ಚೆನ್ನೈ: ತಮಿಳುನಾಡು ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರು ಚಿನ್ನದ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ.
ಸಹಕಾರಿ ಬ್ಯಾಂಕ್ ಗಳಲ್ಲಿ ರೈತರು ಮತ್ತು ಬಡವರು ಅಡವಿಟ್ಟು ಪಡೆದುಕೊಂಡ ಸಾಲ ಮನ್ನಾ ಮಾಡುವುದಾಗಿ ತಮಿಳುನಾಡು ಸಿಎಂ ಪಳನಿಸ್ವಾಮಿ ಘೋಷಿಸಿದ್ದಾರೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ ನಂತರ ಸಿಎಂ ಪಳನಿಸ್ವಾಮಿ ಚಿನ್ನದ ಮೇಲಿನ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ.
ಕೊರೊನಾವೈರಸ್ ಸಂದರ್ಭದಲ್ಲಿ ಆರ್ಥಿಕತೆಯ ಪರಿಹಾರ ಕ್ರಮಗಳ ಭಾಗವಾಗಿ ತಮಿಳುನಾಡು ರಾಜ್ಯ ಅಪೆಕ್ಸ್ ಸಹಕಾರ ಬ್ಯಾಂಕ್ ಕಡಿಮೆ ಬಡ್ಡಿದರವನ್ನು ಹೊಂದಿರುವ ಚಿನ್ನದ ಸಾಲ ಯೋಜನೆಗಳನ್ನು ಪ್ರಕಟಿಸಿತ್ತು.
ವಾರ್ಷಿಕ ಶೇ.6ರಷ್ಟು ಬಡ್ಡಿದರವನ್ನು ನಿಗದಿಗೊಳಿಸಲಾಗಿತ್ತು. ಸಾರ್ವಜನಿಕರು ಈ ಸೌಲಭ್ಯದಡಿ 25,000 ದಿಂದ 1 ಲಕ್ಷದವರೆಗೂ ಸಾಲ ಪಡೆದು 3 ತಿಂಗಳ ಅವಧಿಯಲ್ಲಿ ಮರು ಪಾವತಿ ಮಾಡಬೇಕಿತ್ತು. ಇದೀಗ ತಮಿಳುನಾಡು ಸರ್ಕಾರ ಚಿನ್ನದ ಮೇಲಿನ ಸಾಲವನ್ನು ಮನ್ನಾ ಮಾಡಿದೆ.