ಮಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ, ಶಂಕಿತ ಉಗ್ರ ಮೊಹಮ್ಮದ್ ಶಾರಿಕ್‌ಗೆ ಜೈಲಿನಲ್ಲಿ ಜೀವ ಬೆದರಿಕೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಆತನಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಭದ್ರತೆ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಕುಕ್ಕರ್ ಬಾಂಬ್ ಸ್ಫೋಟಿಸಿ ಗಾಯ: ಈತ 2022ರ ನವೆಂಬರ್ 19ರಂದು ಸಂಜೆ ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಬ್ಲಾಸ್ಟ್ (ಮಂಗಳೂರು ಸ್ಫೋಟ) ಪ್ರಕರಣದ ರೂವಾರಿಯಾಗಿದ್ದ.ಮಂಗಳೂರಿನ ನಾಗುರಿಯಲ್ಲಿ ರಿಕ್ಷಾದಲ್ಲಿ ಹೋಗುತ್ತಿರುವಾಗ ಕುಕ್ಕರ್ ಬಾಂಬ್ ಸ್ಫೋಟಿಸಿ ಗಾಯಗೊಂಡಿದ್ದ. ತದ ನಂತರ ಸುಮಾರು ಒಂದು ತಿಂಗಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದ. ಅಲ್ಲಿಂದ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಆತನನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗೂ ಒಳಪಡಿಸಲಾಗಿತ್ತು. ಆದರೆ, ಪರಪ್ಪನ ಅಗ್ರಹಾರ ಜೈಲಿಗೆ ಹೋದ ಬಳಿಕ ಆತನಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ. ಇದು ಆಂತರಿಕವೋ, ಹೊರಗಿನಿಂದಲೋ ಎನ್ನುವುದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದರೂ ಆತನಿಗೆ ಅಪಾಯ ಇರುವ ಬಗ್ಗೆ ಗುಪ್ತಚರ ಇಲಾಖೆ ಮತ್ತು ಎನ್ ಐಎ ಅಧಿಕಾರಿಗಳಿಂದ ಮಾಹಿತಿ ದೊರಕಿದ್ದು ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎನ್ನಲಾಗಿದೆ.
ಸಿಬ್ಬಂದಿಯಿಂದ ಭದ್ರತೆ ವ್ಯವಸ್ಥೆ: ಆತನನ್ನು ಇನ್ನೂ ಅನಾರೋಗ್ಯಪೀಡಿತನೆಂದೇ ಪರಿಗಣಿಸಿ ಆಸ್ಪತ್ರೆಯ ವಾರ್ಡ್‌ನ ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿದೆ. ಇಲ್ಲಿ ಮೂರು ಪಾಳಿಯಲ್ಲಿ ಶಾರಿಕ್ ಗೆ ನಾಲ್ವರು ಜೈಲು ಸಿಬ್ಬಂದಿಯಿಂದ ಭದ್ರತೆ ವ್ಯವಸ್ಥೆ ಮಾಡಲಾಗಿದೆ.ಚೀಫ್ ಸೂಪರಿಂಟೆಂಡೆಂಟ್ ಮತ್ತು ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ ಬಿಟ್ಟು ಯಾರಿಗೂ ಬ್ಯಾರಕ್ ಬಳಿ ಪ್ರವೇಶವಿಲ್ಲ. ಶಾರಿಕ್ ಸ್ನೇಹಿತರಾದ ಮಾಜ್, ಯಾಸಿನ್ ಸೇರಿ ಆರು ಮಂದಿಯನ್ನು ಮಾತ್ರ ಜೈಲಿನ ಒಳಗೆ ಇಡಲಾಗಿದೆ. ಶಾರಿಕ್‌ನಿಗೆ ದೈಹಿಕ ಭದ್ರತೆಯ ಜೊತೆಗೆ ಸಿಸಿಟಿವಿ ಕಣ್ಗಾವಲಿನಲ್ಲಿ ನಿಗಾ ಇಡಲಾಗಿದೆ.
ಜೈಲಾಧಿಕಾರಿಗಳ ಚಿಂತನೆ: ಶಾರಿಕ್‌ಗೆ ಮತ್ತೆ ಚರ್ಮದ ನೋವಿನ ಸಮಸ್ಯೆ ಕಾಣಿಸಿಕೊಂಡಿದ್ದು,ಪ್ರತಿನಿತ್ಯ ಆತನ ಆರೋಗ್ಯವನ್ನು ಗಮನಿಸಲಾಗುತ್ತಿದೆ. ಸ್ಕಿನ್ ಸ್ಪೆಷಲ್ ಸರ್ಜನ್ ನಿಂದ ಚಿಕಿತ್ಸೆ ನೀಡಲಾಗುತ್ತಿದೆ.ಚಿಕಿತ್ಸೆ ಮುಂದುವರಿಸಲಾಗಿದೆ. ಆತನಿಗೆ ಇನ್ನೂ ಹದಿನೈದು ದಿನ ಜೈಲಿನ ವಾರ್ಡ್ ನಲ್ಲೇ ಚಿಕಿತ್ಸೆ ಇದ್ದು, ಗಾಯದ ಸಮಸ್ಯೆ ಗುಣವಾಗದಿದ್ದರೆ ಮತ್ತೆ ವಿಕ್ಟೋರಿಯಾ ಬರ್ನ್ಸ್ ವಾರ್ಡ್ ಗೆ ಶಿಫ್ಟ್ ಮಾಡುವ ಬಗ್ಗೆಯೂ ಜೈಲಾಧಿಕಾರಿಗಳ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.
Better to kill him or hang him.
Kill him or do it with hanging. Don’t vest public money