Thursday, March 23, 2023
HomeಕರಾವಳಿMangaluru Moral Policing: ಸುಲ್ತಾನ್ ಗೋಲ್ಡ್ ನೈತಿಕ ಪೊಲೀಸ್ ಗಿರಿ ಪ್ರಕರಣ, ಮೂರು ಪ್ರತ್ಯೇಕ ಎಫ್‌ಐಆರ್...

Mangaluru Moral Policing: ಸುಲ್ತಾನ್ ಗೋಲ್ಡ್ ನೈತಿಕ ಪೊಲೀಸ್ ಗಿರಿ ಪ್ರಕರಣ, ಮೂರು ಪ್ರತ್ಯೇಕ ಎಫ್‌ಐಆರ್ ದಾಖಲು

- Advertisement -


Renault

Renault
Renault

- Advertisement -

ಮಂಗಳೂರು: ಕಂಕನಾಡಿಯ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿದ ಕದ್ರಿ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ‌ ಬಲೆ ಬೀಸಿದ್ದಾರೆ. ಯುವತಿ ತಾಯಿ, ಹಲ್ಲೆಗೊಳಗಾದ ಯುವಕ ಮತ್ತು ಸುಲ್ತಾನ್ ಜ್ಯುವೆಲ್ಲರಿ ಮಾಲೀಕರ ದೂರು ಆಧಾರಿಸಿ ಎಫ್‌ಐಆರ್ ದಾಖಲಾಗಿದೆ.

ಮಗಳ ಮೇಲೆ ದೌರ್ಜನ್ಯ ಹಾಗೂ ಬೆದರಿಕೆ ಒಡ್ಡಿದ ಬಗ್ಗೆ ಯುವತಿ ತಾಯಿ ದೂರು ನೀಡಿದ್ದಾರೆ. ಹಲ್ಲೆ ‌ನಡೆಸಿ ಗಲಭೆ ಸೃಷ್ಟಿಸಿದ ಬಗ್ಗೆ ಯುವಕ ದೂರು ನೀಡಿದ್ದು, ಜ್ಯುವೆಲ್ಲರಿಗೆ ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸಿದ ಬಗ್ಗೆ ‌ಜ್ಯುವೆಲ್ಲರಿ ಆಡಳಿತ ದೂರು ದಾಖಲಿಸಿದೆ. ಸುಲ್ತಾನ್ ಜ್ಯುವೆಲ್ಲರಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಮಂಗಳೂರಿನ ಲುಕ್ಮಾನ್ ಉಲ್ ಹಕೀಂ ಮೇಲೆ ಹಲ್ಲೆ ನಡೆಸಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯುವತಿಯ ಪೋಷಕರ ಜೊತೆ ಸುಲ್ತಾನ್ ಜ್ಯುವೆಲ್ಲರಿಗೆ ಬಂದಿದ್ದ ಯುವತಿ ಪ್ರಿಯಕರ ಚೇತನ್ ಎಂಬಾತ ಹಲ್ಲೆ ನಡೆಸಿದ್ದಾಗಿ ಲುಕ್ಮಾನ್ ದೂರು ನೀಡಿದ್ದಾನೆ. ಈ ವೇಳೆ ಪೊಲೀಸರ ಜೊತೆ ಸ್ಥಳಕ್ಕೆ ಬಂದಿದ್ದ ಭಜರಂಗದಳ ಕಾರ್ಯಕರ್ತರು ಕೂಡ ಲುಕ್ಮಾನ್ ನನ್ನ ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ. ಯುವತಿ ಜೊತೆ ಸಲುಗೆ ಬೆಳೆಸಿದ ಕಾರಣಕ್ಕೆ ಹಲ್ಲೆ ಅಂತ ಯುವಕ ದೂರು ನೀಡಿದ್ದು, ಕದ್ರಿ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ನೈತಿಕ ಪೊಲೀಸ್ ಗಿರಿ ವೇಳೆ ಹಾಜರಿದ್ದ ಪುನೀತ್ ಅತ್ತಾವರ!
ಮೊನ್ನೆಯಷ್ಟೇ ನೈತಿಕ ಪೊಲೀಸ್ ಗಿರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ರಕ್ತಪಾತದ ಎಚ್ಚರಿಕೆ ನೀಡಿದ್ದ ಭಜರಂಗದಳ ಮಂಗಳೂರು ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಕೂಡ ಜ್ಯುವೆಲ್ಲರಿಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ವೇಳೆ ಹಾಜರಿದ್ದ ಎನ್ನಲಾಗಿದೆ. ವೈರಲ್ ಆಗಿರೋ ಫೋಟೋಗಳಲ್ಲಿ ಪುನೀತ್ ಇರೋದು ಬಹಿರಂಗವಾಗಿದೆ.

ಮಂಗಳೂರು ಭಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ತನ್ನ ಫೇಸ್ ಬುಕ್ ಮತ್ತು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದ ಪೋಸ್ಟರ್ ನಲ್ಲಿ ಎಚ್ಚರಿಕೆ ನೀಡಿದ್ದ. ‘ಪದೇ ಪದೇ ಹೇಳಿತ್ತಿದ್ದೇವೆ, ಹಿಂದೂ ಹುಡುಗಿಯರ ಜೊತೆ ತಿರುಗಬೇಡಿ’ ‘ಲವ್ ಜಿಹಾದ್ ಮಾಡಿ ಹಿಂದೂ ಹುಡುಗಿಯರ ಬಾಳು ಹಾಳು ಮಾಡಬೇಡಿ”ಲವ್ ಜಿಹಾದ್ ನಿಲ್ಲಿಸದೇ ಇದ್ದರೆ ನಿಮಗೆ ಮಯ್ಯತ್(ಮರಣ) ಶತಸಿದ್ದ’ ಅಂತ ಎಚ್ಚರಿಕೆ ನೀಡಿದ್ದ. ಇದೀಗ ಸುಲ್ತಾನ್ ಜ್ಯುವೆಲ್ಲರಿ ನೈತಿಕ ಪೊಲೀಸ್ ಗಿರಿಯಲ್ಲೂ ಪುನೀತ್ ಮತ್ತು ತಂಡ ಇರೋದು ಗೊತ್ತಾಗಿದೆ.

- Advertisement -

1 COMMENT

  1. ಈ ಹಲ್ಕಾ ಗಳಿಗೆ ಪಿತ್ತ ನೆತ್ತಿಗೆ ಏರಿದೆ .. ಪ್ರತಿರೋಧ ಮಾಡದೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ..#ಬಜ್ರಂಗ ದಳ ಒಂದು criminal ಸಂಘಟನೆ…

LEAVE A REPLY

Please enter your comment!
Please enter your name here

spot_img

Most Popular

Recent Comments