ಅಹಮದಾಬಾದ್(ಫೆ.07): ಸುಪ್ರೀಂಕೋರ್ಟ್ ನ್ಯಾಯಾಧೀಶರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವೇದಿಕೆಯಲ್ಲಿಯೇ ಹಾಡಿ ಹೊಗಳಿರುವುದು ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಸುಪ್ರೀಂಕೋರ್ಟ್ ನ್ಯಾಯಾಧೀಶ ಎಂ.ಆರ್. ಶಾ ಶನಿವಾರ ಆಯೋಜಿಸಿದ್ದ ಗುಜರಾತ್ ಹೈಕೋರ್ಟ್‌ನ ವಜ್ರಮಹೋತ್ಸವ ಕಾರ್ಯಕ್ರಮದ ವೇಳೆ, ಮೋದಿ ಅವರೊಬ್ಬ ಅತ್ಯಂತ ಜನಪ್ರಿಯ, ಪ್ರೀತಿಪಾತ್ರ, ಸ್ಪಂದನಶೀಲ ಮತ್ತು ದೂರದೃಷ್ಟಿಯ ನಾಯಕ ಎಂದು ಬಣ್ಣಿಸಿದ್ದಾರೆ.
ಕಾರ್ಯಕ್ರದ ವೇಳೆ ಮಾತನಾಡಿದ ನ್ಯಾ| ಶಾ, ‘ಗುಜರಾತ್ ಹೈಕೋರ್ಟ್‌ನ ವಜ್ರಮಹೋತ್ಸವದಲ್ಲಿ ಪಾಲ್ಗೊಳ್ಳಲು ನನಗೆ ಹೆಮ್ಮೆ ಎನಿಸುತ್ತಿದೆ. ಅದರಲ್ಲೂ ಪ್ರಧಾನಿ ಮೋದಿ ಅವರ ಉಪಸ್ಥಿತಿಯಲ್ಲಿ ನನಗೆ ಈ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ. ಗುಜರಾತ್ ಹೈಕೋರ್ಟ್ ಯಾವತ್ತೂ ಲಕ್ಷ್ಮಣ ರೇಖೆಯನ್ನು ದಾಟಿಲ್ಲ.
ಯಾವಾಗಲೂ ನ್ಯಾಯವನ್ನು ಒದಗಿಸಿದೆ’ ಎಂದು ಹೇಳಿದ್ದಾರೆ. ಕಳೆದ ವರ್ಷ ನ್ಯಾ| ಅರುಣ್ ಮಿಶ್ರಾ ಅವರು ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದು ಎಲ್ಲರ ಹುಬ್ಬೇರಿಸಿತ್ತು.