Monday, January 17, 2022
Homeದೇಶಕೇಂದ್ರದಿಂದ ಟೆಲಿಕಾಂ ಸುಧಾರಣೆಗಳಿಗೆ ಮಾಸ್ಟರ್ ಪ್ಲಾನ್…ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ…

ಕೇಂದ್ರದಿಂದ ಟೆಲಿಕಾಂ ಸುಧಾರಣೆಗಳಿಗೆ ಮಾಸ್ಟರ್ ಪ್ಲಾನ್…ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ…

- Advertisement -
Renault


- Advertisement -

ನವದೆಹಲಿ : ಕೇಂದ್ರ ಸರ್ಕಾರ ದೂರಸಂಪರ್ಕ ವಲಯಕ್ಕೆ ಸಂಬಂಧಿಸಿದಂತೆ ಭಾರಿ ಸುಧಾರಣಾ ಕ್ರಮಗಳನ್ನು ಘೋಷಿಸಿದೆ. ಈ ವಲಯದಲ್ಲಿ ಪೂರ್ವಾನುಮತಿ ಇಲ್ಲದೆಯೇ 100% ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿಯವರೆಗೆ ದೂರಸಂಪರ್ಕ ವಲಯದಲ್ಲಿ ಪೂರ್ವಾನುಮತಿ ಇಲ್ಲದೆ 49% ರಷ್ಟು ಎಫ್‍ಡಿಐಗೆ ಮಾತ್ರ ಅವಕಾಶವಿತ್ತು. ಆಟೋಮೊಬೈಲ್ ಕ್ಷೇತ್ರಕ್ಕೆ ಭಾರತ ಸರ್ಕಾರ ಸುಮಾರು 26,000 ಕೋಟಿ ರೂಪಾಯಿ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಘೋಷಿಸಿದೆ. ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆ ಹಾಗೂ ಹೈಡ್ರೋಜನ್ ಇಂಧನ ವಾಹನಗಳ ಉತ್ಪಾದನೆ ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಯೋಜನೆಯ ಮೂಲಕ ಸುಮಾರು 7.5 ಲಕ್ಷ ಉದ್ಯೋಗಗಳು ಆಟೋ ಸೆಕ್ಟರ್​ನಲ್ಲಿ ಸೃಷ್ಟಿಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ವಾಹನ, ವಾಹನ ಬಿಡಿಭಾಗಗಳು ಹಾಗೂ ಡ್ರೋನ್‌ ಉದ್ಯಮಗಳು ಭಾರತದಲ್ಲೇ ಉತ್ಪಾದನೆ ಹೆಚ್ಚಿಸಲು ನೆರವಾಗುವ ಉತ್ಪಾದನೆ ಆಧರಿತ ಪ್ರೋತ್ಸಾಹಧನ (ಪಿಎಲ್‌ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರ ಅನ್ವಯ ವಾಹನ ಹಾಗೂ ಡ್ರೋನ್‌ ಉದ್ಯಮಕ್ಕೆ ನೆರವು ಲಭಿಸಲಿದೆ. ಕಳೆದ ಬಾರಿ, ಸರ್ಕಾರ ಆಟೋಮೊಬೈಲ್ ಹಾಗೂ ಆಟೋ ಕಾಂಪೊನೆಂಟ್ಸ್​ ವಲಯದಲ್ಲಿ 57,043 ಕೋಟಿಯ ಯೋಜನೆಯನ್ನು ಐದು ವರ್ಷಗಳ ಅವಧಿಗೆ ಘೋಷಣೆ ಮಾಡಿತ್ತು. ಈ ಬಾರಿ 25,938 ಕೋಟಿ ರೂಪಾಯಿಗೆ ಯೋಜನೆ ಘೋಷಿಸಲಾಗಿದೆ. ಎಲೆಕ್ಟ್ರಿಕ್ ಹಾಗೂ ಹೈಡ್ರೋಜನ್ ಚಾಲಿತ ವಾಹನಗಳ ಮೇಲೆ ಕೇಂದ್ರಿಸಿ ಈ ಯೋಜನೆ ರೂಪಿಸಲಾಗಿದೆ.

ಆಟೋಮೊಬೈಲ್ ವಿಭಾಗಕ್ಕೆ ಘೋಷಿಸಲಾಗಿರುವ ಈ ಪಿಎಲ್​ಐ ಯೋಜನೆಯು, 2021- 22ನೇ ಸಾಲಿನಲ್ಲಿ ಘೋಷಿಸಲಾಗಿರುವ ಒಟ್ಟಾರೆ ಬಜೆಟ್​ನ ಉತ್ಪಾದನಾ ಪ್ರೋತ್ಸಾಹ ಧನದ ಒಂದು ಭಾಗವಾಗಿದೆ. ಬಜೆಟ್​ನಲ್ಲಿ 13 ವಿಭಾಗಗಳಿಗೆ ಒಟ್ಟು 1.97 ಲಕ್ಷ ಕೋಟಿ ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಮಾಡಲಾಗಿದೆ. ಈ ನೆರವಿನಿಂದ ಭಾರತವು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ವಾಹನ ಉತ್ಪಾದನೆ ಹಾಗೂ ಪೂರೈಕೆಯ ತಾಣವಾಗಿ ಹೊರಹೊಮ್ಮಲಿದೆ ಎಂದು ಸರ್ಕಾರ ತಿಳಿಸಿದೆಯಾಗಿದೆ.

- Advertisement -Home Plus


LEAVE A REPLY

Please enter your comment!
Please enter your name here

- Advertisment -

Most Popular

Recent Comments