ಸರ್ಕಾರಿ ಸಂಬಳ, ಕಾರು ಎಲ್ಲವೂ ಇದ್ರೂ ಕೆಲವು ಸರ್ಕಾರಿ ಅಧಿಕಾರಿಗಳಿಗೆ ಅದ್ಯಾಕೋ ಲಂಚದ ಮೇಲೆ ಬಹು ವ್ಯಾಮೋಹ. ಆಸೆ ಇದ್ರೆ ಓಕೆ ಅದ್ರೆ ದುರಾಸೆಯಿದ್ರೆ ಹೇಗೆ ಹೇಳಿ. ಹೌದು ದುರಾಸೆಗೆ ಬಿದ್ದ ತಹಶೀಲ್ದಾರ್ ಒಬ್ಬರೂ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ.
ಅಷ್ಟಕ್ಕೂ ಅ ತಹಶೀಲ್ದಾರ್ ಯಾರು? ಲಂಚಕ್ಕೆ ಬೇಡಿಕೆಯಿಟ್ಟಿದ್ದು ಎಷ್ಟಕ್ಕೆ? ಲಂಚ ಪಡೆದಿದ್ದು ಎಷ್ಟು..?
ಲೋಕಾಯುಕ್ತ.. ಒಂದು ಕಾಲದಲ್ಲಿ ಭ್ರಷ್ಟಾಚಾರಿಗಳ ಪಾಲಿನ ಸಿಂಹಸ್ವಪ್ನ.. ಸಾಲು ಸಾಲು ಅಕ್ರಮಗಳನ್ನ ಬಯಲಿಗೆಳೆದ ನಿಷ್ಪಕ್ಷಪಾತ ತನಿಖಾ ಸಂಸ್ಥೆ.. ರಾಜ್ಯದ ಪ್ರಭಾವಿಗಳನ್ನ ಸೆರೆವಾಸಕ್ಕೆ ತಳ್ಳಿ ಲಂಚಗುಳಿತನ ಬಗ್ಗೆ ಹೆಪ್ಪುಗಟ್ಟಿದ್ದ ಜನಾಕ್ರೋಶಕ್ಕೆ ಹೊಸ ಆಶಾಕಿರಣ.. ರಾಜಕೀಯ ಕಾರಣಕ್ಕೆ ಬಲ ಕಳೆದುಕೊಂಡಿದ್ದ ಲೋಕಾಯುಕ್ತಕ್ಕೆ ಈಗ ಮತ್ತೆ ಪವರ್ ಬಂದಿದ್ದು, ಭ್ರಷ್ಟಾಚಾರಿಗಳ ಭರ್ಜರಿ ಬೇಟೆ ಆಡ್ತಿದೆ.. ನಿನ್ನೆ ಲಂಚಕ್ಕೆ ಕೈಯೊಡ್ಡಿದ್ದ ತಹಶೀಲ್ದಾರ್ ಒಬ್ಬರು, ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದ ಉತ್ತರ ತಾಲೂಕಿನ ವಿಶೇಷ ತಹಶೀಲ್ದಾರ್!
ಬ್ರೋಕರ್ ಮೂಲಕ 10 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದ ಕೆಎಎಸ್ ಅಧಿಕಾರಿ!
ತಹಶೀಲ್ದಾರ್ ಹೆಸರು ವರ್ಷಾ ಒಡೆಯರ್. 2014ರ ಕೆಎಎಸ್ ಬ್ಯಾಚ್ನ ಅಧಿಕಾರಿ. ಈಗ ಉತ್ತರ ತಾಲೂಕಿನ ಸ್ಪೆಷಲ್ ತಹಶೀಲ್ದಾರ್ ಅಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಪಾಪ ಅದ್ಯಾಕೋ ಸರ್ಕಾರ ಕೊಡ್ತಿದ್ದ ಸಂಬಳ ಸಾಕಾಗ್ತಿರಲಿಲ್ಲ ಅನಿಸುತ್ತೆ. ಹಾಗಾಗಿ ಹಣಮಾಡೋಕೆ ಲಂಚದ ಮೂಲಕ ಅಡ್ಡದಾರಿ ಹಿಡಿದು ಈಗ ಬಲೆಗೆ ಬಿದ್ದ ಮೀನಿನ ರೀತಿ ವಿಲವಿಲ ಅಂತಿದ್ದಾರೆ.
ತಹಶೀಲ್ದಾರ್ ವರ್ಷಾ ಒಡೆಯರ್ ಪಾಲಿಗೆ ನಿನ್ನೆಯ ದಿನ ಹರ್ಷವಾಗಿ ಏನಿರಲಿಲ್ಲ. ಹಣದ ವರ್ಷಧಾರೆಯ ಆಸೆಗೆ ಬಿದ್ದ ವರ್ಷಾ ಖಾತಾದಲ್ಲಿನ ಹೆಸರು ಬದಲಾವಣೆಗೆ ಇಟ್ಟ ಬೇಡಿಕೆ ಪೆಟ್ಟು ಕೊಟ್ಟಿದೆ. ಮಧ್ಯವರ್ತಿ ರಮೇಶ್ ಮೂಲಕ 10 ಲಕ್ಷ ಹಣಕ್ಕೆ ವರ್ಷಾ ಬೇಡಿಕೆಯಿಟ್ಟಿದ್ರಂತೆ. ಇದೇ ಬ್ರೋಕರ್ನಿಂದ 5 ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಅಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

‘ಲೋಕಾ’ ಬಲೆಗೆ ಬಿದ್ದ ತಹಶೀಲ್ದಾರ್..
ಬೆಂಗಳೂರಿನ ಕೆಂಗನಹಳ್ಳಿಯ ಕಾಂತರಾಜು ಎನ್ನುವವರು, ದಾಸನಪುರದಲ್ಲಿರುವ ಜಮೀನಿನ ಖಾತೆಯ ಬದಲಾವಣೆಗೆ ತಹಶೀಲ್ದಾರ್ ಕಚೇರಿಗೆ ಬಂದಿದ್ದಾರೆ. ಖಾತದಾರರ ಹೆಸರು ಬದಲಾವಣೆಗೆ ತಹಶೀಲ್ದಾರ್ ವರ್ಷಾ, ಬ್ರೋಕರ್ ರಮೇಶ್ ಮೂಲಕ 10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ರಂತೆ. ಕಾಂತರಾಜು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ರೂ. ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದ ಲೋಕಾಯುಕ್ತ ಪೊಲೀಸರು 5 ಲಕ್ಷ ಹಣ ಪಡೆಯುವಾಗ ಬ್ರೋಕರ್ ರಮೇಶ್ ಹಾಗೂ ತಹಶೀಲ್ದಾರ್ ವರ್ಷಾರವನ್ನ ಬಲೆಗೆ ಬೀಳಿಸಿದ್ದಾರೆ.
ಉತ್ತರ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಪಂಚನಾಮೆ ಮಾಡಿದ್ರು. ಬ್ರೋಕರ್ ರಮೇಶ್ನನ್ನ ಲೋಕಾಯುಕ್ತ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ರು. ಈತ ತಹಶೀಲ್ದಾರ್ ವರ್ಷಾ ಅವರಿಗೆ ಯಾವಾಗಿನಿಂದ ಪರಿಚಯ? ಇತನಿಂದ ಬೇರೆ ಬೇರೆ ಯಾವ ಯಾವ ಪ್ರಕರಣದಲ್ಲಾದ್ರೂ ತಹಶೀಲ್ದಾರ್ ಹಣ ಪಡೆದಿದ್ರಾ? ಹೀಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ಬಯಸಿ ವಿಚಾರಣೆ ನಡೆಸುತ್ತಿದ್ದಾರೆ.
ವರ್ಷಾ ಒಡೆಯರ್, ಈ ಹಿಂದೆ ಚಾಮರಾಜನಗರ ಜಿಲ್ಲೆಯ ಯಳಂದೂರು ಹಾಗೂ ರಾಮನಗರ ಜಿಲ್ಲೆಯ ಕನಕಪುರದಲ್ಲಿ ತಹಶೀಲ್ದಾರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಕೆಲ ತಿಂಗಳ ಹಿಂದಷ್ಟೇ ಬೆಂಗಳೂರು ಉತ್ತರ ತಾಲ್ಲೂಕಿನ ವಿಶೇಷ ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಆಗಿದ್ದರು.
ಒಟ್ಟಿನಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಅಂತ ಸಂಬಳವನ್ನ ನೆಚ್ಚಿಕೊಂಡು, ಹಾಸಿಗೆ ಇದ್ದಷ್ಟೂ ಕಾಲು ಚಾಚಬೇಕಿತ್ತು. ಆದ್ರೆ, ಹಾಸಿಗೆಯನ್ನೆ ತನ್ನ ಕಾಲಿನಷ್ಟೂ ಉದ್ದಕ್ಕೆ ಎಳೆದುಕೊಳ್ಳಲು ಹೋಗಿ ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಒಳಗೆ ಹಾಕಿ ಒದ್ದು ಸರಿಯಾಗಿ ಬೆಂಡ್ ತೆಗೀರಿ.
ಇಷ್ಟು ವರ್ಷಾ ತಿಂದಿದ್ದು ಎಲ್ಲಾ ಕಕ್‌ಬೇಕು😡😡😡