Wednesday, May 31, 2023
Homeಕರಾವಳಿಬೆಳ್ತಂಗಡಿಯಲ್ಲಿ 'ತಾಂಟ್ ರೇ ಬಾ ತಾಂಟ್' ಗುರಾಯಿಸಿದ್ದಕ್ಕೆ ಇಬ್ಬರಿಗೆ ಹಲ್ಲೆಗೈದು ಅಮಾನವೀಯ ವರ್ತನೆ...!!!

ಬೆಳ್ತಂಗಡಿಯಲ್ಲಿ ‘ತಾಂಟ್ ರೇ ಬಾ ತಾಂಟ್’ ಗುರಾಯಿಸಿದ್ದಕ್ಕೆ ಇಬ್ಬರಿಗೆ ಹಲ್ಲೆಗೈದು ಅಮಾನವೀಯ ವರ್ತನೆ…!!!

- Advertisement -


Renault

Renault
Renault

- Advertisement -

ಬೆಳ್ತಂಗಡಿ: ಸುಮಾರು 25ಕ್ಕಿಂತಲೂ ಅಧಿಕ ಜನರ ತಂಡ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಸುದೇಮುಗೇರು ನಿವಾಸಿ ಮಹಮ್ಮದ್ ಅಲ್ತಫ್ (21) ಹಲ್ಲೆಗೊಳಗಾಗಿದ್ದು, ಸುಮಾರು 25 ರಿಂದ 30 ಜನರ ವಿರುದ್ಧ ದೂರು ನೀಡಿದ್ದಾರೆ‌.

ಮಹಮ್ಮದ್ ಅಲ್ತಫ್ ಉಜಿರೆ ಎಂಪಾಯರ್ ಹೋಟೆಲ್ ನಲ್ಲಿ ಜ್ಯೂಸ್ ಮೆಕರ್ ಆಗಿ ಕೆಲಸ ಮಾಡಿಕೊಂಡಿದ್ದು, ಒಂದು ವಾರದ ಹಿಂದೆ ಹೋಟೆಲ್ ಗೆ ಬಂದ ಗಿರಾಕಿಗಳಲ್ಲಿ ಕೆಲವರು ಗುರಾಯಿಸಿ ನೋಡಿದ್ದು, ಅವರಲ್ಲಿ ನೀನು ಯಾಕೆ ನನ್ನನ್ನು ಗುರಾಯಿಸಿ ನೋಡಿದ್ದಿ ಎಂದು ಕೇಳಿದಾಗ ಅವರಲ್ಲಿ ಒಬ್ಬನು “ತಾಂಟ್ ರೇ ಬಾ ತಾಂಟ್” ಎಂಬುದಾಗಿ ಹೇಳಿ ಹೋಗಿದ್ದು, ಪುಃನ ಎರಡು ದಿನದ ಹಿಂದೆ ಅದೇ ವ್ಯಕ್ತಿ ಅಲ್ತಾಪ್ ನನ್ನು ಗುರಾಯಿಸಿ ನೋಡಿ ಆತನ ಜೊತೆಯಲ್ಲಿದ್ದ ಇತರರಿಗೆ ತೋರಿಸಿ ಈತನನ್ನು ನೋಡಿಕೊಳ್ಳಿ ಎಂದು ಹೇಳಿದ್ದನು.

ಅದೇ ದಿನ ರಾತ್ರಿ ಉಜಿರೆ ಎಂಪಾಯರ್ ಹೋಟೆಲ್ ನಿಂದ ಪಾರ್ಸೇಲೆ ಕೊಂಡು ಹೋಗಿ ಮರಳಿ ಬರುತ್ತಿದ್ದಾಗ ಉಜಿರೆ ದ್ವಾರದ ಬಳಿ ತಲುಪಿದಾಗ ಈ ಹಿಂದೆ ಗುರಾಯಿಸಿ ನೋಡಿದ ವ್ಯಕ್ತಿಗಳು ಹಾಗೂ ಆತನ ಜೊತೆಯಲ್ಲಿದ್ದ 25-30 ಜನ ಅಲ್ತಾಪ್ ನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತ ಓರ್ವನ ಕೈಲ್ಲಿದ್ದ ಪೆಪ್ಸಿ ಬಾಟಲಿನಿಂದ ಅಲ್ತಾಪ್ ನ ಹಣೆಗೆ ಹೊಡೆದು ಉಳಿದವರು ಕೈಯಿಂದ ಹಲ್ಲೆ ಮಾಡಿದ್ದಾರೆ ಎಂದು ಅಲ್ತಾಪ್ ಆರೋಪಿಸಿದ್ದಾರೆ. ಬಿಡಿಸಲು ಬಂದ ಅಲ್ತಾಪ್ ಸಹೋದರ ಮಹಮ್ಮದ್ ಅಶ್ರಫ್ ರವರಿಗೂ ಹೆಲ್ಮಟ್ ನಿಂದ ಬಲಬದಿ ಬೆನ್ನಿಗೆ ಹಲ್ಲೆ ಮಾಡಿ ಕಾಲಿನಿಂದ ತುಳಿದು, ಹಲ್ಲೆ ಮಾಡಿದ್ದು, ಅವರಿಗೂ ಗಾಯವಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments