ಹುಬ್ಬಳ್ಳಿ: ಸಿದ್ದರಾಮಯ್ಯನವರ ನಾಯಕತ್ವಕ್ಕೆ ಕುತ್ತು ಬಂದಿದ್ದು, ಅವರಿಗೆ ಅಭದ್ರತೆ ಕಾಡುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಎಲ್ಲದಕ್ಕೂ ಆರ್‌ಎಸ್‌ಎಸ್ ಟಾರ್ಗೆಟ್ ಮಾಡುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.
ಕುರುಬ ನಾಯಕ, ಹಿಂದುಳಿದ ನಾಯಕ ಎಂದು ಬಿಂಬಿಸಿಕೊಂಡಿದ್ದರು. ಮೊನ್ನೆ ನಡೆದ ಕುರುಬ ಸಮಾಜಕ್ಕೆ ಅವರಿಗೆ ಹೋಗಲು ಆಗಲಿಲ್ಲ. ಅದರ ಮುಜುಗರ ತಪ್ಪಿಸಿಕೊಳ್ಳಲಿಕ್ಕೆ ಆರ್‌ಎಸ್‌ಎಸ್ ಹೆಸರು ಹೇಳ್ತಾ ಇದ್ದಾರೆ. ಮೀಸಲಾತಿ ಹೋರಾಟ ಇವತ್ತಿನದಲ್ಲ. ಆಯಾ ಸಮಾಜದ ಸ್ವಾಮೀಜಿಗಳು, ಹಿರಿಯರು ಮೀಸಲಾತಿ ಬಗ್ಗೆ ಈ ಹಿಂದೆಯೇ ಹೋರಾಟ ನಡೆಸಿದ್ದರು, ಈಗಲೂ ನಡೆಸುತ್ತಿದ್ದಾರೆ. ಸಂವಿಧಾನ ಬದ್ದವಾಗಿ ಕೇಂದ್ರ ಸರ್ಕಾರಕ್ಕೆ ವರದಿ ಕೊಡುವ ಸಮಾಲೋಚನೆ ನಡೆಯುತ್ತಿದೆ.
ಮುಖ್ಯಮಂತ್ರಿಗಳು ಈ ಕುರಿತು ಪತ್ರ ಬರೆದಿದ್ದಾರೆ. ಆಯಾ ಆಯೋಗದವರು ಎಲ್ಲಾ ಪರಾಮರ್ಶೆ ಮಾಡಿಕೊಂಡು ಯೋಗ್ಯವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಗಳು ಆದಷ್ಟು ಬೇಗನೆ ಈ ಕುರಿತು ನಿರ್ಧಾರವನ್ನ ತೆಗೆದುಕೊಳ್ಳುತ್ತಾರೆ” ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.