Tuesday, September 28, 2021
Homeರಾಜ್ಯವಿದ್ಯಾರ್ಥಿಗಳು ಈ ಹಿಂದಿನ ಪಾಸ್ ಬಳಸಿ ಸಂಚರಿಸಲು ಸಾರಿಗೆ ಇಲಾಖೆಯಿಂದ ಅವಕಾಶ… ...

ವಿದ್ಯಾರ್ಥಿಗಳು ಈ ಹಿಂದಿನ ಪಾಸ್ ಬಳಸಿ ಸಂಚರಿಸಲು ಸಾರಿಗೆ ಇಲಾಖೆಯಿಂದ ಅವಕಾಶ… ಸೆಪ್ಟೆಂಬರ್ 25 ರವರೆಗೆ ಈ ಅವಕಾಶ ಬಳಸಲು ಸುತ್ತೋಲೆ…

- Advertisement -
Renault
- Advertisement -
Home Plus
- Advertisement -

ಬೆಂಗಳೂರು : ಬಸ್ ಪಾಸುಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಕಾಲಾವಕಾಶ ನೀಡುವ ಸಲುವಾಗಿ 2020-21 ನೇ ಸಾಲಿನಲ್ಲಿ ಪಡೆದಿರುವ ಬಸ್ ಪಾಸುಗಳನ್ನು ಬಳಸಿ ಪ್ರಯಾಣಿಸಲು ಸಾರಿಗೆ ಇಲಾಖೆ ಅವಕಾಶ ನೀಡಿದೆ. ವಿದ್ಯಾರ್ಥಿಗಳ ಪಾಸ್ ಬಗ್ಗೆ ಇಲಾಖೆಯ ಎಲ್ಲಾ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಕೆಎಸ್‌ಆರ್ ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಸುತ್ತೋಲೆ ಹೊರಡಿಸಿದ್ದಾರೆ.

ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮುಖಾಂತರ ಬಸ್ ಪಾಸುಗಳನ್ನು ಪಡೆಯಬೇಕಿದ್ದು ಆಗೋಸ್ಟ್ 25 ರಿಂದ ತಂತ್ರಾಂಶವನ್ನು ಗೋ ಲೈವ್ ಮಾಡಿರುವುದರಿಂದ 2020-21 ನೇ ಸಾಲಿನಲ್ಲಿ ಪಡೆದಿರುವ ವಿದ್ಯಾರ್ಥಿ ಬಸ್ ಪಾಸುಗಳನ್ನು ಬಳಸಿ ಸೆಪ್ಟೆಂಬರ್ 15 ರವರೆಗೆ ಕ.ರಾ.ರ.ಸಾ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಬಸ್ ಪಾಸುಗಳನ್ನು ಪಡೆಯಲು ಹೆಚ್ಚಿನ ಕಾಲಾವಕಾಶ ನೀಡುವ ಸಲುವಾಗಿ 2020-21 ನೇ ಸಾಲಿನಲ್ಲಿ ಪಡೆದಿರುವ ಬಸ್ ಪಾಸುಗಳನ್ನು ಬಳಸಿ ಪ್ರಯಾಣಿಸಲು ಹಾಗೂ ಕಳೆದ ಸಾಲಿನಲ್ಲಿ ವಿದ್ಯಾರ್ಥಿ ಬಸ್ ಪಾಸುಗಳನ್ನು ಪಡೆಯದಿರುವ ವಿದ್ಯಾರ್ಥಿಗಳು ಹೊಸದಾಗಿ ಶಾಲಾ ಕಾಲೇಜುಗಳಲ್ಲಿ ಶುಲ್ಕ ಪಾವತಿಸಿರುವ ರಶೀದಿ ಹಾಗೂ ವಿದ್ಯಾಸಂಸ್ಥೆಯ ಗುರುತಿನ ಚೀಟಿಯೊಂದಿಗೆ ನಿಗಮದ ಬಸ್ಸುಗಳಲ್ಲಿ ಸಂಬಂಧಪಟ್ಟ ಮಾರ್ಗದಲ್ಲಿ ಅಥವಾ ಹೊಸ ವಿಳಾಸದಲ್ಲಿರುವ ಶಾಲಾ-ಕಾಲೇಜುಗಳಿಗೆ ತೆರಳಲು ದಿನಾಂಕ 25-09-21 ರವರೆಗೆ ಕರಾರಸಾ ನಿಗಮದ ನಗರ, ಹೊರ ವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆಯಾಗಿದೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments