ಸುಳ್ಯ ಸುಬ್ರಹ್ಮಣ್ಯ ಕಡಬದಲ್ಲಿ ಭಾರೀ ಗಾಳಿ ಮಳೆ…!!!
ರಾಜ್ಯ ಹೆದ್ದಾರಿಗೆ ಅಡ್ಡವಾಗಿ ಬಿದ್ದ ಬೃಹತ್ ಮರ…!!!
ಒಂದು ಗಂಟೆಗಳಿಗೂ ಅಧಿಕ ವಾಹನ ಸವಾರರ ಪರದಾಟ…!!!
ಸುಬ್ರಹ್ಮಣ್ಯ: ಸುಳ್ಯ,ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾದ ಪರಿಣಾಮ ಉಪ್ಪಿನಂಗಡಿ – ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಸಿ ಪಿ ಸಿ
ಅರ್ ಐ ಬಳಿ ಹೆದ್ದಾರಿಗೆ ಅಡ್ಡವಾಗಿ ಮರವೊಂದು ಉರುಳಿ ಬಿದ್ದು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಸ್ಥಳಕ್ಕೆ ಮೆಸ್ಕಾಂ, ಅರಣ್ಯ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಅಗಮಿಸಿ ಸ್ಥಳಿಯರ ಸಹಕಾರದೊಂದಿಗೆ ತುರ್ತು ಕಾರ್ಯಚರಣೆ ನಡೆಸಿ ಮರವನ್ನು ತೆರವುಗೊಳಿದರು. ಘಟನೆಯಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು,ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.ಕಡಬ, ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಈಗಲೂ ಗಾಳಿ ಸಹಿತ ಮಳೆ ಸುರಿಯುತ್ತಿದೆ.