Saturday, June 3, 2023
Homeಕರಾವಳಿಸುರತ್ಕಲ್ ಟೋಲ್ ಬೂತ್ ನಲ್ಲಿ ಸ್ಥಳೀಯರ ರಿಯಾಯತಿ ಮುಂದುವರಿಕೆ : ಟೋಲ್ ಕೇಂದ್ರ ತೆರವು

ಸುರತ್ಕಲ್ ಟೋಲ್ ಬೂತ್ ನಲ್ಲಿ ಸ್ಥಳೀಯರ ರಿಯಾಯತಿ ಮುಂದುವರಿಕೆ : ಟೋಲ್ ಕೇಂದ್ರ ತೆರವು

- Advertisement -


Renault

Renault
Renault

- Advertisement -

ಸುರತ್ಕಲ್ ಟೋಲ್ ಬೂತ್ ನಲ್ಲಿ ಸ್ಥಳೀಯರ ರಿಯಾಯತಿ ಮುಂದುವರಿಕೆ : ಟೋಲ್ ಕೇಂದ್ರ ತೆರವು ಹೋರಾಟ ತೀವ್ರಗೊಳಿಸಲು ಸಂಘಟನೆಗಳ ಪ್ರಮುಖರ ತೀರ್ಮಾನ.

ಸುರತ್ಕಲ್ (ಎನ್ಐಟಿಕೆ) ಟೋಲ್ ಕೇಂದ್ರದಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಸಂದರ್ಭ ಸ್ಥಳೀಯ ಖಾಸಗಿ ವಾಹನಗಳ ಉಚಿತ ಪ್ರಯಾಣ ರದ್ದುಗೊಳಿಸುವ ಸೂಚನೆಯ ಹಿನ್ನಲೆಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಹಾಗೂ ಮುಲ್ಕಿ ನಾಗರಿಕ ಅಭಿವೃದ್ದಿ ಸಮಿತಿಯ ಮುಖಂಡರು ಸುರತ್ಕಲ್ ಟೋಲ್ ಕೇಂದ್ರದ ಮುಂಭಾಗ ಬೆಳಿಗ್ಗೆ 8 : 00 ಗಂಟೆಯಿಂದ ಜಮಾಯಿಸಿ ಬೆಳವಣಿಗೆಗಳನ್ನು ಪರಿಶೀಲಿಸಿದರು.

ಟೋಲ್ ಸಂಗ್ರಹ ಗುತ್ತಿಗೆದಾರರ ಪ್ರತಿನಿಧಿಗಳು ಈ ಸಂದರ್ಭ ಹಾಜರಿದ್ದು ಸ್ಥಳೀಯರ ಖಾಸಗಿ ವಾಹನಗಳ ಉಚಿತ ಪ್ರಯಾಣ ವ್ಯವಸ್ಥೆಯನ್ನು ರದ್ದುಗೊಳಿಸುವ ಯಾವುದೇ ನಿರ್ಧಾರವನ್ನು ಈವರಗೆ ತೆಗೆದುಕೊಂಡಿಲ್ಲ, ಅಂತಹ ಯಾವುದೇ ಸೂಚನೆ ಸಂಬಂಧ ಪಟ್ಟವರಿಂದ ಬಂದಿಲ್ಲ ಎಂದು ತಿಳಿಸಿದರು. ಹಾಗೂ, ಸ್ಥಳೀಯ ವಾಹನಗಳು, ಪಾಸ್ ಹೊಂದಿರುವ ವಾಹನಗಳು ಸಂಚರಿಸುವ. ಪಥವನ್ನು ಫಾಸ್ಟ್ ಟ್ಯಾಗ್ ಮುಕ್ತವನ್ನಾಗಿಯೇ ಸದ್ಯಕ್ಕೆ ಮುಂದುವರಿಸುವುದು ಹಾಗೂ ಆ ಪಥದಲ್ಲಿ ಸಂಚರಿಸುವ ಸ್ಥಳೀಯ ವಾಹನಗಳಿಗಷ್ಟೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ, ಉಳಿದ ಪಥದಲ್ಲಿ ಪ್ರವೇಶಿಸಿದರೆ ಫಾಸ್ಟ್ ಟ್ಯಾಗ್ ನಿಯಮದಂತೆ ಶುಲ್ಕ ಸಂಗ್ರಹಿಸಲಾಗುವುದಾಗಿ ತಿಳಿಸಿದರು.

ಈ ಮಾಹಿತಿ, ಬೆಳವಣಿಗೆಗಳ ಆಧಾರದಲ್ಲಿ ಸಭೆ ನಡೆಸಿದ ಸಂಘಟನೆಗಳ ಪ್ರಮುಖರು, ಸ್ಥಳೀಯ ವಾಹನಗಳ ಉಚಿತ ಪ್ರಯಾಣ ವ್ಯವಸ್ಥೆ ಮುಂದುವರಿಸುವ ಭರವಸೆ ನೀಡಿರುವುದರಿಂದ ಸದ್ಯ ಪ್ರತಿಭಟನೆ ನಡೆಸದಿರುವುದು, ದಿನಗಳ ನಂತರ ಭರವಸೆಯ ಹೊರತಾಗಿ ಶುಲ್ಕ ಕಡ್ಡಾಯಗೊಳಿಸಿದರೆ ಸ್ಥಳದಲ್ಲಿ ಜಮಾಯಿಸಿ ಟೋಲ್ ಸಂಗ್ರಹ ಪ್ರತಿಭಟನೆ ನಡೆಸುವುದಾಗಿ ತೀರ್ಮಾನಿಸಿದರು. ಹಾಗೆಯೆ ಹೋರಾಟ ಸಮಿತಿಯ ಪ್ರಧಾನ ಅಜೆಂಡಾ ಆಗಿರುವ ತಾತ್ಕಾಲಿಕ ನೆಲೆಯಲ್ಲಿರುವ ಸುರತ್ಕಲ್ ಟೋಲ್ ಕೇಂದ್ರವನ್ನು ಅಲ್ಲಿಂದ ತೆರವುಗೊಳಿಸುವ ಹೋರಾಟವನ್ನು ತೀವ್ರಗೊಳಿಸುವುದು, ಅದರ ಭಾಗವಾಗಿ ಸಹಭಾಗಿ ಸಂಘಟನೆಗಳೊಂದಿಗೆ ಸಮಾಲೋಚಿಸಿ ಸದ್ಯದಲ್ಲೇ ಸಾಮೂಹಿಕ ಧರಣಿಯನ್ನು ನಡೆಸುವುದೆಂದು ತೀರ್ಮಾನಿಸಿದರು.

ಟೋಲ್ ಸಂಗ್ರಹ ಗುತ್ತಿಗೆ ಸಂದರ್ಭದ ಬೆಳವಣಿಗೆಗಳನ್ನು ಚರ್ಚಿಸಿದ ಸಮಿತಿಯ ಮುಖಂಡರು, ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸಚಿವರ ಜೊತೆ ಟೋಲ್ ಕೇಂದ್ರ ತೆರವುಗೊಳಿಸುವ ಕುರಿತು ನಡೆಸಿದ ಮಾತುಕತೆಗಳಿಂದ ಯಾವುದೇ ಪ್ರಯೋಜನ ಆಗಲಾರದು ಎಂದು ಅಭಿಪ್ರಾಯ ಪಟ್ಟರು. ಈವರಗೆ ತಾತ್ಕಾಲಿಕ ನೆಲೆಯಲ್ಲಿ ಮೂರು ತಿಂಗಳ ಕಾಲಾವಧಿಗಷ್ಟೆ ಟೋಲ್ ಸಂಗ್ರಹ ಗುತ್ತಿಗೆ ನೀಡಲಾಗುತ್ತಿದ್ದರೆ, ಈ ಬಾರಿ ಕೇವಲ ವಾರಗಳ ಹಿಂದೆ ಒಂದು ವರ್ಷದ ಅವಧಿಗೆ ಟೋಲ್ ಸಂಗ್ರಹ ಗುತ್ತಿಗೆ ನೀಡಲಾಗಿದೆ. ಈ ಗುತ್ತಿಗೆ ನವೀಕರಣ, ಟೆಂಡರ್ ಪ್ರಕ್ರಿಯೆ ಜನವರಿ ತಿಂಗಳಲ್ಲಿ ನಡೆಯುತ್ತಿರುವಾಗ, ಈ ಕುರಿತು ಎಲ್ಲಾ ಮಾಹಿತಿ ಇದ್ದ ಸಂಸದರು ಗುತ್ತಿಗೆ ನವೀಕರಣ, ಟೆಂಡರ್ ಪ್ರಕ್ರಿಯೆ ತಡೆಹಿಡಿಯಲು ಅಥವಾ ಕನಿಷ್ಟ ಈ ಹಿಂದಿನಂತೆ ಮೂರು ತಿಂಗಳ ಅವಧಿಗೆ ಗುತ್ತಿಗೆ ನವೀಕರಿಸಲು ಪ್ರಯತ್ನ ಪಡದೆ ಒಂದು ವರ್ಷಗಳ ದೀರ್ಘ ಅವಧಿಗೆ ಟೋಲ್ ಗುತ್ತಿಗೆ ನೀಡಲು ಅವಕಾಶ ಕಲ್ಪಿಸಿರುವುದು ಜಿಲ್ಲೆಯ ಜನತೆಗೆ ಮಾಡಿರುವ ಘೋರ ಅನ್ಯಾಯ, ಆ ನಂತರ ಸಚಿವ ನಿತಿನ್ ಗಡ್ಕರಿಯವರನ್ನು ಸಂಸದರ ನಿಯೋಗದ ಜೊತೆಗೆ ಭೇಟಿ ಮಾಡಿರುವುದು, ತಾತ್ಕಾಲಿಕ ಟೋಲ್ ಗೇಟ್ ತೆರವಿನ ಕುರಿತು ಸಚಿವರ ಜೊತೆ ಚರ್ಚಿಸಿರುವುದಾಗಿ ಹೇಳಿಕೆ ನೀಡಿರುವುದು ಜನತೆಯನ್ನು ದಿಕ್ಕುತಪ್ಪಿಸುವ ಯತ್ನ ಹೊರತು, ಇದರಿಂದ ಮತ್ಯಾವ ಪ್ರಯೋಜನವೂ ಇಲ್ಲ. ಸಂಸದರ ಹೇಳಿಕೆಗಳ ಸರಣಿಗೆ ತೃಪ್ತರಾಗದೆ ತೀವ್ರ ರೀತಿಯ ಹೋರಾಟಗಳಿಂದಷ್ಟೆ ಸುರತ್ಕಲ್ ಟೋಲ್ ಗೇಟ್ ತೆರವು ತೀರ್ಮಾನ ಜಾರಿಯಾಗಲು ಸಾಧ್ಯ, ಆ ನಿಟ್ಟಿನಲ್ಲಿ‌ ಸಾರ್ವಜನಿಕರು, ಸ್ಥಳೀಯ ಸಂಘಸಂಸ್ಥೆಗಳು ಒಗ್ಗಟ್ಟಿನಿಂದ ಮುಂದಿನ ದಿನಗಳ ಹೋರಾಟಗಳಲ್ಲಿ ಭಾಗಿಯಾಗ ಬೇಕು ಎಂದು ಸಮಿತಿಯು ಸಾರ್ವಜನಿಕರಲ್ಲಿ ಮನವಿ ಮಾಡಿತು.

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಇದರ ಸಂಚಾಲಕ ಮುನೀರ್ ಕಾಟಿಪಳ್ಳ, ಮುಲ್ಕಿ ಅಭಿವೃದ್ದಿ ನಾಗರಿಕ ಸಮಿತಿಯ ಅಧ್ಯಕ್ಷರಾದ ಹರೀಶ್ ಪುತ್ರನ್, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ವಿವಿಧ ಸಂಘಟನೆಗಳ ಮುಖಂಡರಾದ ವಸಂತ ಬರ್ನಾಡ್, ಧನಂಜಯ ಮಟ್ಟು, ಶ್ರೀನಾಥ್ ಕುಲಾಲ್, ಅಶ್ರಫ್ ಸಫಾ, ಅದ್ದಿ ಬೊಳ್ಳೂರು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬ್ದುಲ್ ಖಾದರ್ ಹಳೆಯಂಗಡಿ, ಧನರಾಜ್ ಸಸಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments