಲ್ಗೆ ಬಂದಿರುವ ಕೊನೆಯ ಕರೆಗಳ ಪರಿಶೀಲನೆ ನಡೆಸುತ್ತಿದ್ದು, ಕೊಲೆಯಾದ ಸಮಯದಲ್ಲೇ ರಾಜಶೇಖರ್ ರೆಡ್ಡಿಗೆ ವಕೀಲರಿಂದ ನಿರಂತರ ಕರೆಗಳು ಬಂದಿವೆ. ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿರುವ ಬೈಕ್ ನಂಬರ್ ಆಧರಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
Super news
ಒಳ್ಳೆಯ ಸುದ್ದಿ ಪ್ರಸಾರ ವಾಗಲಿ